ಭವಿಷ್ಯದ ನಾಡನ್ನು ಕಟ್ಟಲು ಶಿಕ್ಷಕರ ಪಾತ್ರ ಬಹಳ ಮಹತ್ವದ್ದು- ವೆಂಕಟರಾವ್ ನಾಡಗೌಡ…!!!

ಭವಿಷ್ಯದ ನಾಡನ್ನು ಕಟ್ಟಲು ಶಿಕ್ಷಕರ ಪಾತ್ರ ಬಹಳ ಮಹತ್ವದ್ದು- ವೆಂಕಟರಾವ್ ನಾಡಗೌಡ.

ಸಿಂಧನೂರು :ಸ. 29. ವೈಜ್ಞಾನಿಕ ಯುಗದಲ್ಲಿ ಬಹಳಷ್ಟು ನಾವು ಮುಂದುವರೆಯಲು ಹಾಗೂ ಭವಿಷ್ಯದ ನಾಡನ್ನು ಕಟ್ಟಲು ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ನಗರದ ಸತ್ಯ ಗಾರ್ಡನ್ ನಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಯಚೂರು ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ಭಾರತ ರತ್ನ ಡಾ|| ಸರ್ವಪಲ್ಲ ರಾಧಾಕೃಷ್ಣನ್ ಇವರ 135ನೇ ಜನ್ಮದಿನೋತ್ಸವದ ಅಂಗವಾಗಿ 2022-23ನೇ ಸಾಲಿನ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಜ್ಞಾನದ ಜೊತೆಗೆ ದೇಶದ ಪರಂಪರೆ, ಶಿಸ್ತು ಮತ್ತು ಸಂಸ್ಕಾರವನ್ನು ವಿಧ್ಯಾರ್ಥಿಗಳಿಗೆ ಕಲಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಹೆಚ್ಚು ಅನುದಾನ ನೀಡುತ್ತಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ಕೊಡಲಾಗಿದೆ ಎಂದರು.

ಪ್ರತಿಯೊಬ್ಬರ ಜೀವನದಲ್ಲಿ ಗುರುವಿಗೆ ಹೆಚ್ಚಿನ ಮಹತ್ವವಿದೆ. ಸಮಾಜದಲ್ಲಿ ಅವರಿಗೂ ವಿಶೇಷ ಸ್ಥಾನವಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣದಲ್ಲಿ ಅಪಾರ ನಂಬಿಕೆ ಇಟ್ಟವರು. ಅವರು ಮಹಾನ್ ತತ್ವಜ್ಞಾನಿ ಮತ್ತು ಶಿಕ್ಷಕರಾಗಿದ್ದರು. ಅವರಿಗೆ ಬೋಧನೆಯಲ್ಲಿ ಆಳವಾದ ಪ್ರೀತಿ ಇತ್ತು. ಆದರ್ಶ ಶಿಕ್ಷಕನ ಎಲ್ಲಾ ಗುಣಗಳನ್ನು ಹೊಂದಿದ್ದರು. ಈ ದಿನದಂದು ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ ಮಾಡಿರುವುದು ಶ್ಲಾಘನೀಯವಾದದ್ದು ಎಂದರು.

