ಬಿಜೆಪಿ ಸೋಲದೆ ರಾಜ್ಯ ಮತ್ತು ದೇಶಕ್ಕೆ ಭವಿಷ್ಯವಿಲ್ಲ ಎಂದು ವೀರಣ್ಣ ಎಚ್ ಹೇಳಿಕೆ………
ಹರಪನಹಳ್ಳಿ : – ರಾಜ್ಯದಲ್ಲಿ ಮೌಲ್ಯಾಧಾರಿತ ರಾಜಕಾರಣವನ್ನು ಮುಂದುವರೆಸುವ ಸಲುವಾಗಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 24 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಹೆಚ್.ಎಂ.ಸಂತೋಷ್ ಹೇಳಿದರು
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದ ವೇಳೆ ಕುತಂತ್ರ ನೀತಿಯಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇಂತಹ ಸಂವಿಧಾನ ವಿರೋಧಿ ನಡೆಗಳನ್ನು ಖಂಡಿಸಿ, ನಮ್ಮ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಲು ಪಕ್ಷದ ರಾಜ್ಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗಳು ಎಂದು ಸಧ್ಯದಲ್ಲಿ ತಿಳಿಸಲಾಗುತ್ತದೆ.
ಜಿಲ್ಲಾ ಕಾರ್ಯದರ್ಶಿ ವೀರಣ್ಣ ಹೆಚ್ ಮಾತನಾಡಿ
ಬಿಜೆಪಿ ಸೋಲದೆ ರಾಜ್ಯ ಮತ್ತು ದೇಶಕ್ಕೆ ಭವಿಷ್ಯವಿಲ್ಲ. ತಪ್ಪಾದ ಆರ್ಥಿಕ ನೀತಿಯನ್ನು ರಾಜ್ಯ ಹಾಗೂ ಕೇಂದ್ರದಲ್ಲಿ ಅನುಸರಿಸುತ್ತಿದ್ದು, ದೇಶದ ಬಹುಪಾಲು ಆಸ್ತಿ ಕೆಲವೇ ಬಂಡವಾಳ ಶಾಹಿಗಳ ಪಾಲಾಗುತ್ತಿದೆ. ಹಾಗಾಗಿ ಬಲಪಂಥೀಯ, ಫ್ಯಾಸಿಸ್ಟ್ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಎಲ್ಲಾ ಜಾತ್ಯತೀತ, ಪ್ರಜಾಪ್ರಭುತ್ವವಾದಿ ಮತ್ತು ಎಡ ಪಕ್ಷಗಳು ಸೇರಿ ರಾಜಕೀಯ ರಂಗ ನಿರ್ಮಿಸಿ ಬಿಜೆಪಿಯನ್ನು ಸೋಲಿಸಲು ಕರೆ ನೀಡಲಾಗುವುದು ಎಂದರು.
ಜಿಲ್ಲಾ ಸಹಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ರಾಜ್ಯದಲ್ಲಿ ೫೦ ಲಕ್ಷ ಕುಟುಂಬಗಳು ವಸತಿಹೀನರಾಗಿದ್ದಾರೆ. ವಸತಿ ಮತ್ತು ನಿವೇಶನಕ್ಕಾಗಿ ಆಗ್ರಹಿಸಿ ವಿಧಾನಸಭಾ ಬೆಂಗಳೂರು ಚಲೋ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು., ತಾಲ್ಲೂಕಿನ ರಸ್ತೆಗಳು ಗುಂಡಿ ಧೂಳಿನಿಂದ ಗಬ್ಬದ್ದು ಹೋಗಿದೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಇತ್ತ ಮುಖ ಮಾಡುತ್ತಿಲ್ಲ ಯಾಕೆ ಎಂದು ಗೊತ್ತಿಲ್ಲ.
ಈ ಸಂದರ್ಭದಲ್ಲಿ ಜಿಲ್ಲಾ ಸಹಾಯ ಕಾರ್ಯದರ್ಶಿ ಹಲಗಿ ಸುರೇಶ್, ರೇಣುಖಾ ಕೆ ಗಜಾಪುರ, ರಮೇಶ್ ನಾಯ್ಕ ಕೊಟ್ರಯ್ಯ ,ಪುಷ್ಪ ಚಂದ್ರನಾಯ್ಕ,ಬಳಿಗನೂರು ಕೋಟ್ರೇಶ್, ದೊಡ್ಡ ಬಸವರಾಜ ಇತರರು ಇದ್ದರು…

ವರದಿ. ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
