;

ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳಿಂದ ಒಕ್ಕೂಟ ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಅವರಿಗೆ ಮನವಿ ಸಲ್ಲಿಸಲಾಯಿತು…!!!

ಇವತ್ತು ದಿನಾಂಕ 06/11/2022 ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ
ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟ
ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಅವರಿಗೆ ಮನವಿ ಸಲ್ಲಿಸಲಾಯಿತು.
ನ್ಯಾ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡುವಂತೆ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಬೆಳಗಾವಿ ಸುವರ್ಣ ಸೌಧದ ಎದುರು ಧರಣಿ ಸತ್ಯಾಗ್ರಹ ಮತ್ತು ಮಾದಿಗರ ಬೃಹತ್ ಬೈಕ್ ಜಾಥಾ ಐತಿಹಾಸಿಕ ಹೋರಾಟಕೆ ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರ್ ಸ್ವಾಮಿ ರವರಿಗೆ ಸದನದಲ್ಲಿ ಒಳ ಮೀಸಲಾತಿ ಬಗ್ಗೆ ಚರ್ಚೆ ಮಾಡುವಂತೆ ಜೆಡಿಎಸ್ ರಾಜ್ಯಾಧ್ಯಕ್ಷರಾದ. ಸಿ ಎಂ ಇಬ್ರಾಹಿಂ ರವವರಿಗೆ ಮನವಿ ಮಾಡಲಾಯಿತು. ಇದೆ ಸಂದರ್ಭದಲ್ಲಿ 36 ಮೀಸಲು ಕ್ಷೇತ್ರಗಳಲ್ಲಿ ಕನಿಷ್ಠ 10 ಕ್ಷೇತ್ರಗಳನ್ನು ಮಾದಿಗ ಸಮುದಾಯದವರಿಗೆ ಸ್ಪರ್ಧಿಸಾಲು ಟಿಕೆಟ್ ನೀಡಲು ಒತ್ತಾಯಿಸಲಾಯಿತು.ಇದೆ ಸಂದರ್ಭದಲ್ಲಿ ಕುಡುಚಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಶ್ರೀ ರಾಜೇಂದ್ರ ಐಹೊಳೆ ರವರಿಗೆ ನೀಡಬೇಕೆಂದು ಇದೆ ಸಂದರ್ಭದಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟ ಅಧ್ಯಕ್ಷರಾದ ಶ್ರೀ ಮುತ್ತಣ ವೈ ಬೆನ್ನೂರ
ಕಾರ್ಯದಕ್ಷರಾದ ಚಂದ್ರಕಾಂತ್ ಎಸ್ ಕಾದ್ರೋಳಿ
ಪ್ರಧಾನ ಸಂಚಾಲಕರಾದ ಎಸ್.ಆರ್.ರಂಗನಾಥ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಜಿತ ಮಾದರ
ಹಾಗೂ ವಿನಾಯಕ ಮೈಶಾಳೆ ,ಮಿಲಿಂದ ಐಹೊಳೆ ಮೆಹಬೂಬ್ ಆಲನ್,ವೆಂಕಟೇಶ್ ದೇಮಣ್ಣವರ್ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ವರದಿ.ವಿನಾಯಕ ಮೈಶಾಳೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;