ಕನಸಾಗಿ ಉಳಿದಿದ್ದ ಬಾಗಲಕೋಟೆ-ಕುಡುಚಿ ರೈಲು ಮಾರ್ಗ ಸರ್ವೆಗೆ ವಿನೂತನ ತಂತ್ರಜ್ಞಾನ ಬಳಕೆ…!!!

ಕನಸಾಗಿ ಉಳಿದಿದ್ದ ಬಾಗಲಕೋಟೆ-ಕುಡುಚಿ ರೈಲು ಮಾರ್ಗ ಸರ್ವೆಗೆ ವಿನೂತನ ತಂತ್ರಜ್ಞಾನ ಬಳಕೆ


ಹಲವು ದಶಕಗಳಿಂದ ಜಿಲ್ಲೆಯ ಜನರ ಕನಸಾಗಿ ಉಳಿದಿದ್ದ ಬಾಗಲಕೋಟೆ-ಕುಡುಚಿ ರೈಲು ಮಾರ್ಗ ನನಸಾಗುವ ದಿಸೆಯಲ್ಲಿ ಸಾಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ರೈಲು ಮಾರ್ಗ ನಿರ್ಮಾಣ ಮಾಡಲು ಪ್ರಾರಂಭಗೋಳಿಸಿತ್ತು ಆದರೆ ಹಲವು ಕಾರಣಗಳಿಂದ ಬಾಗಲಕೋಟೆ ನಗರದಿಂದ ಖಜ್ಜಿಡೋಣಿವರಗೆ ಮಾತ್ರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಇನ್ನು ಮುಧೋಳ,ಜಮಖಂಡಿ,
ರಬಕವಿ ಬನಹಟ್ಟಿ,ಅಥಣಿ ತಾಲ್ಲೂಕುಗಳ ಭಾಗದಲ್ಲಿ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುವುದು ವಿಷಾದನೀಯ. ಈಗಾಗಲೇ ಅರ್ಧ ಕಾಮಗಾರಿ ಪೂರ್ಣಗೊಂಡದ್ದು ಇನ್ನುಳಿದ ಭಾಗವನ್ನು ರೈಲು ಮಾರ್ಗವನ್ನು ನಿರ್ಮಾಣ ಮಾಡಲು ಇಂದು ರಬಕವಿ ಬನಹಟ್ಟಿ ತಾಲ್ಲೂಕಿನ ಜಗದಾಳ ಗ್ರಾಮದ ಸಮೀಪ ಆಧುನಿಕ ತಂತ್ರಜ್ಞಾನ ಬಳಸಿ ಸರ್ವೆ ಮಾಡುವ ದೃಶ್ಯ ಕಂಡುಬಂತು. ಆದಷ್ಟು ಬೇಗ ಜಮಖಂಡಿ ವಿಭಾಗದ ಜನರ ರೈಲು ಮಾರ್ಗ ನಿರ್ಮಾಣ ಕನಸು ನನಸಾಗಲಿ ಎಂಬದು ಎಲ್ಲರ ಆಶಯ.


ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend