ಧರ್ಮಸ್ಥಳ ಸಂಘದಿಂದ ಶ್ರೀ.ಹಿರೇಬೋಮ್ಮಲಿಂಗೇಶ್ವರ ದೇವಸ್ಥಾನಕ್ಕೆ ಚೆಕ್ ವಿತರಣೆ..
ಗುಡೇಕೋಟೆ : ಕೂಡ್ಲಿಗಿ ತಾಲೂಕಿನ ಚಿರತಗುಂಡು ಕಾರ್ಯಕ್ಷೇತ್ರದ ಶ್ರೀ.ಹಿರೇಬೋಮ್ಮಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನ ಅಭಿವೃದ್ದಿಗಾಗಿ ಧರ್ಮಸ್ಥಳ ಸ್ವ-ಸಹಾಯ ಸಂಘದ ವತಿಯಿಂದ ರೂ. 2 ಲಕ್ಷಗಳ ಚೆಕ್‍ನ್ನು ಶುಕ್ರವಾರದಂದು ಮಂದಿರದ ಟ್ರಸ್ಟ ಕಮೀಟಿ ಹಾಗೂ ವಿಜಯನಗರ ಜಿಲ್ಲಾ ನಿರ್ದೇಶಕರಾದ ಕೆ.ಚಿದಾನಂದ ರವರ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೂಡ್ಲಿಗಿ ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್.ಹಿರೇಬೋಮ್ಮಲಿಂಗೇಶ್ವರ ದೇವಸ್ಥಾನವು ತುಂಬಾ ಪವಾಡ ಶಕ್ತಿಶಾಲಿ ದೇವಸ್ಥಾವಾಗಿದ್ದು, ದೇವಸ್ಥಾನಕ್ಕೆ ಒಂದು ಸಮುದಾಯ ಭವನ ನಿರ್ಮಿಸುವುದು ಇಲ್ಲಿನ ಸಮಾಜದ ಮುಖಂಡರುಗಳ ಹಾಗೂ ಗ್ರಾಮವಾಸಿಗಳ ಹಲವಾರು ವರ್ಷಗಳ ಬೇಡಿಕೆಯಾಗಿತ್ತು, ಇದನ್ನು ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆಯವರು ಸಮುದಾಯ ಭವನ ನಿರ್ಮಾಣಕ್ಕೆ 2 ಲಕ್ಷ ಹಣ ನೀಡಲಾಗಿದೆ.
ಮುಖಂಡರ ಬೇಡಿಕೆಯನ್ವಯ ಧರ್ಮಸ್ಥಳದ ದರ್ಮಾಧಿಕಾರಿಗಳಾದ ಡಾ. ವಿರೇಂದ್ರ ಹೆಗ್ಗಡೆರವರ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ವ-ಸಹಾಯ ಸಂಘದ ವತಿಯಿಂದ ಸಮುದಾಯ ಭವನ ನಿರ್ಮಾಣಕ್ಕೆ 2 ಲಕ್ಷಗಳ ಚೆಕ್‍ನ್ನು ನೀಡಿದ್ದು, ಅವರಿಗೆ ವ್ಯಯಕ್ತಿಕವಾಗಿ ಹಾಗೂ ಸಮಾಜದ ಮತ್ತು ಮಂದಿರದ ಟ್ರಸ್ಟ ಕಮೀಟಿ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಾಗೂ ಅಲ್ಲಿನ ಗ್ರಾಮವಾಸಿಗಳು ಮುಖಂಡರುಗಳು ಡಾ ವಿರೇಂದ್ರ ಹೆಗ್ಗಡೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಧರ್ಮಸ್ಥಳ ಧರ್ಮಾಧಿಕಾರಿಗಳಿಗೆ ಹಾಗೂ ಸ್ವ-ಸಹಾಯ ಸಂಘಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆಯ ವಿಜಯನಗರ ಜಿಲ್ಲಾ ನಿರ್ದೇಶಕರಾದ ಕೆ ಚಿದಾನಂದ.ಕೂಡ್ಲಿಗಿ ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್.ತಾಯಕನಹಳ್ಳಿ ವಲಯ ಮೇಲ್ವಿಚಾರಕರಾದ ರಂಗಸ್ವಾಮಿ.ವಲಯದ ಸೇವಾ ಪ್ರತಿನಿಧಿಗಳು ಹಾಗೂ ಚಿರತಗುಂಡು ಗ್ರಾಮದ ಸಮಸ್ತ ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು…

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
