ಕಾಲೇಜಿಗೆ ಗೈರು, ವಿದ್ಯಾರ್ಥಿ ಮೇಲೆ ಹಲ್ಲೆ
ಸಿಂಧನೂರು.ಸ.20- ಕಾಲೇಜಿಗೆ ವಿದ್ಯಾರ್ಥಿ ಗೈರಾದ ಕಾರಣಕ್ಕೆ ಕಾಲೇಜು ಮುಖ್ಯಸ್ಥರೆ ವಿದ್ಯಾರ್ಥಿಯ ಮೇಲೆ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದು ಇದನ್ನು ಖಂಡಿಸಿ ವಿದ್ಯಾರ್ಥಿಯ ಪೋಷಕರು ಸಂಘಟನೆಗಳ ಮುಖಂಡರ ಜೊತೆ ಗೂಡಿ ಇಂದು ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿ ಹಲ್ಲೆ ಮಾಡಿದ ಶಿಕ್ಷಕನ ಮೇಲೆ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಆದರ್ಶ ಕಾಲೋನಿಯಲ್ಲಿರುವ ದುದ್ದು ಪೂಡಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ ಮಣಿಕಂಠ ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದಾನೆ ಹಲ್ಲೆ ಮಾಡಿದ ಶಿಕ್ಷಕ ಕಾಲೇಜಿನಿಂದ ಪರಾರಿಯಾಗಿದ್ದಾನೆ.

ರವಿವಾರ ವಿಶೇಷ ತರಗತಿ ಇದ್ದು ನನಗೆ ಆರೋಗ್ಯ ಸರಿ ಇಲ್ಲ ಕಾಲೇಜಿಗೆ ಬರುವದಿಲ್ಲ ಎಂದು ದೂರವಾಣಿ ಮಾಡಿ ಹೇಳಿದ್ದು ಮರು ದಿನ ಸೋಮವಾರ ಕಾಲೇಜಿಗೆ ವಿದ್ಯಾರ್ಥಿ ಮಣಿಕಂಠ ಬಂದಾಗ ನಿನ್ನೆ ಯಾಕೆ ಕಾಲೇಜಿಗೆ ಬಂದಿಲ್ಲ ಎಂದು ಕಾಲೇಜಿನ ಮುಖ್ಯಸ್ಥರಾದ ನಾರಾಯಣ ವಿದ್ಯಾರ್ಥಿಯನ್ನು ಒಂದು ಕೊಠಡಿಯ ಒಳಗಡೆ ಕೂಡಿ ಹಾಕಿ ಮನಬಂದಂತೆ ಬಾಸುಂಡೆ ಬರುವ ಹಾಗೆ ಬಡಿದು ಹಲ್ಲೆ ಮಾಡಿದ್ದಾರೆ ಎನ್ನುವದು ಪಾಲಕರ ಆರೋಪವಾಗಿದೆ.
ಹಲ್ಲೆ ಮಾಡಿದ ವಿಷಯ ವಿದ್ಯಾರ್ಥಿ ಪೋಷಕರಿಗೆ ತಿಳಿಸಿದ್ದು ಇಂದು ದಲಿತ ಸಂಘಟನೆಗಳ ಮುಖಂಡರಾದ ಗುರುರಾಜ್ ಮುಕುಂದ,ಮಹ್ಮದ ಅಲಿ ನೇತೃತ್ವದಲ್ಲಿ ಕಾಲೇಜಿಗೆ ಬಂದು ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಪ್ರತಿಭಟನೆ ನಡಿಸಿದರು.ಹಲ್ಲೆ ಮಾಡಿದ್ದು ತಪ್ಪುಇನ್ನೂ ಮುಂದೆ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳುವದಾಗಿ ಕಾಲೇಜಿನ ಅಧ್ಯಕ್ಷ ರಾದ ರಾಮಕೃಷ್ಣ ಮೂರ್ತಿ ಪ್ರತಿಭಟನೆಯಲ್ಲಿ ಮನವಿ ಮಾಡಿಕೊಂಡರು ಸಹ ಹಲ್ಲೆ ಮಾಡಿದ ಶಿಕ್ಷಕನ್ನು ನಮ್ಮ ಮುಂದೆ ಕರೆಯಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು.ಸ್ಥಳಕ್ಕೆ ನಗರ ಠಾಣೆಯ ಪೋಲೀಸರು ಬಂದು ಗಲಾಟೆ ಮಾಡದೆ ಠಾಣೆಗೆ ಬಂಧು ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