ಹುಟ್ಟಿದಾಗ ವ್ಯಕ್ತಿಗೆ ಹೆಸರಿರೋದಿಲ್ಲ, ಉಸಿರು ಇರುತ್ತದೆ,ಸಾಯುವಾಗ ವ್ಯಕ್ತಿಗೆ ಉಸಿರಿರೋದಿಲ್ಲ ಹೆಸರಿರುತ್ತದೆ ಅಂತಹ ವ್ಯಕ್ತಿ‌ಗಳಲ್ಲಿ ಸರ್ವಪಲ್ಲಿ ರಾದಾಕೃಷ್ಣ ರವರು ಒಬ್ಬರು. 1962ರಲ್ಲಿ ಸರ್ವಪಲ್ಲಿ ರಾದಕೃಷ್ಣ ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಿಮ್ಮ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ ಎಂದು ಕೇಳಿದಾಗ ಅವರು ನನ್ನ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ, ಬದಲಿಗೆ ನನ್ನ ಈ ಮಟ್ಟಕ್ಕೆ ಬೆಳೆಸಿದ್ದು ಒಬ್ಬ ಶಿಕ್ಷಕನಾಗಿದ್ದರಿಂದ ನೀವುಗಳು ಶಿಕ್ಷಕ ದಿನಾಚರಣೆಯನ್ನಾಗಿ ಆಚರಣೆ ಮಾಡಿ ಎಂದು ಹೇಳಿದರು. ಅದಕ್ಕಾಗಿ 1962 ಸೆಪ್ಟಂಬರ್ 5ರಂದು ಇಡೀ ಜಗತ್ತು ಶಿಕ್ಷಕ ದಿನಾಚರಣೆಯನ್ನಾಗಿ ಆಚರಣೆ ಮಾಡುತಿದ್ದೇವೆ. ಅದುವೇ ಭಾರತ ದೇಶ ಎಂದು ಅಮರೇಶ್ ಎತ್ಗಲ್ ಉಪನ್ಯಾಸ ನೀಡಿದರು.

ಶಿಕ್ಷಣವನ್ನು ಅಲುಗಾಡಿಸಿದರೆ ಇಡೀ ದೇಶವೇ ಅಲುಗಾಡುತ್ತದೆ ಎಂದು ತಹಸೀಲ್ದಾರ ಅರುಣ್ ಹೆಚ್ ದೇಸಾಯಿ ಮಾತನಾಡಿದರು. ಯಾವುದೇ ಅಪೇಕ್ಷೆ ಇಲ್ಲದೆ ಮಾಡುವ ವೃತ್ತಿ ಶಿಕ್ಷಕ ವೃತ್ತಿ ,ಅವರ ಮೇಲೆ ತುಂಬಾ ಜವಾಬ್ದಾರಿ ಇರುತ್ತದೆ ಎಂದು ಲಕ್ಷ್ಮೀದೇವಿ ಎಂದು ಮಾತನಾಡಿದರು.ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಮದ್ವರಾಜ ಆಚಾರ್ಯ,ನಗರಸಭೆ ಪೌರಾಯುಕ್ತ ಮಂಜುನಾಥ್ ಗುಂಡೂರ್ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ವಿಜಯ ರಂಗಾರೆಡ್ಡಿ ನಿರೂಪಣೆ ಹಾಗೂ ಬಸಲಿಂಗಪ್ಪ ಕ್ಷೇತ್ರ ಸಮನ್ವಯಾಧಿಕಾರಿ ಸ್ವಾಗತ ಮಾಡಿದರು. ರಾಘವೇಂದ್ರ ಟಿ. ಕೆ. ಶೈಕ್ಷಣಿಕ ಸಮಾಲೋಚನೆ ಕಲಿಕಾ ಚೇತರಿಕೆ ಉಪಕ್ರಮ ಹಾಗೂ ಹೊಸ ಶಿಕ್ಷಣ ನೀತಿ 2020 ಕುರಿತು ಶಿಕ್ಷಕರ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಮಲ್ಲನಗೌಡ ,ಸಾಬಣ್ಣ ವಗ್ಗರ್ , ಚಂದ್ರಶೇಖರ ಹಿರೇಮಠ, ಮಲ್ಲಪ್ಪ, ಶಿವಬಸಪ್ಪ , ವೀರೇಶ ಸಾಸಲಮರಿ, ವಿಠಲ್ , ರಾಜೇಂದ್ರ ಕುಮಾರ್, ಹುಸೇನಪ್ಪ ಗೋರೆಬಾಳ , ಸುಮಿತ್ರಾ ಹಿರೇಮಠ, ಅನುದಾನಿತ ಹಾಗೂ ಅನುದಾನ ರಹಿತ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪತ್ತಿನ ಸಹಕಾರ ಸಂಘ, ತಾಲೂಕಿನ ಸಮಸ್ತ ಶಿಕ್ಷಕ ವೃಂದದವರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend