ಇಟ್ಟಿಗಿ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ…!!!

ಇಟ್ಟಿಗಿ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ.

ಪ್ರತೀ ವರ್ಷ ಅಶ್ವಯುಜ ಮಾಸದ ಶರದ್‌ ಪೂರ್ಣಿಮೆಯ ದಿನದಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುವುದು. ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮ ಪಂಚಾಯ್ತಿ ಕಛೇರಿ ಆವರಣದಲ್ಲಿ ಗ್ರಾ ಪಂ ಸದಸ್ಯರಾದ ಶ್ರೀಮತಿ ಲಕ್ಷ್ಮಕ್ಕ, ಶ್ರೀ ಕಕ್ಕೂರು ಲೋಕೇಶ್ ರವರು ಪಂ ಅ ಅಧಿಕಾರಿ ಶ್ರೀ ಎಂ ಪ್ರಕಾಶ್ ಸರ್ ಗ್ರಾ ಪಂ ಸಿಬ್ಬಂದಿಗಳು, ಸಂಜೀವಿನಿ ಮಹಿಳಾ ಒಕ್ಕೂಟದ ಸಿಬ್ಬಂದಿಗಳಿಂದ ಸಸಿಗಳನ್ನು ನೆಡಲಾಯಿತು.

ಮಹಾಕಾವ್ಯ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿಯು ಶರದ್ ಪೂರ್ಣಿಮೆಯ ದಿನದಂದು ಜನಿಸಿದರು, ಆದ್ದರಿಂದ ಪಂಚಾಂಗದ ಪ್ರಕಾರ, ವಾಲ್ಮೀಕಿ ಜಯಂತಿಯನ್ನು ಪ್ರತಿ ವರ್ಷ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಮಹಾಕಾವ್ಯದಲ್ಲಿ, ವಾಲ್ಮೀಕಿ ಸಂಸ್ಕೃತದಲ್ಲಿ 24,000 ಶ್ಲೋಕಗಳು, 7 ಖಂಡಗಳು ಮತ್ತು ಅನೇಕ ಶ್ಲೋಕಗಳನ್ನು ಬರೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಗ್ರಾ ಪಂ ಸಿಬ್ಬಂದಿಗಳಾದ ಬಿಲ್ ಕಲೆಕ್ಟೆರ್ ಕೊಟ್ರೇಶ್ ಕ್ಲರ್ಕ್ ಕಂ ಡಿ ಇ ಓ ಪ್ರಕಾಶ್, ಡಿ ಇ ಓ ಮಲ್ಲಿಕಾರ್ಜುನ ಕೆ ಕಾಯಕ ಮಿತ್ರರಾದ ಶಾಂತಮ್ಮ,ಗ್ರಂಥಾಲಯ ಮೇಲ್ವಿಚಾರಕಾರದ ದೇವೇಂದ್ರಪ್ಪ ಕೆ ಎಸ್,ರಾಯಭಾರಿ ಟಿಪ್ಪು ಸುಲ್ತಾನ್, ನೀರುಗಂಟೆ ಜಯಪ್ಪ ಮತ್ತು ಜವಾನ ಮಹೇಂದ್ರ ಹಾಗೂ ಸಂಜೀವಿನಿ ಮಹಿಳಾ ಒಕ್ಕೂಟದ ಎಂಬಿಕೆ ಲಕ್ಷ್ಮಿ, ಎಲ್ ಸಿ ಆರ್ ಪಿ ಶ್ರುತಿ, ಕೃಷಿ ಸಖಿ ವೀಣಾ ಬಿ, ಉದ್ಯೋಗ ಸಖಿ ಕೆ ಲತಾ ರವರು ಸ್ವಚ್ಛತಾಗಾರರಾದ ಬೀಬಿಜಾನ್ ಮತ್ತಿತರರು ಪಾಲ್ಗೊಂಡಿದ್ದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend