ಸಮಾಜದ ಮಹಾ ಪುರುಷರನ್ನು ಸದಾ ನೆನೆಯಬೇಕು: ಡಾ.ಎಚ್ ಎನ್ ಗೋಪಾಲ ಕೃಷ್ಣ
ಸಮಾಜದ ಮಹಾನ್ ಪುರುಷರನ್ನು ನಾವು ಸದಾ ನೆನೆಯಬೇಕು. ಜಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲ ಕೃಷ್ಣ ಅವರು ತಿಳಿಸಿದರು.
ಅವರು ಇಂದು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೌಢ್ಯವನ್ನು ಹೋಗಲಾಡಿಸಿ ಸಮ-ಸಮಾಜ ನಿರ್ಮಾಣ ಮಾಡುವಲ್ಲಿ ಕನಕದಾಸರ ಪಾತ್ರ ಅಪಾರ. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಾರ್ವಜನಿಕರಿಗೆ ಸದಾ ಮೌಲ್ಯಗಳ ಬಗ್ಗೆ ತಿಳಿಸುತ್ತಿದ್ದರು ಎಂದರು.
ಸರ್ಕಾರ ಪುಣ್ಯ ಪುರುಷರ ಜಯಂತಿಗಳನ್ನು ಆಚರಣೆ ಮಾಡಲು ಅವಕಾಶ ಮಾಡಿಕೊಟ್ಟಿದೆ ಜೊತೆಗೆ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಂದೇ ಎಂದೂ ಜಯಂತಿಗಳನ್ನ ಆಚರಣೆ ಮಾಡುತ್ತ ಬಂದಿದೆ.ಕನಕದಾಸರು ದಾಸ ಸಾಹಿತ್ಯಕ್ಕೆ ಹಲವಾರು ಸಾಹಿತ್ಯ ನೀಡಿ ಕೊಡುಗೆಯನ್ನ ನೀಡಿದ್ದಾರೆ ಎಂದು ಹೇಳಿದರು.
ಕನಕದಾಸರು ನಾಡಿಗೆ, ಸಂಸ್ಕೃತಿಗೆ ಹಾಗೂ ಸಮಾಜಕ್ಕೆ ಮೌಲ್ಯಯುತ ಕೊಡುಗೆಯನ್ನು ಬಿಟ್ಟು ಹೋಗಿದ್ದಾರೆ. ಅಂತಹ ಮಹಾನ್ ವ್ಯಕ್ತಿಯನ್ನು ನೆನೆಯಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಕನಕದಾಸರು ೧೫ನೇ ಶತಮಾನದಲ್ಲಿಯೇ ಜಾತಿ-ಬೇಧ, ವರ್ಣಬೇಧ ಮೂಡನಂಬಿಕೆಗಳನ್ನು ವಿರೋಧಿಸುತ್ತಿದ್ದರು. ಸಾಮಾನ್ಯ ನಾಗರೀಕರಿಗೂ ಸರಳವಾಗಿ ಅರ್ಥವಾಗುವಂತೆ ತಮ್ಮ ಕೀರ್ತನೆಗಳ ಮೂಲಕ ಮೌಲ್ಯಾಧಾರಿತ ವಿಚಾರಗಳನ್ನು ಸಾರಿದರು ಎಂದು ತಿಳಿಸಿದರು.
೧೫ನೇ ಶತಮಾನದಲ್ಲಿ ಬಂದು ಹೋದಂತಹ ಕನಕದಾಸರು ಯಾರು ಮೇಲಲ್ಲ- ಯಾರು ಕೀಳಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ದಾಸ ಶ್ರೇಷ್ಠರಾಗಿ, ಪುರಂದರದಾಸರ ಸಮಕಾಲೀನರಾಗಿ, ವ್ಯಾಸರಾಯರ ಶಿಷ್ಯರಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದರು ಎಂದರು.
ಭಾಷಾ ಸಾಹಿತ್ಯದ ಮೂಲಕ ಒಬ್ಬ ಉತ್ತಮ ವಚನಕಾರರಾಗಿ, ಶ್ರೇಷ್ಠ ಕೀರ್ತನಕಾರರಾಗಿ ಹೊರ ಹೊಮ್ಮಿದ ಹೆಗ್ಗಳಿಕೆ ಇವರದಾಗಿದೆ. ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡರೆ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಜೊತೆಗೆ ಅವರ ಮೌಲ್ಯಾಧಾರಗಳನ್ನು ಅಳವಡಿಸಿಕೊಂಡರೆ ಅದೇ ಅವರಿಗೆ ನಾವು ನೀಡುವ ದೊಡ್ಡ ಗೌರವ ಎಂದರು.
ಕನಕದಾಸರು ಹಲವಾರು ಗ್ರಂಥಗಳನ್ನು ರಚಿಸುವ ಮೂಲಕ ಕನ್ನಡ ಸರಸ್ವತ ಲೋಕಕ್ಕೆ ಹಾಗೂ ದಾಸ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಂತಹವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕನ್ನಡ ಸಹಾಯಕ ಪ್ರಾಧ್ಯಾಪಕರು ಮತ್ತು ಜನಪರ ಚಿಂತಕರಾದ ಡಾ.ಎ. ಮಹೇಶ್ ಚಿಕ್ಕಲೂರು ಅವರು ಮಾತನಾಡಿ, ಮಹಾನ್ ನಾಯಕರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ಇದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.
ಒಬ್ಬ ಮಹಾನ್ ವ್ಯಕ್ತಿಯ ಎಂದರೆ ಅವರ ವ್ಯಕ್ತಿತ್ವವನ್ನು, ಅಸ್ತಿತ್ವವನ್ನು, ಕನ್ನಡತ್ವವನ್ನು ನಾವುಗಳು ಅನುಸರಿಸಿಕೊಳ್ಳುವುದೇ ಜಯಂತಿ ಎಂದರು.
೧೫-೧೬ನೇ ಶತಮಾನದಲ್ಲಿ ೨೫೦ ದಾಸರಿರುತ್ತಾರೆ. ಆದರೆ, ಈ ಪೈಕಿ ಸೂದ್ರ ದಾಸರು ಇವರೊಬ್ಬರೇ ಒಬ್ಬರು. ಇವರು ೩೧೪ ಕೀರ್ತನೆಗಳನ್ನು ರಚಿಸಿ ಸಮಾಜದ ಸುಧಾರಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ. ಇಂತಹ ಮಹಾನ್ ಪುರುಷರನ್ನು ನೆನೆಯಬೇಕು…

ವರದಿ. ಸುರೇಶ್, ಎಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
