;

ಶ್ರೀಯುತ ಹಾಲಪ್ಪ( ಹಾಚಿ) ಚೀಗಟೇರಿ& ಕು.ಕಾರ್ತಿಕ್ ಆಚಾರ್ಯ ಇವರಿಗೆ ಒಲಿದ ಕನ್ನಡ ರತ್ನ ಪ್ರಶಸ್ತಿ…!!!

ಶ್ರೀಯುತ ಹಾಲಪ್ಪ( ಹಾಚಿ) ಚೀಗಟೇರಿ& ಕು.ಕಾರ್ತಿಕ್ ಆಚಾರ್ಯ ಇವರಿಗೆ ಒಲಿದ ಕನ್ನಡ ರತ್ನ ಪ್ರಶಸ್ತಿ. ವಿಜಯನಗರ ಜಿಲ್ಲೆಯ
ಕನ್ನಡ_ರತ್ನ_ಪುರಸ್ಕಾರ_ ಸಮಾರಂಭ

ದಿನಾಂಕ:-06/11/2022 ರಂದು ಹೊಸಪೇಟೆಯಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಕವಿಗೋಷ್ಠಿ ಮತ್ತು ಸಾಧಕರ ಸನ್ಮಾನ ಸಂಧರ್ಭದಲ್ಲಿ ಕನ್ನಡ ಸಾಹಿತ್ಯ ಸಂಘಟನಾ ಸೇವೆ ಗುರುತಿಸಿ
ಕನ್ನಡ_ರತ್ನ_ಪ್ರಶಸ್ತಿಯನ್ನು ಅನೇಕ ಗಣ್ಯರಿಗೆ
ನೀಡಿ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿಯ ಕನ್ನಡ ಸಾಹಿತಿಗಳಾದ ಹಾಲಪ್ಪ ಚೀಗಟೇರಿ ಅವರ ಅನೇಕ ವರ್ಷಗಳಿಂದ ಸಾಹಿತ್ಯಿಕವಾಗಿ, ಸಂಘಟನಾತ್ಮಕವಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದು ಅನೇಕ ಉದಯೋನ್ಮುಖ ಕವಿಗಳನ್ನು ಬೆಳೆಸುತ್ತಾ ಬಂದಿದ್ದಾರೆ ಈ ಅನುಪಮ ಸೇವೆಯನ್ನು ಗುರುತಿಸಿ ಇಂದು ಸಾಧಕ ರತ್ನ ಪ್ರಶಸ್ತಿ ಪುರಸ್ಕರಿಸಿ ಗೌರವಿಸಲಾಗಿದೆ. ಮತ್ತು ಎಮ್.ಕಲ್ಲಹಳ್ಳಿಯ ಕು.ಕಾರ್ತಿಕ್ ಆಚಾರ್ಯ ರ ಕನ್ನಡದ ಅನುಪಮ ಸಾಹಿತ್ಯ ಸೇವೆಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ_ರತ್ನ_ಪ್ರಶಸ್ತಿ ನೀಡಿದ
ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ,ಸಾಧಕರ ಶ್ರೀ ಮಾತಾ ಪ್ರಕಾಶನ ಸಂಸ್ಥಾಪಕರಾದ ಶ್ರೀ ಡಾ” ನಾಗರಾಜ ತಂಬ್ರಹಳ್ಳಿ ಇವರಿಗೆ ಧನ್ಯವಾದಗಳನ್ನು ತಿಳಿಸಿದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;