;

ನಾಡಗೌಡರ ನಡೆ ಸಾಧನೆ ಕಡೆ ಶಾಸಕರಿಗೆ ಅದ್ದೂರಿ ಸ್ವಾಗತ…!!!

ನಾಡಗೌಡರ ನಡೆ ಸಾಧನೆ ಕಡೆ ಶಾಸಕರಿಗೆ ಅದ್ದೂರಿ ಸ್ವಾಗತ.

ಸಿಂಧನೂರ:ನ.5 ನಾಡಗೌಡರ ನಡೆ ಸಾಧನೆಯ ಕಡೆ ಗ್ರಾಮ ವ್ಯಾಸ್ತವ ಕಾರ್ಯಕ್ರಮಕ್ಕೆ ಹಳ್ಳಿಗಳಲ್ಲಿ ಜನರು ಅಭೂತಪೂರ್ವ ಸ್ವಾಗತ ಕೋರುವ ಮೂಲಕ ಶಾಸಕ ವೆಂಕಟರಾವ ನಾಡಗೌಡರನ್ನು ಬರಮಾಡಿಕೊಂಡರು.
ಶಾಸಕ ವೆಂಕಟರಾವ ನಾಡಗೌಡ ನಡೆ ಸಾಧನೆಯ ಕಡೆ ಗ್ರಾಮ ವ್ಯಾಸ್ತವ ಕಾರ್ಯಕ್ರಮವನ್ನು ನವಂಬರ 4 ರಂದು ಜೋಳದ ರಾಸಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಬಾಜಾ ಭಜಂತ್ರಿ ಗಳೊಂದಿಗೆ ಅಪಾರ ಬೆಂಬಲಿಗರು ಅಬಿಮಾನಿ ಗಳೊಂದಿಗೆ ನಾಡಗೌಡರು ಪಾದಯಾತ್ರೆಯನ್ನು ನಡೆಸಿದರು.
ಉದ್ಬಾಳ,ಗೊಮರ್ಸಿ ,ಮಾಡಶಿರವಾರ ಬೂದಿವಾಳ ಗ್ರಾಮಗಳಲ್ಲಿ ಸಂಚರಿಸಿ ಜನ ಸಂಪರ್ಕ ಸಭೆ ನಡೆಸಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಮಾಡಶಿರವಾರ ಗ್ರಾಮ ಪಂಚಾಯಿತಿಯ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.ಮಾಡಶಿರವಾರ ಗ್ರಾಮದ ಚನ್ನಬಸವ ಸ್ವಾಮಿಯ ಮನೆಯಲ್ಲಿ ಶಾಸಕರು ರಾತ್ರಿ ವ್ಯಾಸ್ತವ ಮಾಡಿದರು.
ಗ್ರಾಮ ವ್ಯಾಸ್ತವ ಕಾರ್ಯಕ್ರಮ ಎರಡನೆಯ ದಿನ ಅಲಬನೂರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬೆಳಗುರ್ಕಿ ಹಾಗೂ ಬಂಗಾಲಿ ಕ್ಯಾಂಪ್ ಗಳಲ್ಲಿ ಜರುಗಿತು ಗ್ರಾಮದ ಮಹಿಳೆಯರು ಸಾರ್ವಜನಿಕರು ಪಕ್ಷದ ಕಾರ್ಯಕರ್ತರು ಆರತಿ ಬೆಳಗುವ ಮೂಲಕ ಅಭಿಮಾನದಿಂದ ಅದ್ದೂರಿ ಯಾಗಿ ಶಾಸಕ ವೆಂಕಟರಾವ ನಾಡಗೌಡರನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ರಾದ ಬಸವರಾಜ ನಾಡಗೌಡ, ಚಂದ್ರಭೂಪಾಲ ನಾಡಗೌಡ, ವೆಂಕಟೇಶ ನಂಜಲದಿನ್ನಿ, ಅಬಿಷೇಕ್ ನಾಡಗೌಡ, ಅಲ್ಲಮ ಪ್ರಭು ಪೂಜಾರ, ಶಂಕರಗೌಡ ಎಲೆಕೂಡ್ಲಿಗಿ,ವಿಶ್ವನಾಥರೆಡ್ಡಿ,ರಮೇಶರೆಡ್ಡಿ,ದರ್ಮಣ್ಣ ನಾಗರಾಜ ಮುಡಲಗಿರಿ ಕ್ಯಾಂಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಾಧನೆಯ ನಡೆಗೆ ಯಲ್ಲಿ ಪಾಲ್ಗೊಂಡಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;