;

ಆಟೋ ಚಾಲಕರಿಂದ ಶಂಕರ್ ನಾಗ್ ರವರ ಜನ್ಮದಿನಾಚರಣೆ…!!!

ಆಟೋ ಚಾಲಕರಿಂದ ಶಂಕರ್ ನಾಗ್ ಜನ್ಮದಿನಾಚರಣೆ

ಕೂಡ್ಲಿಗಿ: ಆಟೋ ಚಾಲಕರಿಗೂ ಉಜ್ವಲ ಭವಿಷ್ಯವಿದೆ ಎಂದು ಬೆಳ್ಳಿತೆರೆಯ ಮೂಲಕ ಪರಿಚಯಿಸಿದವರು ದಿ.ಶಂಕರ್ ನಾಗ್ ಎಂದು ಕಸಾಪ ಅಧ್ಯಕ್ಷ ವೀರೇಶ್ ಅಂಗಡಿ ಹೇಳಿದರು. ಪಟ್ಟಣದ ಮದಕರಿ ವೃತ್ತದ ಬಳಿ ಆಟೋ ನಿಲ್ದಾಣದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ತಾಲೂಕು ಘಟಕದ ವತಿಯಿಂದ ಬುಧವಾರ ಶಂಕರ್ ನಾಗ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಟೋ ಚಾಲಕರು ಸಮಾಜದಲ್ಲಿ ತಮ್ಮದೇ ಶೈಲಿಯಲ್ಲಿ ಸೇವೆ ಮಾಡುತ್ತಿದ್ದಾರೆ. ಗರ್ಭಿಣಿ, ವೃದ್ದರು ಸೇರಿದಂತೆ ಅಶಕ್ತರ ಪಾಲಿನ ದೇವರುಗಳು ಎಂದರೆ ತಪ್ಪಲ್ಲ,ಎಲ್ಲಾದರೂ ಅಪಘಾತವಾದರೂ ರಕ್ಷಣೆಗೆ ಮುಂದಾಗುವ ಸಾಲಿನಲ್ಲಿ ಮೊದಲಿಗರು,ಅಲ್ಲದೆ ತುರ್ತು ಸಂಧರ್ಭದಲ್ಲಿ ರಕ್ತದ ಅವಶ್ಯಕತೆ ಇದ್ದಾಗ ಮೊದಲು ನೆನಪಾಗುವುದು ಆಟೋ ಚಾಲಕರೆ.ಇಂಥಾಹ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನ ತೊಡಗಿಸಿ ಕೊಂಡು, ತಮ್ಮ ಕುಟುಂಬದ ಜವಾಬ್ದಾರಿಯನ್ನ ಸಹ ಅಷ್ಟೆ ಸರ್ಮಥವಾಗಿ ಎದುರಿಸುವ ಕರುಣಾಮಯಿಗಳು ಆಟೋಚಾಲಕರು ಎಂದು ಹೇಳಿದರು. ಆಟೋಚಾಕರ ಸಂಘದ ತಾಲೂಕು ಅಧ್ಯಕ್ಷ ಮಯೂರ ಮಂಜುನಾಥ ಮಾತಾನಾಡಿ,ನಾವೇಲ್ಲರು ಮೊದಲು ಶಿಸ್ತನ್ನು ರೂಢಿಸಿಕೊಳ್ಳಬೇಕು. ಯಾರೇ ಗ್ರಾಹಕರು ಬಂದರು ಮೊದಲು ಸೌಜನ್ಯದಿಂದ ಅವರನ್ನು ಹೇಳಿದ ಸ್ಥಳಕ್ಕೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಯಾವುದೇ ರೀತಿಯ ಅಗೌರವನ್ನು ನಾವುಗಳು ಪ್ರಯಾಣಿಕರ ಮೇಲೆ ತೋರದೆ,ಅವರಿಗೆ ಉತ್ತಮ ಸೇವೆಯನ್ನ ಒದಗಿಸಿ ಶಂಕರ್ ನಾಗ್ ಅವರ ಹೆಸರನ್ನ ಉಳಿಸುವ ನಿಟ್ಟಿನಲ್ಲಿ ನಾವುಗಳು ನಡೆದುಕೊಂಡು ಉತ್ತಮ ಸಮಾಜದ ನಿರ್ಮಾತೃಗಳು ಎನಿಸಿಕೊಳ್ಳೊಣ ಎಂದು ತಿಳಿಸಿದರು. ಶಂಕರ್ ನಾಗ್ ಅತ್ಯಂತ ದೂರದೃಷ್ಟಿ ಹೊಂದಿರುವ ಕಲಾವಿದರಾಗಿದ್ದರು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಯವರಿಗೆ ಆ ಕಾಲದಲ್ಲಿಯೇ ಫ್ಲೈಓವರ್ ಹಾಗೂ ಮೆಟ್ರೋ ರೈಲಿನ ಪರಿಕಲ್ಪನೆಯನ್ನು ತಿಳಿಸಿದ್ದರು ಎಂದರು.ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಕೆ.ಎಂ.ವೀರೇಶ್ ಮಾತಾನಾಡಿದರು. ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್ಸ್( ರಿ ) ತಾಲೂಕು ಸಮಿತಿ ಗೌರವಾಧ್ಯಕ್ಷ, ಶಿವಮೂರ್ತಿ ಉಪಾಧ್ಯಕ್ಷರುಗಳಾದ ಇಸ್ಮಾಯಿಲ್, ಗಜ ನಾಗರಾಜ್, ಯು. ನಾಗರಾಜ್, ಪ್ರಶಾಂತ್, ಜಿಂಕಲ್ ನಾಗೇಶ್, ಬಿ. ಬಸವರಾಜ್, ಕೆ.ಬಿ. ಅಂಜನಪ್ಪ, ಗಲ್ಲೆ ನಾಯಕ್, ದಾದು, ಮಲ್ಲಿಕಾರ್ಜುನ, ಆಬಿದ್, ಶಫಿ, ಸುಭಾಷ್ ಗಜ ನಾಗರಾಜ್,ಚೌಡಪ್ಪ, ಬಣಕಾರ್ ನಾಗರಾಜ್, ಗೋವಿಂದಪ್ಪ, ಟೈಗರ್ ದುರ್ಗಪ್ಪ, ಎಂ. ರಮೇಶ್, ಗಿರೀಶ್, ರಮೇಶ್, ವಿಜಯಕುಮಾರ್, ಹೆಚ್. ಹನುಮಂತಪ್ಪ, ಪ್ರಕಾಶ್, ಕೆ.ಬಿ.ಮಾರೇಶ್ ಸೇರಿದಂತೆ ಅನೇಕರು ಇದ್ದರು.

ವರದಿ : c ಅರುಣ್ ಕುಮಾರ್ ಜುಮ್ಮೊಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;