ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಸುಳ್ಳು ಭರವಸೆಗಳಿಗೆ ಮರುಳಾಗಿ ಬೇಡಿ: ಬಸವರಾಜ
ಗುಡೇಕೋಟೆ.:- ಬಳ್ಳಾರಿ -ವಿಜಯನಗರ ಜಿಲ್ಲೆಯ 2018 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಎನ್.ವೈ.ಗೋಪಾಲಕೃಷ್ಣ ಅವರು ಸ್ಪರ್ಧಿಸಿ ಸುಮಾರು 12 ಸಾವಿರ ಮತಗಳ ಅಂತರದಿಂದ ಗೆಲುವುವನ್ನು ಪಡೆದು ಒಂದು ಐತಿಹಾಸಿಕ ವಿಜಯವನ್ನು ಸಾಧಿಸಿದ್ದಾರೆ.ಈ ಅಭೂತಪೂರ್ವ ಜಯಕ್ಕೆ ಕ್ಷೇತ್ರದ ಬಿಜೆಪಿ ಪಕ್ಷದ ಮೇಲಿನ ಒಲವು ಹಾಗೂ ಮತದಾರ ಅಭಿಮಾನವೇ ಕಾರಣ.ಅದರಂತೆ ಮಾನ್ಯ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ಅವರು ಕ್ಷೇತ್ರದಲ್ಲಿನ ಅನೇಕ ಸಮಸ್ಯೆಗಳನ್ನು ಅರಿತು ಸತತ ನಾಲ್ಕು ವರ್ಷದಲ್ಲಿ ಪಕ್ಷಾತೀತವಾಗಿ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೆ ಶಿಕ್ಷಣ,ಆರೋಗ್ಯ,ವಸತಿ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ನೀಡಿದ್ದಾರೆ.ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ವಿಧಾನ ಸಭಾ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 800 ಕೋಟಿ ಅನುದಾನ ತಂದಿದ್ದಾರೆ. ಕಾಮಾಗಾರಿಯೂ ಸಹ ಈಗಾಗಲೇ ಶೇ 90%ರಷ್ಟು ಮುಗಿದಿದ್ದು ಜನವರಿ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.ಇದರಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು 2,500 ಕೋಟಿಯಷ್ಟು ಅನುದಾನವನ್ನು ತಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಗೆ ಹೊಸ ಭವಿಷ್ಯ ಬರೆದಿದ್ದಾರೆ.ಇಂತಹ ಶಾಸಕರು ನಮಗೆ ದೊರೆತಿರುವುದು ನಮ್ಮ ಹಾಗೂ ಪಕ್ಷದ ಕ್ಷೇತ್ರದ ಸೌಭಾಗ್ಯವೇ ಸರಿ.ಮುಂಬರುವ ವಿಧಾನ ಸಭಾ ಕ್ಷೇತ್ರದ ಚುನಾವಣೆಗಳು ಈಗಾಗಲೇ ಹತ್ತಿರ ಬರುತ್ತಿದ್ದು.ಶಾಸಕ ಎನ್.ವೈ.ಗೋಪಾಲಕೃಷ್ಣ ಅಭಿವೃದ್ಧಿಯ ಪರ್ವವನ್ನೆ ಸೃಷ್ಟಿಸಿದ್ದು ಅವರ ಆಡಳಿತಾವಧಿ ಇನ್ನೂ ಇರುವಾಗಲೇ,ಕೆಲವರು ಬಿಜೆಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಹಾಗೂ ಈಗಾಗಲೇ ನನಗೆ ಪಕ್ಷವು ಟಿಕೆಟ್ ನೀಡಿದೆ ಎಂದು ಸುಳ್ಳು ಹೇಳಿಕೊಂಡು ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿ ಕಾರ್ಯಕರ್ತರನ್ನ ಹಾದಿ ತಪ್ಪಿಸುತ್ತಿದ್ದಾರೆ.ಇದನ್ನ ಪಕ್ಷವು ಒಪ್ಪುವುದಿಲ್ಲ.ಆದ್ದರಿಂದ ಆ ತರ ಪಕ್ಷವನ್ನು ಹಾಗೂ ಹಾಲಿ ಶಾಸಕರನ್ನ ಮುಜುಗರ ತರುವಂತಹ ಕೆಲಸಗಳನ್ನು ಪಕ್ಷದ ಹೆಸರನ್ನ ಹೇಳಿ ಯಾರು ಮಾಡಕೂಡದು.ಆ ತರ ಘಟನೆಗಳು ಜರುಗಿದರೆ ಕಾರ್ಯಕರ್ತರು ಸಹ ಅಂಥವರಿಗೆ ಯಾವುದೇ ರೀತಿಯ ಮಣೆಯನ್ನು ಸಹ ಹಾಕಬಾರದು.ಬಿಜೆಪಿ ಪಕ್ಷವು ಒಂದು ಸಿದ್ದಾಂತದ ಹಾಗೂ ಶಿಸ್ತಿನ ಪಕ್ಷವಾಗಿದ್ದು.ಇಲ್ಲಿ ಹೈಕಮಾಂಡ್ ಆದೇಶದಂತೆ ಎಲ್ಲವು ನಡೆಯುತ್ತಿದ್ದು.ಮುಂದಿನ ತೀರ್ಮಾನವನ್ನು ಪಕ್ಷದ ಮುಂಚೂಣಿ ನಾಯಕರೇ ತಗೆದುಕೊಳ್ಳುತ್ತಾರೆ.ಆದ್ದರಿಂದ ಪಕ್ಷದ ಕಾರ್ಯರ್ತರು ಪಕ್ಷದ ಹೆಸರನ್ನು ಹೇಳಿಕೊಂಡು ಆಕಾಂಕ್ಷಿ ಅಭ್ಯರ್ಥಿ ಎಂದು ಹೇಳಿ ಕೊಂಡು ಬರುವ ಯಾವುದೇ ವ್ಯಕ್ತಿಗಳಿಗೆ ಮನ್ನಣೆ ನೀಡದೆ ಪಕ್ಷದ ಮುಂದಿನ ಆದೇಶ ಹಾಗೂ ಪಕ್ಷದ ಸೂಚಿಸಿದ ವ್ಯಕ್ತಿಗೆ ನಿಮ್ಮ ಬೆಂಬಲ ನೀಡಲು ಈ ಮೂಲಕ ತಿಳಿಸಲು ಬಯಸುತ್ತೇನೆ ಎಂದು ಗುಡೇಕೋಟೆ ಗ್ರಾಮದ ಬಿಜೆಪಿ ಮುಖಂಡರಾದ ಸೊಸೈಟಿ ಬಸವರಾಜ್.ರಾಯಾಪುರ.ಪ್ರಾಣೇಶ್ ರಾವ್.ಅಪ್ಪೇನಹಳ್ಳಿ ವೆಂಕಟಸ್ವಾಮಿ.ಸೇರಿದಂತೆ ಗುಡೇಕೋಟೆ ಹೊಬಳಿ ಭಾಗದ ಚಿರತಗುಂಡು.ಗಂಡಬೋಮ್ಮನಹಳ್ಳಿ.ಜರ್ಮಲಿ.ರಾಮದುರ್ಗ.ಅಪ್ಪೇನಹಳ್ಳಿ.ಗ್ರಾ ಪಂ ಹಾಗೂ ಸಮಸ್ತ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
