ನಿರಂತರ ಅಭ್ಯಾಸ ಯಶಸ್ವಿಯಾಗುವುದಕ್ಕೆ ಸಾಧ್ಯ- ಬಸವರಾಜ ನಾಡಗೌಡ.
ಸಿಂಧನೂರು :ಸ. 24. ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಾತ್ರಕ್ಕೆ ಕ್ರೀಡಾಪಟು ಆಗೋದಿಲ್ಲ ಪ್ರತಿ ದಿನ ನಿರಂತರ ಅಭ್ಯಾಸ ಮಾಡಿದರೆ ಮಾತ್ರ ನಿಮ್ಮ ಪ್ರಯತ್ನ ಯಶಸ್ವಿಯಾಗುವುದಕ್ಕೆ ಸಾಧ್ಯ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ತಿಳಿಸಿದರು.
ಇಂದು ನಗರದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು,ಪಿ.ಡಬ್ಲ್ಯೂ.ಡಿ, ಕ್ಯಾಂಪಿನಲ್ಲಿ ನಡೆದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ರಾಯಚೂರು ಹಾಗೂ ಶ್ರೀ ವಿ.ಸಿ.ಬಿ ಪದವಿ ಪೂರ್ವ ಕಾಲೇಜು ಸಿಂಧನೂರು ಇವರು ಗಳ ಸಂಯುಕ್ತಾ ಶ್ರಯದಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ 2022 ಉದ್ಘಾಟಿಸಿ ಮಾತನಾಡಿದರು.

ಕೆಲವರು ಕ್ರೀಡೆಯಲ್ಲಿ ಭಾಗವಹಿಸಬೇಕಾದರೆ ಆರೋಗ್ಯ ಚೆನ್ನಾಗಿರಲಿ,ಇನ್ನು ಕೆಲವರು ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಉದ್ದೇಶಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಯಾರು ಕ್ರೀಡೆಯಲ್ಲಿ ಭಾಗವಹಿಸುತ್ತಾರೋ ಅವರ ಮನಸ್ಸು ಸ್ವಚ್ಛವಾಗಿರುತ್ತದೆ. ಯೋಚನಾ ಶಕ್ತಿ ಜಾಸ್ತಿ ಇರುತ್ತದೆ. ಯುವಕರಿಗೆ ಕ್ರೀಡಾಭಿಮಾನ ವನ್ನು ಮೂಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು, ದೈಹಿಕ, ಮಾನಸಿಕ ನೆಮ್ಮದಿಗೆ ಕ್ರೀಡೆ ಅವಶ್ಯಕತೆ ಇದೆ ಎಂದರು.
ಆಟಗಳಿಗೆ ಮೊದಲು ಕ್ರೀಡಾ ಮನೋಭಾವದ ಅವಶ್ಯಕತೆ ಇದೆ. ಮನಸ್ಸು ಶಾಂತಿಗಾಗಿ ಕ್ರೀಡೆ ಬೇಕು. ಕೇವಲ ಬಹುಮಾನ ಗೆಲ್ಲಲು ಅಲ್ಲ. ಇಂದಿನ ಯುವಕರು ಕ್ರೀಡೆ ಜೊತೆಗೆ ಆರೋಗ್ಯದ ಕಡೆಗೆ ಗಮನ ಕೊಡಬೇಕು.ಕ್ರೀಡಾಪಟುಗಳು ಮಾನಸಿಕವಾಗಿ ಸದೃಢ ದೇಹ ಹೊಂದಿರುತ್ತಾರೆ. ಹೆಣ್ಣು ಮಕ್ಕಳು ಕೂಡ ಯಾವುದರಲ್ಲೂ ಕಡಿಮೆಯಿಲ್ಲ, ಹೆಣ್ಣುಮಕ್ಕಳೇ ಸ್ಟಾಂಗ್ ಗುರು ಎಂದು ಹೇಳುವಂತಾಗಿದೆ ಎಂದು ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಠ ಬಸವರಾಜ ಹೇಳಿದರು.
ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಮದ್ವರಾಜ್ ಅಚಾರ್ಯ,ತಹಸೀಲ್ದಾರ ಅರುಣ್ ಹೆಚ್ ದೇಸಾಯಿ ಅಶೋಕ ಬೆನ್ನೂರು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪಾಟೀಲ
ಅಧ್ಯಕ್ಷರು ನಗರಸಭೆ, ರಾಜಶೇಖರ ಪಟ್ಟಣಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಲಕ್ಷ್ಮೀ ದೇವಿ, ಡಾ. ಅಯ್ಯನಗೌಡ ತಾಲೂಕು ಆರೋಗ್ಯ ಅಧಿಕಾರಿ, ಡಾ.ಎಸ್. ಶಿವರಾಜ ಪ್ರಾಚಾರ್ಯರು, ವಿಜಯರಂಗಾರಡ್ಡಿ ದೈಹಿಕ ಶಿಕ್ಷಣ ಪರಿವಿಕ್ಷಕರು, ಚಂದ್ರಶೇಖರ ಬೇನ್ನೂರು, ಚಂದ್ರಶೇಖರ ಯರದಿಹಾಳ ಇನ್ನಿತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
