ಗುಡೇಕೋಟೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ: ಕಿಸಾನ್ ಸಭಾ ರೈತರಿಂದ ಪ್ರತಿಭಟನೆ.
ಕೂಡ್ಲಿಗಿ: ತಾಲೂಕಿನ ಗುಡೇಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಹಾಗೂ ರೈತರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಹಾಗೂ ಕಟ್ಟಡ ಕಾರ್ಮಿಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಗುಡೇಕೋಟೆ ಮುಖ್ಯ ಸರ್ಕಲ್ ನಿಂದ ನಾಡಕಚೇರಿ ವರೆಗೂ ಹೊರಟ ಜಾಥಾ ರೈತ ವಿರೋಧಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರೈತರು ಘೋಷಣೆ ಕೂಗುತ್ತ ನಾಡಕಚೇರಿಯ ಅಧಿಕಾರಿಗಳಿಗೆ ಗ್ರಾಮೀಣ ಭಾಗದ ಸ್ಥಳಿಯ ಸಮಸ್ಯೆಗಳನ್ನು ಈಡೇರಿಕೆಗಾಗಿ ಒತ್ತಾಯಿಸಿ ಉಪತಹಸೀಲ್ದಾರ್ ಕೊಟ್ರಮ್ಮ ಅವರಿಗೆ ಮನವಿ ಪತ್ರ ಸಲ್ಲಿಸಿದರು.
*ಗುಡೇಕೋಟೆ ಗ್ರಾ ಪಂ ವ್ಯಾಪ್ತಿಯ ಹಳ್ಳಿಗಳ ವಿವಿಧ ಬೇಡಿಕೆಗಳು.*
ಗುಡೇಕೋಟೆ ಹೋಬಳಿ ಎಲ್ಲಾ ರೈತರಿಗೆ ಅಕ್ರಮ ಸಕ್ರಮ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ ಎಲ್ಲಾ ರೈತರಿಗೆ ಪಟ್ಟ ನೀಡಬೇಕು. ರೈತರ ಜಮೀನುಗಳ ಬೆಳೆಗಳಿಗೆ ಕರಡಿ ಮತ್ತು ಹಂದಿಗಳ ದಾಳಿಯಿಂದ ರಕ್ಷಿಸಿ, ರೈತರಿಗೆ ಪರಿಹಾರ ನೀಡಿ ಜಮೀನುಗಳಿಗೆ ಕಾಡುಪ್ರಾಣಿಗಳನ್ನುಗ್ಗದಂತೆ ಆರನೇ ಇಲಾಖೆ ಕ್ರಮ ಕೈಗೊಳ್ಳಬೇಕು. ಗುಡೆಕೋಟೆ ಗ್ರಾಮದಲ್ಲಿರುವ ಎರಡು ಕಲ್ಯಾಣ ಮಂಟಪಗಳನ್ನು ಬಾಡಿಗೆ ನೀಡಿದ್ದು ಅವುಗಳನ್ನು ಬಿಡಿಸಿ ಸಾರ್ವಜನಿಕರ ಉಪಯೋಗಕ್ಕಾಗಿ ಮೀಸಲಿಡಬೇಕು. ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಜನರು ಪರದಾಡುತ್ತಿದ್ದಾರೆ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಬೇಕು.ಹಾಗೆ ಖಾಯಂ ವೈದ್ಯರನ್ನು ನೇಮಕ ಮಾಡಬೇಕು. ನಾಡಕಚೇರಿ ನೂತನ ಕಟ್ಟಡ ನಿರ್ಮಾಣಗೊಂಡು ವರ್ಷಗಳ ಕಳೆದರೂ ಅಲ್ಲಿಗೆ ಕಚೇರಿ ಸ್ಥಳಾಂತರಗೊಂಡಿರುವುದಿಲ್ಲ ಕೂಡಲೇ ಸ್ಥಳಾಂತರಿಸಬೇಕು. ಉಪತಹಸಿಲ್ದಾರ್ ಸೇರಿ ಸಿಬ್ಬಂದಿಗಳು ಸಹ ಮಧ್ಯಾಹ್ನ 12 ಗಂಟೆಗೆ ಕಚೇರಿಗೆ ಬರುತ್ತಿದ್ದು.ಸರಿಯಾಗಿ ರೈತರು ಸಾರ್ವಜನಿಕರ ಕೆಲಸಗಳು ವಿಳಂಬ ಆಗುತ್ತಿದೆ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಂಡು ರೈತರಿಗೆ ನ್ಯಾಯ ನೀಡಬೇಕು. ಗ್ರಾಮದ ವಾಲ್ಮೀಕಿ ಸಮುದಾಯಕ್ಕೆ ಸ್ಮಶಾನವಿದ್ದು. ಇರುವಂತ ಸ್ಮಶಾನವನ್ನು ಅಭಿವೃದ್ಧಿಪಡಿಸಿ ವಾಲ್ಮೀಕಿ ಸಮುದಾಯದ ರುದ್ರಭೂಮಿ ಎಂದು ದಾಖಲಾತಿಗಳಲ್ಲಿ ನಮೂದಿಸಬೇಕು. ಯರ್ರೋಬಯ್ಯನಹಟ್ಟಿ ಹಾಗೂ ಸಿಡೇಗಲ್ ಗುಡೇಕೋಟೆ ಇನ್ನಿತರ ಹಳ್ಳಿಗಳಿಗೆ ಮೂಲಭೂತ ಸೌಲಭ್ಯಗಳು ಸರ್ಕಾರದ ಯೋಜನೆ ಮನೆಗಳು ಸುಮಾರು ವರ್ಷಗಳಿಂದ ಪಂಚಾಯಿತಿ ವತಿಯಿಂದ ನಿವೇಶನ ನೀಡದೆ ಬಡವರಿಗೆ ವಂಚನೆ ಆಗುತ್ತಿದ್ದು. ನಿರ್ಗತಿಕರಿಗೆ ವಸತಿಹೀನರಿಗೆ ನಿವೇಶನಗಳನ್ನು ಗುಡೇಕೋಟೆ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಎಸ್ ಸಿ ಎಸ್ ಟಿ ಸಮುದಾಯದ ರೈತರು ಅಧಿಕವಾಗಿದ್ದು ಪ್ರತಿ ವರ್ಷ 5000 ತಾಡಾಪಲ್. ಹೆಚ್ಚುವರಿ ಮಂಜೂರು ಮಾಡಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಚರಂಡಿ ಬೀದಿ ದೀಪಗಳ ವ್ಯವಸ್ಥೆ ಇನ್ನಿತರ ಮೂಲ ಸೌಲಭ್ಯಗಳ ವ್ಯವಸ್ಥೆಯನ್ನು ಕೂಡಲೇ ಈ ಗ್ರಾಮಗಳಿಗೆ ಕಲ್ಪಿಸಿ ಕೊಡಬೇಕು. ಗುಡೇಕೋಟೆ ಹೋಬಳಿಯ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸಿಸಿ ರಸ್ತೆಗಳು ಚರಂಡಿಗಳು ದನ ಕರುಗಳಿಗೆ ನೀರಿನ ತೊಟ್ಟಿಗಳು ಬೀದಿ ದೀಪಗಳು ಕೃಷಿ ಇಲಾಖೆ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಗಳಿಂದ ಸಾರ್ವಜನಿಕರಿಗೆ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ವಿಳಂಬ ಮಾಡದೆ ಹಳ್ಳಿಗಳನ್ನ ಅಭಿವೃದ್ಧಿ ಪಡಿಸಿ.ರೈತರಿಗೆ ಹಾಗೂ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಹಾಗೆ ಸಾಮಾಜಿಕ ಭದ್ರತೆಗಾಗಿ ಹೊಸ ಯೋಜನೆಗಳನ್ನು ರೂಪಿಸಬೇಕು. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು. ಗುತ್ತಿಗೆ ಕಾರ್ಮಿಕ ಪದ್ದತಿ ರದ್ದುಗೊಳಿಸಬೇಕು. ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಬೇಕು. ರೈತರಿಗೆ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿದರು.ಗುಡೇಕೋಟೆ ನಾಡಕಛೆರಿಯ ಉಪತಹಸೀಲ್ದಾರ್ ಕೊಟ್ರಮ್ಮ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ವೀರಣ್ಣ, ಯು.ಪೆನ್ನಪ್ಪ, ಓಬಳೇಶ್ ಬಾಬು, ಕುಬೇರ, ಮಂಜುನಾಥ್, ಎಚ್.ಡಿ.ಪಾಲಮ್ಮ, ಶಂಬಣ್ಣ, ಟೈಲರ್ ಕೃಷ್ಣಪ್ಪ, ಸಿದ್ದಪ್ಪ, ಹೇಮಣ್ಣ, ಪ್ರಭು, ಬೋಮ್ಮಣ್ಣ, ವೈ.ಬಸವರಾಜ್, ಮಾಳಗಿ ಕೃಷ್ಣಪ್ಪ, ಯರ್ರೀಸ್ವಾಮಿ, ಕುಮಾರಸ್ವಾಮಿ, ಪಾಲಯ್ಯ, ರಮೇಶಗೌಡ, ಹಂಪಣ್ಣ, ನಾಗರಾಜ್, ಗಂಗಣ್ಣ, ಮೂರ್ತಿ, ತಿಪ್ಪೇಸ್ವಾಮಿ, ಶ್ರೀನಿವಾಸ, ನಾಗರಾಜ್ ಸೇರಿದಂತೆ ಅನೇಕ ರೈತ ಮುಖಂಡರು.ಕಟ್ಟಡ ಕಾರ್ಮಿಕರು, ಯುವಕರು, ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ.ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
