ಮಣ್ಣು ಅಗೆಯುವಾಗ ಕಾರ್ಮಿಕ ಸಾವು ಕುಟುಂಬಸ್ಥರ ಆಕ್ರಂದನ…!!!

ಮಣ್ಣು ಅಗೆಯುವಾಗ ಕಾರ್ಮಿಕ ಸಾವು ಕುಟುಂಬಸ್ಥರ ಆಕ್ರಂದನ.

ಸಿಂಧನೂರ: ಅ.29 ಮನೆಯ ತಳಪಾಯ ಅಗೆಯುವಾಗ ಕಾರ್ಮಿಕನೊಬ್ಬ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಗರದ ಯಲ್ಲಮ್ಮ ದೇವಸ್ಥಾನದ ಹತ್ತಿರ ನಿನ್ನೆ ಸಂಜೆ 6 30 ಕ್ಕೆ ಸಂಭವಿಸಿದೆ.
ಶಿವಪ್ಪ ತಂದೆ ಶಿವಗ್ಯಾನಪ್ಪ ವಯಸ್ಸು 20 ಅಮರಾಪುರ ಮೃತಪಟ್ಟ ಕಾರ್ಮಿಕನಾಗಿದ್ದಾನೆ. ತಾಲ್ಲೂಕಿನ ಜವಳಗೇರಾ ಗ್ರಾಮದ ಶ್ರೀನಿವಾಸ ಶೆಟ್ಟಿ ಅವರ ಮನೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಈ ದುರಂತ ನಡೆದಿದೆ.
ನಗರದ ಯಲ್ಲಮ್ಮ ಗುಡಿಯ ಹತ್ತಿರ ಇರುವ ತಮ್ಮ ಸ್ವಂತ ಜಾಗದಲ್ಲಿ ಶ್ರೀನಿವಾಸ ಶೆಟ್ಟಿ ಮನೆ ನಿರ್ಮಾಣ ಕಾರ್ಯ ಮಾಡುತ್ತಿದ್ದು ನಿನ್ನೆ ಸಂಜೆ 6 ಗಂಟೆ 30 ನಿಮಿಷಕ್ಕೆ ಕೂಲಿ ಕಾರ್ಮಿಕ ಮನೆಯ ಬುನಾದಿ ತೊಡುವಾಗ ಅತನ ಮೇಲೆ ಮಣ್ಣು ಬಿದ್ದು ಕೂಲಿಕಾರ್ಮಿಕ ಶಿವಪ್ಪ ಸ್ಥಳದಲ್ಲಿಯೇ ಮೃತಪಟ್ಟಿ ದ್ದಾನೆ.ಮೃತಪಟ್ಟ ಕಾರ್ಮಿಕನ ಶವನ್ನು ಮರಣೋತ್ತ ರ ಪರೀಕ್ಷೆಗಾಗಿ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತಂದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ನಗರ ಠಾಣೆಯ ಪೋಲೀಸರು ಪಂಚೆನಾಮೆ ಮಾಡಿದ್ದು ಆದರೆ ಯಾವುದೆ ರೀತಿಯ ಪ್ರಕರಣ ದಾಖಲಿಸಿಕೊಂಡಿಲ್ಲ. ಮನೆಯ ಮಾಲಿಕ ಹಾಗೂ ಮೃತಪಟ್ಟ ಕುಟುಂಬಸ್ಥರ ಜೊತೆ ರಾಜೀ ಸಂಧಾನ ಮಾಡಿದ ಕಾರಣ ಪ್ರಕರಣ ದಾಖಲಾಗಿಲ್ಲ ಎಂದುತಿಳಿದು ಬಂದಿದೆ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend