ಬಿಜೆಪಿ ಸರಕಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲಾ – ಕೆ. ವಿರೂಪಾಕ್ಷಪ್ಪ.
ಸಿಂಧನೂರು :ಸ. 26.ಕಾಂಗ್ರೆಸ್ ಪಕ್ಷ ಚುನಾವಣಾ ಸಮೀಪಿಸುತ್ತಿದ್ದಂತೆ ಜನರ ಬಳಿ ಹೋಗಲು ಯಾವುದೇ ದಾರಿಯಿಲ್ಲದೇ ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿ ಬಗ್ಗೆ 40% ಪೇಸಿಎಂ ಎನ್ನುವ ಪೋಷ್ಟರಗಳನ್ನು ಅಂಟಿಸಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ.ಬಿಜೆಪಿ ಸರಕಾರ ದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲದ ರಾಜಕೀಯ ಅವರದು ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಕಾಂಗ್ರೆಸ್ ಪಕ್ಷದ ಹಾಗೂ ಮುಖಂಡರ ವಿರುದ್ಧ ಹರಿಹಾಯ್ದರು.
ನಗರದ ಪ್ರವಾಸಿ ಮಂದಿರದಲ್ಲಿ ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು 60 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ನರಸಿಂಹರಾವ್ ಮತ್ತು ಲಾಲ ಬಹದ್ದೂರ ಶಾಸ್ತ್ರಿ ಹೊರತುಪಡಿಸಿ, ಮನಮೋಹನ ಸಿಂಗ್ ಭ್ರಷ್ಟಾಚಾರ ಮಾಡದಿದ್ದರೂ ಅವರ ಆಡಳಿತದಲ್ಲಿ ಹಾಗೂ ಜವಹರಲಾಲ್ ನೆಹರು, ಇಂದಿರಾಗಾಂಧಿ ಸೇರಿದಂತೆ ಪ್ರಧಾನಿಗಳ ಆಡಳಿತದಲ್ಲಿ ಭ್ರಷ್ಟಾಚಾರದ ಆರೋಪಗಳಿವೆ. ಆದರೆ ಕಾಂಗ್ರೆಸ್ ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ. ನೇರವಾಗಿ ಮಾತನಾಡುವ, ಎದುರಿಸುವ ಅಥವಾ ದಾಖಲೆ ನೀಡುವ ಬದಲು ವಾಮಮಾರ್ಗ ಅನುಸರಿಸುತ್ತಿದೆ. ಭೂತದಬಾಯಲ್ಲಿ ಭಗವದ್ಗೀತೆ ಕೊಟ್ಟ ಹಾಗೇ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ದೇಶದಲ್ಲಿ ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಅದನ್ನು ಸಂಪೂರ್ಣ ವಾಗಿ ನಿರ್ಮೂಲನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಕಡಿವಾಣ ಹಾಕಬೇಕು. ಬಿಜೆಪಿ ಸರಕಾರದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ತನ್ನ ಅಧಿಕಾರದ ಅವಧಿಯಲ್ಲಿ ಅರ್ಜಿ ಹಾಕದೇ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿದ್ದಾರೆ. ಅಕ್ರಾವತಿ ಹಗರಣ ಗಡಿಯಾರ, ಇಂಧನ ಸಚಿವ ರಾಗಿದ್ದ ಡಿ.ಕೆ. ಶಿವಕುಮಾರನ ಸೋಲಾರ್ ಹಗರಣ, ಸಮಾಜ ಕಲ್ಯಾಣ ಸಚಿವರಾದ ಎಚ್.ಆಂಜನೇಯ ನ ಹಾಸಿಗೆ ದಿಬ್ಬು ಹಗರಣ, ಇವೆಲ್ಲ ಆರೋಪವನ್ನು ಮುಚ್ಚಿ ಹಾಕಲು ಲೋಕಾಯುಕ್ತವನ್ನು ನಿಷ್ಕ್ರಿಯ ಗೊಳಿಸಿ ಎಸಿಬಿಯನ್ನು ಜಾರಿಗೆ ತಂದರು. ಪ್ಯಾಕೇಜ್ ಸಿಸ್ಟಮ್ ನ್ನು ಕೂಡಾ ಸಿದ್ದರಾಮಯ್ಯ ಆಡಳಿತದಲ್ಲಿ ಜಾರಿಗೆ ತಂದಿದ್ದು. ಅದರ ಉದ್ದೇಶ ಲಂಚ ವಸೂಲಿ ಮಾಡಲು ಆದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡು ವ ನೈತಿಕತೆ ಸಿದ್ದರಾಮಯ್ಯನವರಿಗೆ ಎಲ್ಲಿದೆ ಎಂದು ಪ್ರಶ್ನೆಸಿದರು.
