ಮತದಾರರೊಂದಿಗೆ ಮನೆ ಮಗನ ಮಾತುಕತೆ – ಬಸನಗೌಡ ಬಾದರ್ಲಿ.
ಸಿಂಧನೂರು.ಆ.1.ನವ ಸಂಕಲ್ಪ ನವ ಸಿಂಧನೂರು ಎಂಬ ಸಂಕಲ್ವದೊಂದಿಗೆ ಪಾದಯಾತ್ರೆ ಮೂಲಕ ನಗರ ಮತ್ತು ಗ್ರಾಮದ ಮತದಾರೊಂದಿಗೆ ಮನೆ ಮಗನ ಮಾತುಕತೆ ಎಂಬ ಹೊಸ ಸಂಕಲ್ಪದೊಂದಿಗೆ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಬಸನಗೌಡ ಬಾದರ್ಲಿ ತಿಳಿಸಿದರು.
ನಗರದ ತಮ್ಮ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು. ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರತಿ ವಾರ್ಡಗಳಲ್ಲಿ ಪ್ರತಿ ಮನೆ ಮನೆಗೆ ಹೋಗಿ ಅಲ್ಲಿರುವ ಜನರ ಸಮಸ್ಯಗಳನ್ನು ಆಲಿಸುವದು ಮತ್ತು ಪ್ರತಿ ಗ್ರಾಮ ದಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಸರಿಪಡಿಸು ವ ಕೆಲಸ ಮಾಡುವೆ. ರೈತರು ಬೆಳೆದ ಬೆಳೆಗೆ ಸಕಾಲ ವೇಳೆಯಲ್ಲಿ ಸಿಗಬೇಕಾದ ಬೆಂಬಲಬೆಲೆ,ಯುವಕರಿಗೆ ಉದ್ಯೋಗ, ಮಹಿಳೆಯರ ಸಿಗಬೇಕಾದ ಸೌಲಭ್ಯ ಹಾಗೂ ಯುವಕರಿಗೆ ಯುವತಿಯರು ಮನೆಗೊಂದು ಉದೋಗ ನೀಡುವ ದೃಷ್ಟಿಕೋನದಿಂದ ನಗರದಲ್ಲೇ ಉದೋಗ ನೀಡಲಾಗುತ್ತದೆ. ರೈತರ, ಬಡವರ, ಮಹಿಳೆಯರ,ಯುವಕರ,ಆಟೋ,ಟ್ಯಾಕ್ಸ್ ಚಾಲಕರ ಸೇರಿದಂತೆ ಜನರಿಗೆ ಸರಿಯಾಗಿ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ ಪ್ರತಿ ಕುಟುಂಬವು ತಮ್ಮ ಅರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಅರೋಗ್ಯ ಸವಲತ್ತು ನೀಡುವ ಉದ್ದೇಶದಿಂದ ಅಕ್ಟೋಬರ್ 3 ರಂದು ಸೋಮವಾರದಂದು ನಗರದ ಬಸ್ ನಿಲ್ದಾಣದ ಹತ್ತಿರ ಇರುವ ಅಂಬಾದೇವಿ ದೇವಸ್ಥಾನದಿಂದ ಸೋಮಲಾಪುರದ ಅಂಬಾಮಠದವರೆಗೆ ಪಾದಯಾತ್ರೆ ಹಮ್ಮಿಕೊಳ್ಳ ಲಾಗಿದೆ ಎಂದರು.
ಕ್ಷೇತ್ರದ ಮಹಿಳೆಯರು ತಮ್ಮ ಕುಟುಂಬವನ್ನು ತಾವೇ ನಡೆಸುತ್ತಿದ್ದಾರೆ ಅದರಿಂದ ಮಹಿಳೆಯರು ತಮ್ಮ ಸ್ವಂತ ಕಾಲು ಮೇಲೆ ನಿಂತುಕೊಳ್ಳುವದಕ್ಕೆ ಸ್ವಾವಲಂಬನೆ ಜೀವನ ಬದುಕುವದಕ್ಕೆ ಉದ್ಯೋಗ ಮತ್ತು ನಮ್ಮ ಭಾಗದ ವಿದ್ಯಾರ್ಥಿಗಳಿಗೆವಿದ್ಯಾಭ್ಯಾಸ ಸಲುವಾಗಿ ಐಟಿಐ ಕಾಲೇಜ, ಎಂಜಿನಿಯರ, ಮಾಡಿಕಲ್, ಕಾನೂನು ಸೇರಿದಂತೆ ಇನ್ನೂ ಅನೇಕ ಕಾಲೇಜ್ ಸ್ಥಾಪನೆಗಾಗಿ ಒತ್ತು ಕೊಡಲಾಗುವುದು. ಹಳ್ಳಿಗಳಿಂದ ನಗರ ಪ್ರದೇಶಕ್ಕೆ 10 ರಿಂದ 15ಸಾವಿರ ವಿದ್ಯಾರ್ಥಿಗಳಿಗೆ ಓದುವದಕ್ಕೆ ನಗರಕ್ಕೆ ಬರುತಿದ್ದಾರೆ ಹಳ್ಳಿಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಬೇಕಾಗುವಂತ ಸವಲತ್ತುಗಳನ್ನು ನೀಡುವ ಉದ್ದೇಶ ದಿಂದ ಒಂದು ನೀಲನಕ್ಷೇ ಸಿದ್ದಪಡಿಸಲಾಗುವದು. ಯಾವುದೇ ರಾಜಕೀಯ ಸ್ಥಾನದ ಉದ್ದೇಶದಿಂದ ಈ ಕೆಲಸ ಮಾಡುತ್ತಿಲ್ಲ ಸಮಸ್ತ ಜನರ ಒಳತಿಗಾಗಿ ಮಾಡುತ್ತಿದ್ದೇನೆ. ಈ ಒಂದು ಪಾದಯಾತ್ರೆಯಲ್ಲಿ ಪಕ್ಷಾತೀತವಾಗಿ ಯುವಕರು ಮಹಿಳೆಯರ ಹೆಚ್ಚಿನ ರೀತಿಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿವುಕುಮಾರ ಜವಳಿ, ವೆಂಕಟೇಶ ರಾಘಲಪರ್ವಿ, ಚನ್ನಬಸವ ಅಲಬನೂರು, ಅಮರೇಶ ಗಿರಿಜಾಲಿ, ರಾಮಣ್ಣ ಬೆಳಗುರ್ಕಿ, ಹಂಪಮ್ಮ ವಲ್ಕಂದಿನ್ನಿ, ಶಂಕರಗೌಡ, ಪ್ರಭು ದೇವರಗುಡಿ ಇನ್ನಿತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
