ಹೊಸಪೇಟೆಯಲ್ಲಿ ಸೈಬರ್ ಜಾಗೃತಾ ದಿವಸ್ ಆಚರಣೆ…!!!

ಹೊಸಪೇಟೆಯಲ್ಲಿ ಸೈಬರ್ ಜಾಗೃತಾ ದಿವಸ್ ಆಚರಣೆ..

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹೊಸಪೇಟೆ ಹಾಗೂ ದೀಪಾಯನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ. ಸೈಬರ್ ಜಾಗೃತಾ ದಿವಸ್ ಕುರಿತು ಉಪನ್ಯಾಸ ಕಾರ್ಯಕ್ರಮ ಈ ದಿನ ಬೆಳಿಗ್ಗೆ ಸಮಯ 10:30 ಕ್ಕೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಮಂಜುಳಾ ರವರು ಗಣ್ಯರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಕುಮಾರಿ ವಿಶೃತಿ ಪ್ರಾರ್ಥನೆ ಗೀತೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.


ಪ್ರಸ್ತಾವಿಕ ನುಡಿಯನ್ನು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಬಸವರಾಜ್ ಜತ್ತಿ ರವರು ನೆರವೇರಿಸಿದರು. ಕಾರ್ಯಕ್ರಮದ ವಿಷಯ ಉಪನ್ಯಾಸವನ್ನು ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ರವರಾದ ಎಸ್ಪಿ ನಾಯಕ ರವರು ಸೈಬರ್ ಜಾಗೃತಾ ಬಗ್ಗೆಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಲಿದೆ ಕಾರಣ ಮೊಬೈಲ್ ಬಳಸುವವರ ಸಂಖ್ಯೆಯು ಹೆಚ್ಚಾಗುತ್ತಲಿದೆ. ಸೈಬರ್ ಬಗ್ಗೆ ಜಾಗೃತ ಇಲ್ಲದಿದ್ದರೆ ನಾವುಗಳು ಹೇಗೆ ತೊಂದರೆಗೆ ಒಳಗಾಗುತ್ತೇವೆ ಎಂಬುದನ್ನು ಪಿ ಎಸ್ ಐ ರವರು ಸವಿಸ್ತಾರವಾಗಿ ಮಕ್ಕಳಿಗೆ ಹೇಳಿದರು. ಯುವಜನತೆ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಅಂತ ಹೇಳಿ ತಮ್ಮ ಚಂದದ ಫೋಟೋಗಳನ್ನು ಅಪ್ಲೋಡ್ ಮಾಡಿ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಹಾಗೂ ಖಿನ್ನತೆಗೆ ಒಳಗಾಗುತ್ತಾರೆ ಮತ್ತು ಅನ್ಯ ವ್ಯಕ್ತಿಗಳು ಫೋನ್ ಮಾಡಿ ನಿಮ್ಮ ಖಾತೆಗೆ 25 ಲಕ್ಷ ಬಂದಿದೆ ನಿಮಗೆ ಒಂದು ಓಟಿಪಿ ಬರುತ್ತೆ ಅದನ್ನು ನಮಗೆ ಕಳಿಸಿ ಎಂದು ಹೇಳುತ್ತಾರೆ ನಂತರ ನಿಮ್ಮ ಖಾತೆಗೆ 25 ಲಕ್ಷ ಜಮಾ ಆಗುತ್ತದೆ ಎಂದು ಆಮಿಷ ಹೊಡ್ಡುತ್ತಾರೆ. 25 ಲಕ್ಷದ ಆಸೆಗಾಗಿ ತಾವು ಓಟಿಪಿಯನ್ನು ಹೇಳಿದರೆ ತಕ್ಷಣ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ಲಪಟಾಯಿಸುತ್ತಾರೆ. ಈ ತೊಂದರೆಯಿಂದ ಜಾಗೃತರಾಗಲು ತಾವುಗಳು ಅನ್ಯರಿಗೆ ತಮ್ಮ ಓಟಿಪಿಯನ್ನು ಶೇರ್ ಮಾಡಬಾರದು ಎಂದು ತಿಳಿ ಹೇಳಿದರು. ತಮ್ಮ ಶಾಲೆಯಲ್ಲಿ ಶಿಕ್ಷಕರು ಬೋಧಿಸುವ ವಿಷಯವಾರು ಹೆಚ್ಚಿನ ಜ್ಞಾನಾರ್ಜನೆಗಾಗಿ ಗೂಗಲ್ ನಲ್ಲಿ ಹುಡುಕಿ ತಿಳಿದುಕೊಳ್ಳಬಹುದು. ತಮಗೆ ಗೊತ್ತಿಲ್ಲದ ಹೊಸ ಆಪ್ ಗಳನ್ನು ಬಳಸಬೇಡಿ ಎಂದು ತಿಳಿ ಹೇಳಿದರು. ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ. ಸವಿಸ್ತಾರವಾಗಿ ಮೊಬೈಲ್ ಬಳಕೆಯನ್ನು ಹೇಗೆ ಮಾಡುವುದು ಮೊಬೈಲ್ ಬಳಕೆ ಮಾಡುವಾಗ ಆಚಾತುರ್ಯದಿಂದಾಗುವ ತೊಂದರೆಗಳ ಬಗ್ಗೆ ಹೇಳಿದರು. ಫೇಸ್ಬುಕ್ , ಇನ್ಸ್ಟಾಗ್ರಾಮ್ ಬಳಸುವವರಿಗೆ ಜಾಗ್ರತೆ ವಹಿಸಲು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಶಿಕ್ಷಣಾಧಿಕಾರಿಗಳಾದ ಶ್ರೀ ಚನ್ನಬಸಪ್ಪ ರವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಹಕಾರಿ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ ಅಯ್ಯಪ್ಪರವರು ಹಾಗೂ ದೀಪಾಯನ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ ಕರುಪು ಸ್ವಾಮಿ ರವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ದೀಪಾಯನ, ಜೆಸೀಸ್, ಸರಕಾರಿ, ಲಯನ್ಸ್ ಹಾಗೂ ವಾಲ್ಮೀಕಿ ಪ್ರೌಢಶಾಲೆಯ ಮಕ್ಕಳೊಂದಿಗೆ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.
ವಂದನಾರ್ಪಣೆಯನ್ನು ಶ್ರೀ ಮಾಲತೇಶ್ ಶಿಕ್ಷಕರು ನೆರವೇರಿಸಿದರು. ಈ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಶ್ರೀ ಜಂಬುಕೇಶ್ವರ ಶಿಕ್ಷಕರು ವಹಿಸಿದ್ದರು.ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು…

ವರದಿ. ಗಣೇಶ್. ಹೊಸಪೇಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend