ಹೂಡೇಂ ಗ್ರಾ.ಪಂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 4ನೇ ವಾರ್ಷಿಕ ಮಹಾಜನ ಸಭೆ…!!!

ಹೂಡೇಂ ಗ್ರಾ.ಪಂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 4ನೇ ವಾರ್ಷಿಕ ಮಹಾಜನ ಸಭೆ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಆವರಣದಲ್ಲಿ ಇಂದು ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಯಮಿತ ನಾಲ್ಕನೇ ವಾರ್ಷಿಕ ಮಹಾಜನ ಸಭೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಜರುಗು ಬೋರಯ್ಯ ನವರ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಸಲಾಯಿತು. ಹೂಡೇಂ ಗ್ರಾಮದಲ್ಲಿ ಆಡಳಿತ ಮಂಡಳಿಯ ಸಭೆ ನಡೆಸಿದ್ದು ಪಾವತಿಸಿದ ಸದಸ್ಯರಿಗೆ ಸದ್ಯಸ್ತವ ನೀಡಿ ಅನುಮೋದಿಸುವ ಒಟ್ಟು 9 ಆಡಳಿತ ಮಂಡಳಿಯ ಸಭೆಗಳು ನಡೆಸಿದ್ದು ಈ ಸಭೆಗಳಲ್ಲಿ ಷೆರು ಪಾವತಿಸಿದ ಸದಸ್ಯತ್ವ ನೀಡಿ ಅನುಮೋದಿಸುವ ಬಗ್ಗೆ ಪಾಹಣಿ ನೀಡಿದ ರೈತರಿಗೆ ಎನ್.ಸಿ.ಎಲ್ ಅನುಮೋದನೆಗೆ ಕಳುಹಿಸುವಬಗ್ಗೆ, ಕೆ.ಸಿ.ಸಿ ಸಾಲದ ಮಂಜೂರಾತಿಯ ಬಗ್ಗೆ, ಪಿಗ್ನಿ ಸಂಗ್ರಹದ ಬಗ್ಗೆ, ಜಿ.ಡಿ.ಪಿ ಸಾಲದ ವಿತರಣೆ ಮತ್ತು ವಸೂಲತಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಸಂಘವು ಒಟ್ಟು 927 ಷೆರು ಸದ್ಯನ್ನರನ್ನು ಹೊಂದಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಬಿ. ಕೊಟ್ರೇಶ್ ಕ್ಷೇತ್ರಾಧಿಕಾರಿಗಳು ಬಿ.ಡಿ.ಸಿ.ಸಿ. ಬ್ಯಾಂಕ್ ಹೊಸಹಳ್ಳಿ, ಉಪಾಧ್ಯಕ್ಷರು ಎಚ್.ಕೆ ಮಹಾಂತೇಶ್, ನಿರ್ದೇಶಕರಾದ ಬಿ. ಶರಣಪ್ಪ ಹುಡೇಂ, ಜಿ. ತಿಪ್ಪೇಸ್ವಾಮಿ ಹೂಸೂರು, ಬೋಸೆಮಲ್ಲಯ್ಯ ಹುಡೇಂ, ಪೆದ್ದೂಬಯ್ಯ , ಎನ್. ಚಂದ್ರಶೇಖರ್, ಎಂ.ಪಿ.ರವಿ ತಾಯಕನಹಳ್ಳಿ, ಎನ್.ಜಿ ಅಯ್ಯಣ್ಣ ಹುಡೇಂ, ಶ್ರೀಮತಿ ಕಮಲಮ್ಮ, ಶ್ರೀಮತಿ ಗಂಗಮ್ಮ, ಶ್ರೀಮತಿ ಕೊಲ್ಲಾರಮ್ಮ ಹುಡೇಂ, ಎನ್. ವಿಶ್ವನಾಥ್ ಮುಖ್ಯ ಕಾರ್ಯನಿರ್ವಾಹಕರು ಮತ್ತು ಡಿ ರಾಜಣ್ಣ ಪಿಗ್ನಿ ಏಜೆಂಟ್, ಬಿ ಕುಮಾರ್ ಪಿಗ್ಮಿ ಏಜೆಂಟ್ ಸಿಬ್ಬಂಧಿ ವರ್ಗದವರು, ಊರಿನ ಗ್ರಾಮಸ್ಥರು ಉಪಸ್ಥಿದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend