ರಾಜ್ಯಕ್ಕೆ ಖರ್ಗೆ ಅದ್ದೂರಿ ಸನ್ಮಾನಕ್ಕೆ ಸಿದ್ಧತೆ – ಬಸನಗೌಡ ಬಾದರ್ಲಿ.
ಸಿಂಧನೂರ :ನ.5.ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವಂಬರ್ 6 ರಂದು ಕೆಪಿಸಿಸಿಯಿಂದ ಅದ್ದೂರಿಯಾಗಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿರುವದಾಗಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿಯಾದ ಬಸನಗೌಡ ಬಾದರ್ಲಿ ತಿಳಿಸಿದರು.
ನಗರದ ತಮ್ಮ ಕಛೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆಯ ವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷದಲ್ಲಿ ವಿದ್ಯಾರ್ಥಿ ಯುವ ಜನರ ಸಂಘಟನೆ ಮುಖಂಡ ರಾಗಿ ಬೆಳೆದು ನಂತರ ಶಾಸಕರಾಗಿ, ಸಂಸದರಾಗಿ, ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಅನೇಕ ಹುದ್ದೆ ಗಳನ್ನು ನಿರ್ವಹಿಸಿದ್ದಾರೆ. ಈಗ ಅವರ ಅನುಭವ, ಮಾರ್ಗದರ್ಶನ ಕಾಂಗ್ರೆಸ್ ಪಕ್ಷಕ್ಕೆ ಅವಶ್ಯಕತೆಯಿದೆ. ಅದಕ್ಕಾಗಿ ಅವರನ್ನು ಅಧಿಕ ಮತಗಳಿಂದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದು ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ರಾಷ್ಟ್ರೀಯ ಅಧ್ಯಕ್ಷ ರಾದ ಮಲ್ಲಿಕಾರ್ಜುನ ಖರ್ಗೆ ಯವರಿಗೆ ಪಕ್ಷದ ವತಿಯಿಂದ ಸನ್ಮಾನಿಸಿ ಗೌರವಿಸುಲಾಗುತ್ತಿದೆ ಆದ್ದರಿಂದ ತಾಲ್ಲೂಕಿನಿಂದ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಶಾಸಕ ವೆಂಕಟರಾವ್ ನಾಡಗೌಡರು 2018ರ ವಿಧಾನ ಸಭಾ ಚುನಾವಣೆಯ ಸಂಧರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ರೈತರಿಗಾಗಿ ಎಡದಂಡೆ ಕಾಲುವೆಗೆ ಕೆಳಭಾಗದ ರೈತರಿಗೆ ನೀರುಹರಿಸುವುದು, ಬಂಗಾಲಿ ಕ್ಯಾಂಪಿನ್ ಜನರಿಗೆ ಕಂದಾಯ ಗ್ರಾಮ ಗಳನ್ನಾಗಿ ಮಾಡುವುದು, ಯುವಕರಿಗೆ 3 ಎಕರೆ ಪ್ರದೇಶದಲ್ಲಿ ಇಂಜಿನಿಯ ರಿಂಗ್, ಪ್ಯಾರಾ ಮೆಡಿಕಲ್ ಕಾಲೇಜು ಮಾಡುವುದು, ಹೈಟೆಕ್ ದನದ ಸಂತೆ ಮಾರ್ಕೆಟ್, ರೈತರ ಪಂಪಸೇಟ್ ಗಳಿಗೆ ಸೋಲಾರ್ ಅಳವಡಿಕೆ, ಅಂಭಾಮಠದಲ್ಲಿ ಪ್ರವಾಸಿ ತಾಣ,ಎಲ್ಲಾ ಜಾತಿ ವರ್ಗದವರಿಗೆ ಸಮುದಾಯ ಭವನ ಹಾಗೂ ಶಾಧಿಮಹಲ್ ನಿರ್ಮಾಣ,ಬೈಪಾಸ್ ರಸ್ತೆ ನಿರ್ಮಾಣ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ, ನಗರದಲ್ಲಿ ಉದ್ಯಾನವನ,ಸಿಟಿ ಬಸ್ ನಿಲ್ದಾಣ, ಕ್ಷೇತ್ರಾದ್ಯಂತ ರುದ್ರಭೂಮಿ ಇನ್ನಿತರ 19 ಭರವಸೆಗಳನ್ನು ನೀಡಿದ್ದರು. ಆದರೆ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಜನರ ಭರವಸೆಗಳನ್ನು ಹುಸಿಗೊಳಿಸಿದ್ದಾರೆ ಎಂದರು.
ಶಾಸಕ ವೆಂಕಟರಾವ್ ನಾಡಗೌಡ ಚುನಾವಣೆ ಯಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿ ಸದೆ ವಿಫಲರಾಗಿದ್ದಾರೆ. ಐದು ವರ್ಷದಲ್ಲಿ ಜನರ ಕಷ್ಟಗಳನ್ನು ಕೇಳದೆ ನಿರ್ಲಕ್ಷ್ಯ ಮಾಡಿದ್ದು ಈಗ ಸೋಲುವ ಬೀತಿಯಿಂದ ಹತಾಸರಾಗಿ ನಾಡಗೌಡರ ನಡೆ ಅಭಿವೃದ್ಧಿ ಕಡೆ ಎಂದು ಗ್ರಾಮ ವ್ಯಾಸ್ತವ ಮಾಡುತ್ತಿದ್ದಾರೆ. ಆದರೆ ಜನರು ತೀರ್ಮಾನ ಮಾಡಿದ್ದಾರೆ ನಾಡಗೌಡರ ನಡೆ ಸೋಲಿನ ಕಡೆಗೆ ಎಂದು ಬಸನಗೌಡ ಬಾದರ್ಲಿ ಟೀಕಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶಿವಕುಮಾರ ಜವಳಿ, ವೆಂಕಟೇಶ ನಾಯಕ ರಾಗಲಪರ್ವಿ, ಶರಣಯ್ಯ ಕೊಟೆ,ಅಮರೇಶ ಗಿರಿಜಾಲಿ,ನಿರುಪಾದಪ್ಪ ಗೊಮರ್ಷಿ, ಶರಣಪ್ಪ, ವೀರರಾಜು,ಚನ್ನಬಸವ ಅಲಬನೂರ,ಶಂಕರಗೌಡ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
