ಪುಣಭಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ತಿಪ್ಪಣ್ಣ ಅವರ ವಿರುದ್ಧ ಶನಿವಾರ ಅವಿಶ್ವಾಸ ಮಂಡನೆ…!!!

ಪುಣಭಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ತಿಪ್ಪಣ್ಣ ಅವರ ವಿರುದ್ಧ ಶನಿವಾರ ಅವಿಶ್ವಾಸ ಮಂಡನೆ……

ಹರಪನಹಳ್ಳಿ :- ತಾಲೂಕಿನ ಅರಸೀಕೆರೆ ಸಮೀಪದ ಪುಣಭಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ತಿಪ್ಪಣ್ಣ ಅವರ ವಿರುದ್ಧ ಶನಿವಾರ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು.

ತಾಲೂಕಿನ ಪುಣಬಘಟ್ಟ ಗ್ರಾಮ ಪಂಚಾಯತಿ ಯಲ್ಲಿ ಶನಿವಾರ ಉಪ ವಿಭಾಗಧಿಕಾರಿ ಟಿ.ವಿ ಪ್ರಕಾಶ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಅಧ್ಯಕ್ಷರ ವಿರುದ್ಧ ಕೈ ಎತ್ತುವ ಮೂಲಕ ಅವಿಶ್ವಾಸ ತೋರಿದರು.

ಗ್ರಾಮ ಪಂಚಾಯತಿ ಒಟ್ಟು 18 ಜನ ಸದಸ್ಯರ ಬಲವನ್ನು ಹೊಂದಿದೆ. ಸದಸ್ಯರಾದ ಎ.ಕೆ ಜಯಪ್ಪ, ದಾನಪ್ಪ, ರಾಮಪ್ಪ, ಜ್ಯೋತಿನಾಯ್ಕ, ಶ್ರೀನಿವಾಸ,  ನಾಗರಾಜ, ಮಿನಾಕ್ಷಿಬಾಯಿ, ಹನುಮಕ್ಕ, ಪವಿತ್ರ, ಪಾರ್ವತಿ ಬಾಯಿ ಪುಷ್ಪಾವತಿ ವಿರುದ್ಧದ ಮತ ಚಲಾಯಿಸಿದರೆ 6 ಜನರು ಪರವಾಗಿ ತಟಸ್ಥವಾಗಿ ಉಳಿದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ನನ್ಯಾ ಸಾಬ್, ಹರಪನಹಳ್ಳಿ ಸಬ್ ಇನ್ಸ್ಪೆಕ್ಟರ್ ಸಿ.ಪ್ರಕಾಶ್ ಮುಖಂಡ ನಂದಿಕಂಬ ಚಂದ್ರನಾಯ್ಕ, ಪಿ.ಬಸವರಾಜ ಗೌಡ, ಎನ್.ಸಿದ್ದಪ್ಪ, ಬಸವರಾಜಪ್ಪ, ಮುರುಗೇಶಪ್ಪ, ಬಾಲಚಂದ್ರಯ್ಯ, ಜೋತ್ಯಪ್ಪ, ನಿಂಗಪ್ಪ, ಪ್ರಭಾಕರ ಇದ್ದರು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend