ಇಟ್ಟಿಗಿ ಗ್ರಾಮ ಪಂಚಾಯತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ…!!!

ಇಟ್ಟಿಗಿ ಗ್ರಾಮ ಪಂಚಾಯತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ.

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತಾ. ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣವನ್ನು ಇಟ್ಟಿಗಿಯಲ್ಲಿ ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಚಲವಾದಿ ಪುಷ್ಪಾವತಿಮಹಾಬಲೇಶ್ವರ ರವರು ನೆರವೇರಿಸಿದರು. ಉಪಾಧ್ಯಕ್ಷರಾದ ಮದ್ದಾನ ಸ್ವಾಮಿ, ಸರ್ವ ಸದಸ್ಯರುಗಳು, ಸಂಜೀವಿನಿ ಮಹಿಳಾ ಒಕ್ಕೂಟದ ಸಿಬ್ಬಂದಿಗಳು &ಗ್ರಾ ಪಂ ಸಿಬ್ಬಂದಿಗಳು ಗ್ರಾಮದ ನಾಗರಿಕರು ಪಾಲ್ಗೊಂಡಿದ್ದರು. ಕನ್ನಡದ ಉಳಿವಿಗೆ ನಾವು ಮಾಡಬಹುದಾದ ಅತೀ‌ ಸರಳವಾದ ಕರ್ತವ್ಯಗಳೆನೆಂದು ನಮ್ಮ ಪತ್ರಿಕೆಯ ಮ‌ೂಲಕ ಜನರಿಗೆ ತಲುಪಿಸಲು ನಮ್ಮದೊಂದು ಚಿಕ್ಕ ಪ್ರಯತ್ನ.

೧) ಕನ್ನಡದ ವ್ಯಾಪ್ತಿ ಚಿಕ್ಕದು ಎಂಬ ಕಿಳರಿಮೆ ಇಂದ ಹೊರಬನ್ನಿ..ಕರ್ನಾಟಕ ಎಂಬುದು ಇಟಲಿ, ಜರ್ಮನಿ ಯಷ್ಟೇ ದೊಡ್ಡದು..! ಅವರಿಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ್ದೆವೆ.ಜಗತ್ತಿನ ೨೩ನೇ ಅತಿ ಹೆಚ್ಚು ಜನರಾಡೋ‌ ಭಾಷೆ ಇದು..!!

೨) ಕಿಳರಿಮೆ ತೊಡೆದ ನಂತರ, ಎಲ್ಲರೊಂದಿಗೆ ಪುಷ್ಕಳವಾದ ನೇರವಾದ ಕನ್ನಡದಲ್ಲೇ ಮಾತಾಡಿ.! ಎಷ್ಟೋ ಸಲ ನಾವಾಡುವ ಸುತ್ತಿ ಬಳಸಿದ ಸಪ್ಪೆ ಕನ್ನಡ‌ ನಮಗೇ ಬೆಸರ ಉಂಟು‌ಮಾಡುತ್ತದೆ..! ಹೊಸ ಯೋಗ್ಯ ಪದಗಳು, ಗಾದೆಗಳು, ನಿಮ್ಮ ಮಾತಿಗೆ ರಸ ತುಂಬಲಿ..!!

೩) ನಿಮ್ಮ ಯುಟ್ಯುಬ್ ಚಾನೆಲ್ ನಲಿ ಆದಷ್ಟು ಕನ್ನಡದ ಚಾನೆಲ್ ಗಳಿಗೆ ಚಂದಾದಾರರಾಗಿ.! ಇದರಿಂದ ಹೆಚ್ಚಿನ‌ ಕನ್ನಡ ಯುಟ್ಯುಬರ್ಸ ಗೆ ಹುರುಪು‌ ಸಿಗುತ್ತೆ…! ಆದಷ್ಟು ಅವಶ್ಯ ವಿಲ್ಲಾದ ಹಿಂದಿ ಆಂಗ್ಲ ಚಾನೆಲ್ ಗಳಿಗೆ ಅಚಂದಾದಾರರಾಗಿ…!!

೪) ನಿಮ್ಮ ಮಕ್ಕಳು ಡಿಸ್ಕವರಿ, ಕಾರ್ಟೂನ್, ನ್ಯಾಷನಲ್ ಜಿಯೊಗ್ರಾಫಿಕ ಚಾನೆಲ್ ಕನ್ನಡದಲ್ಲಿ ನೊಡುವಂತಾಗಲು ಟಿ.ವಿ.ಸಿಸ್ಟಮ್‌ ಲ್ಯಾಂಗ್ವೆಜ್ ಸೆಟ್ ಅಪ್ ನಲಿ ಕನ್ನಡ ಅಂತ ಆಯ್ಕೆ ಮಾಡಿ..!

೫) ವೈಯಕ್ತಿಕವಾಗಿ ಕನ್ನಡಿಗನೊಂದಿಗೆ ಯಾವುದಾದರೂ ಭಾಷೆಲಿ ಮಾತನಾಡಿ..ಅದರೆ ಗುಂಪಿನಲಿ ಯಾರೇ ಇರಲಿ ನಿಮ್ಮ ಬಾಯಿಂದ ಪುಂಖಾನುಪುಂಖವಾಗಿ ಕನ್ನಡವೇ ಬರಲಿ..!ಇಂತಹ ಪ್ರಯತ್ನಗಳು ನಮ್ಮಿಂದಾನೆ ಶುರುವಾಗಲೆಂದು ನಮ್ಮ ಪತ್ರಿಕೆಯ ಆಶಯ.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend