ತುಂಬಿದ ಅಪ್ಪೇನಹಳ್ಳಿ ಕೆರೆ: ಬಾಗಿನ ಅರ್ಪಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ…!!!

ತುಂಬಿದ ಅಪ್ಪೇನಹಳ್ಳಿ ಕೆರೆ: ಬಾಗಿನ ಅರ್ಪಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ..

ಗುಡೇಕೋಟೆ: ಉತ್ತಮ ಮಳೆಯಿಂದ ಕೆರೆಯಲ್ಲಿ ಜಲ ಸಂಗ್ರಹ ಹೆಚ್ಚಿದೆ. ಕಡೆಕೋಡಿ ಮೂಲಕ ನೀರು ಹೊರಗೆ ಹರಿಯುತ್ತಿದ್ದು, ಸುತ್ತಲಿನ ರೈತರ ಜಮೀನುಗಳ ಬೋರ್‌ವೆಲ್ಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದರು.

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ಅಪ್ಪೇನಹಳ್ಳಿ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದರು. ಮಳೆರಾಯನ ಕೃಪೆಯಿಂದ ಕೆರೆ ತುಂಬಿದೆ. ಹೀಗೆ ಪ್ರತಿ ವರ್ಷ ಉತ್ತಮ ಮಳೆಯಾದರೆ ರೈತನ ಸಂಕಷ್ಟ ದೂರವಾಗಲಿದೆ ಎಂದರು.ಕೆರೆಯ ಸಮೀಪದಲ್ಲೇ ಇರುವ ಸುಕ್ಷೇತ್ರ ಶ್ರೀ ಕೋಟೆಗುಡ್ಡದ ಮಾರೆಮ್ಮ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಗಂಗಾಮಾತೆಯನ್ನು ಪೂಜಿಸಿದರು.

ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಮಲ್ಲಿಕಾರ್ಜುನ್.ಎಇ ರಾಮಾಂಜಿನೇಯ್ಯ. ಪಿಡಬ್ಲ್ಯೂಡಿ ಸುದರ್ಶನ್ ರೆಡ್ಡಿ. ಎ ಜಿ ಪ್ರಭಾಕರ್. ಪ್ರಾಣೇಶ್ ಸ್ವಾಮಿ. ಅಂಜಿನಪ್ಪ. ಬಸವರಾಜ್. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪದ್ಮಭಾಯಿ. ಹುಡೇಂ ಪಾಪನಾಯಕ. ವೆಂಕಟಸ್ವಾಮಿ. ಶ್ರೀಧರ್ ನಾಯಕ್. ಅಜಯ್. ಪಾಪಯ್ಯ. ಮುತ್ಯೆಪಾಲಯ್ಯ. ಸಣ್ಣ ಓಬಯ್ಯ. ಮಾರೇಶ್. ಶಾಸಕರ ಆಪ್ತ ಸಹಾಯಕರಾದ ಶ್ರೀಕಾಂತ್. ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಬಿಜೆಪಿ ಮುಖಂಡರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು..

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend