ಐದು ಜನ ಟಿಬಿ ರೋಗಿಗಳನ್ನು ದತ್ತು ಪಡೆದ ಡಾ.ವೀರೇಶ್ ರೆಡ್ಡಿ.
ಸಿಂಧನೂರು : ಸ. 27. ಸಾರ್ವಜನಿಕ ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿ ಹಾಗೂ ಕಾಯಕಲ್ಪ ನೂಡಲ್ ಅಧಿಕಾರಿ ಡಾ.ವೀರೇಶ್ ರೆಡ್ಡಿ ರವರು ನಿಶ್ಚಯಮಿತ್ರ ಕಾರ್ಯಕ್ರಮದಡಿಯಲ್ಲಿ 5 ಜನ ಟಿಬಿ ರೋಗಿಗಳನ್ನು ದತ್ತು ಪಡೆದರು. ಮುಂದಿನ ಆರು ತಿಂಗಳವರೆಗೂ ಪೌಷ್ಟಿಕ ಆಹಾರವನ್ನು ನೀಡಲು ಒಪ್ಪಿಕೊಂಡಿರುತ್ತಾರೆ.
ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ನಾಗರಾಜ ಕಾಟ್ವಾ ಮಾತನಾಡಿ ಎಲ್ಲಾ ವೈದ್ಯಾಧಿಕಾರಿಗಳು ಟಿವಿ ರೋಗಿಗಳನ್ನು ದತ್ತು ಪಡೆಯಲು ಕರೆ ಕೊಟ್ಟರು. ಇನ್ನೋರ್ವ ವೈದ್ಯಾಧಿಕಾರಿ ಆದಂತ ವೀರೇಶ ರೆಡ್ಡಿ ಮಾತನಾಡಿ ಕ್ಷಯ ಮುಕ್ತ ಭಾರತ ನಿರ್ಮಾಣ ಮಾಡಲು ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳು,ಹಿರಿಯ ಆರೋಗ್ಯ ಸಹಾಯಕರು, ಸಂಗನಗೌಡ ಪಾಟೀಲ್ ಮತ್ತು ನರ್ಸಿಂಗ್ ಅಧಿಕಾರಿಗಳು, ಟಿಬಿ ಮೇಲ್ವಿಚಾರಕರಾದ ಯಮನೂರ,ನವೀನ್ ಕುಮಾರ ಉಪಸ್ಥಿತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