ಕಾಂಗ್ರೆಸ್ ಪಕ್ಷದವರಿಗೆ ಜನಪರ ಕಾಳಜಿ ಇಲ್ಲ, ಭ್ರಷ್ಟಾಚಾರದ ಬಗ್ಗೆ ದಾಖಲಾತಿ ಸಮೇತ ಆರೋಪ ಮಾಡಲಿ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ,ಯಾವುದೇ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳುವ ವ್ಯವಧಾನ ಅವರಲ್ಲಿ ಉಳಿದಿಲ್ಲ. ಜನಪರ ಕಾಳಜಿ ಕಾಣುತ್ತಿಲ್ಲ, ಕೆಟ್ಟ ರಾಜಕೀಯ ಮಾಡಿಕೊಂಡು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿ ದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದು ಹೇಳಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಂಟು ವರ್ಷಗಳ ಕಾಲ ಕಳಂಕ ರಹಿತ ಆಡಳಿತ ನೀಡಿದ್ದಾರೆ.ರಾಜ್ಯದಲ್ಲಿ ಎಸ್.ಡಿ.ಪಿ,ಮತ್ತು ಪಿ.ಎಪ್. ಐ. ಅಟ್ಟ ಹಾಸವನ್ನು ಮಟ್ಟ ಹಾಕಲು ಬಿಜೆಪಿ ಸರ್ಕಾರ ಮುಂದಾದರೆ ಕಾಂಗ್ರೆಸ್ ಪಕ್ಷ ಅವರಿಗೆ ಕುಮ್ಮಕ್ಕು ನೀಡುತ್ತಿದೆ. ಕಾಂಗ್ರೆಸ್ ಯುವ ಅಧ್ಯಕ್ಷ ನಲಪಾಡ ಒಂದು ಸಭೆಯಲ್ಲಿ ಯುವಕರಿಗೆ ಉದ್ಯೋಗ ಸಿಗದಿದ್ದಕ್ಕೆ ಭಯೋತ್ಪಾದಕರಾಗುತ್ತಾರೆ ಎಂದು ಹೇಳಿಕೆ ನೀಡುತ್ತಾರೆ,ಇದು ಭಯೋತ್ಪಾದನೆ ಗೆ ಬೆಂಬಲಿಸುವ ಹೇಳಿಕೆಯಾಗಿರುತ್ತದೆ. ತಾಲೂಕಿನ ಸಾಲಗುಂದಾ ಗ್ರಾಮದ ಒಬ್ಬ ಯುವಕ 2047 ಕ್ಕೆ ನಿಮ್ಮ ತಲೆಯಲ್ಲಿ ಮುಸ್ಲಿಂ ಟೋಪಿಯನ್ನು ಹಾಕಿ ಆಡಳಿತ ನಡೆಸುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಾನೆ. ದಡೇಸೂಗೂರು ಗ್ರಾಮದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಹಾಡನ್ನು ಹಾಕಿದ್ದಕ್ಕೆ ಈ ಹಾಡನ್ನು ಹಾಕಬೇಡಿ ಎಂದು ಮುಸ್ಲಿಂ ಯುವಕರು ವಿರೋಧ ಮಾಡುತ್ತಾರೆ. ಇವರಿಗೇನು ತೊಂದರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವನಗೌಡ ಗೋರೆಬಾಳ, ಹನುಮೇಶ ಸಾಲುಗುಂದಾ, ನೀರುಪಾದಿ ಜೋಳದರಾಶಿ, ಸಿದ್ದು ಹೂಗಾರ, ಸಂಗನಗೌಡ ದೇವರಗುಡಿ ಇತರರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
