ಕರಡಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಿಂದ ತಾಲೂಕು ಮಟ್ಟದ ಪ್ರಥಮ ಸ್ಥಾನ…!!!

ಕರಡಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಿಂದ ತಾಲೂಕು ಮಟ್ಟದ ಪ್ರಥಮ ಸ್ಥಾನ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕರಡಿಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾದ ಶ್ರೀನಿಧಿ ಚಂದ್ರಶೇಖರ್ ಪುರದಲ್ಲಿ ನಡೆದ ಪ್ರತಿಭಾಕಾರಂಜಿಯಲ್ಲಿ ಕ್ಲಾಸ್ಟರ್ ಮಠದ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಪಡೆದು ನಂತರ ತಾಲೂಕುಮಟ್ಟಕ್ಕೆ ಆಯ್ಕೆಯಾಗಿದ್ದು.

ಕೂಡ್ಲಿಗಿಯ ಜ್ಞಾನ ಭಾರತಿ ಶಾಲೆಯ ಆವರಣದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಕರಡಿಹಳ್ಳಿ ಶಾಲೆಯ ಶಿಕ್ಷಕರಾದ ಸರೋಜಮ್ಮ ಕೆ ಹಾಗೂ ಮುಖ್ಯಗುರುಗಳಾದ ನಾಗರಾಜ್ ಆಚಾರಿ ಹಾಗೂ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಪ್ರತಿಭಾಕಾರಂಜಿಯಲ್ಲಿ ಶುಭ ಕೋರಿದರು ಈ ಸಂದರ್ಭದಲ್ಲಿ ಚಂದ್ರಶೇಖರ್ ಪುರದ (C R P ) ವಿಶಾಲ ರವರು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯಾದ ಶ್ರೀನಿಧಿ ರವರನ್ನು ಚಿಕ್ಕ ವಯಸ್ಸಿಗೆ ತಾಲೂಕು ಮತದ ಚಿತ್ರಕಲೆಗೆ ಭಾಗಿಯಾಗಿ ಪ್ರಥಮ ಪಡೆದಿದ್ದು ನನಗೆ ಸಂತೋಷವಾಗಿದೆ ವಿಡಿಯೋ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜಯಗಳಿಸಲಿ ಎಂದು ಹಾರೈಸುತ್ತೇನೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಿಕ್ಷಕರ ಗಳ ಜೊತೆಗೆ ಪ್ರಮಾಣಪತ್ರವನ್ನು ನೀಡಿದರು ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಯಿಂದ ಶಿಕ್ಷಕರಿಗೆ ಹಾಗೂ ನನ್ನೆಲ್ಲಾ ಸ್ನೇಹಿತರಿಗೂ ಸಿಹಿ ಹಂಚಿದರು ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರಾದ ಬೋರಣ್ಣ ಹಾಗೂ ಅಡಿಗೆ ಸಿಬ್ಬಂದಿಯವರು ಮತ್ತು ಅವರ ಹಿರಿಯ ಅಣ್ಣನಾದ ತ್ರಿನೇತ್ರ ಕುಮಾರ್ ರವರು ವಿಶೇಷವಾಗಿ ಶುಭ ಹಾರೈಸಿದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend