ರಾಮಲಿಂಗಪ್ಪ.ಬಿ.ಕೆ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ
ಬಳ್ಳಾರಿ,: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರಾಗಿರುವ ರಾಮಲಿಂಗಪ್ಪ.ಬಿ.ಕೆ ಇವರು ಉಪನಿರ್ದೇಶಕರಾಗಿ ಮುಂಬಡ್ತಿ ಪಡೆದು ಕೇಂದ್ರ ಕಚೇರಿಗೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಗುರುವಾರದಂದು ಇಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಕಚೇರಿ ಸಿಬ್ಬಂದಿಗಳಿಂದ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಯಿತು.
ಬಳ್ಳಾರಿ ಕಚೇರಿಯ ಸಿಬ್ಬಂದಿಗಳಾದ ಪ್ರಥಮ ದರ್ಜೆ ಸಹಾಯಕರಾದ ಗುರುರಾಜ.ವಿ.ಸಿ, ವಿಜಯನಗರ ಜಿಲ್ಲೆ ಕಚೇರಿಯ ಪ್ರಥಮ ದರ್ಜೆ ಸಹಾಯಕ ನಿರ್ದೇಶಕರಾದ ರಾಮಾಂಜಿನೇಯ, ಗ್ರೂಪ್ ಡಿ ನೌಕರರಾದ ಹೆಚ್.ವಿಜಯಕುಮಾರ, ರೋಜ್ ಮೇರಿ, ಹನುಮಂತಪ್ಪ, ಶ್ರೀಧರ್ ಕವಾಲಿ, ವಾಹನ ಚಾಲಕ ಕೃಷ್ಣಸ್ವಾಮಿ ಹಾಗೂ ಅಪ್ರೆಂಟಿಸ್ ತರಬೇತುದಾರರಾದ ಹನುಮೇಶ್.ಹೆಚ್, ರಾಮ್ ಹೆಚ್.ಬಿ, ಮಲ್ಲಿಕಾರ್ಜುನ ಎಲ್ಲರೂ ರಾಮಲಿಂಗಪ್ಪ.ಬಿ.ಕೆ ಅವರಿಗೆ ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟರು.
ಇದೇ ಸಂದರ್ಭದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ(ಪ್ರ) ಧನಂಜಯಪ್ಪ.ಬಿ ಅವರನ್ನು ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಕಲಬುರಗಿ ವಿಭಾಗದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಚಂದ್ರಕಾಂತ ಅವರು ಇದ್ದರು…

ವರದಿ. ವಿರೇಶ್. ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
