ವನಸಿರಿ ಫೌಂಡೇಶನ್ ನಿಂದ ವೃಕ್ಷ ತಪಸ್ವಿ ಸಾಲುಮರದ ವೀರಾಚಾರಿಗೆ ಶ್ರದ್ಧಾಂಜಲಿ.
ಸಿಂಧನೂರು : ಸ.21.ನಗರದ ಗಾಂಧಿ ಸರ್ಕಲ್ ನಲ್ಲಿ ವನಸಿರಿ ಫೌಂಡೇಶನ್ ರಾಜ್ಯ ಘಟಕ ಸಿಂಧನೂರು ವತಿಯಿಂದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಿಕಟ್ಟೆ ಗ್ರಾಮದ “ವೃಕ್ಷ ತಪಸ್ವಿ ಸಾಲುಮರದ ವೀರಾಚಾರಿ” ಅವರು ಅಕಾಲಿಕ ವಾಗಿ ಮರಣಹೊಂದಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಗೌರವ ಅದ್ಯಕ್ಷರಾದ ಶಂಕರಗೌಡ ಎಲೆಕೂಡ್ಲಿಗಿ, ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ಜೀವಸ್ಪಂದನ ಟ್ರಸ್ಟ್ ಕಾರ್ಯದರ್ಶಿಗಳಾದ ಅವಿನಾಶ ದೇಶಪಾಂಡೆ, ವನಸಿರಿ ಫೌಂಡೇಶನ್ ರಾಜ್ಯ ಸಂಚಾಲಕರಾದ ಮಂಜುನಾಥ ಗಾಣಗೇರ, ರಾಜ್ಯ ಕಾರ್ಯದರ್ಶಿ ಶರಣೇಗೌಡ ಹೆಡಗಿನಾಳ, ಸಿಂಧನೂರು ತಾಲೂಕ ಅದ್ಯಕ್ಷರಾದ ರಮೇಶ ಕುನ್ನಟಗಿ, ಮಸ್ಕಿ ತಾಲೂಕು ಅದ್ಯಕ್ಷರಾದ ರಾಜು ಬಳಗಾನೂರ, ವೀರಭದ್ರಯ್ಯ ಸ್ವಾಮಿ ತಿಮ್ಮಾಪುರ, ದುರ್ಗೇಶ dsp, ಮುತ್ತು ಪಾಟೀಲ ಬೂತಲದಿನ್ನಿ, ಬಸವರಾಜ್ ಜೆಸಿಬಿ ಪಿಡಬ್ಯೂಡಿ ಕ್ಯಾಂಪ್, ಸಂತೋಷ ಭೂತಲದಿನ್ನಿ, ಬೀರಪ್ಪ ನಂದಿನಿ ಮಿಲ್ಕ್ ಜನತಾ ಕಾಲೋನಿ, ಚನ್ನಪ್ಪ ಕೆ.ಹೊಸಳ್ಳಿ ಜಾಲತಾಣ ಅಧ್ಯಕ್ಷರು, ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ರಂಜಾನ್ ಸಾಬ್, ಇದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
