ಪಗಡದಿನ್ನಿ ಗ್ರಾಮ ಪಂಚಾಯತಿಯಲ್ಲಿ ಅಂಗವಿಕಲರಿಗೆ ಹೊಲಿಗೆ ಯಂತ್ರ ವಿತರಣೆ.
ಸಿಂಧನೂರು : ಸ.13. ತಾಲ್ಲೂಕಿನ ಕುನ್ನಟಗಿ ಹೋಬಳಿ ಪಗಡದಿನ್ನಿ ಗ್ರಾಮ ಪಂಚಾಯಿತಿ ವತಿಯಿಂದ 22 ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡಲಾಯಿತು.

ಗ್ರಾಮ ಪಂಚಾಯಿತಿಯ 2020- 21 ನೇ ಸಾಲಿನಲ್ಲಿ 15 ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಪಂಚಾಯಿತಿ ಅಧ್ಯಕ್ಷೆ ರಮೀಜಾ ಬೇಗಂ ಅವರು ಫಲಾನುಭವಿಗಳಿಗೆ ಒಂದು ಬೈಸಿಕಲ್ ಹಾಗೂ 22 ಹೊಲಿಗೆ ಯಂತ್ರವನ್ನು ವಿತರಣೆ ಮಾಡಿ ಮಾತನಾಡಿ ಅಂಗವಿಕಲರು ಹಾಗೂ ಮಹಿಳೆಯರುಆರ್ಥಿಕವಾಗಿ ಪ್ರಗತಿಯಾಗಲು ಸ್ವಂತ ಉದ್ಯೋಗವನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಹೊಲಿಗೆ ಯಂತ್ರ ನೀಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಂಕೋಬ ನಾಯಕ, ಸದಸ್ಯರಾದ ಲಕ್ಷ್ಮೀ ಪರಶುರಾಮ, ನಿರುಪಾದಿ ನಾಯಕ, ಹುಸೇನಸಾಬ, ಬಸನಗೌಡ, ಲಕ್ಷ್ಮಮ್ಮ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಓಂಕಾರಿ,ಬಿಲ್ ಕಲೆಕ್ಟರ್ ಬಸವರಾಜ,ಅಕೌಂಟೆಂಟ್ ಕೃಷ್ಣ, ವಿಆರ್ ಡಬ್ಯೂ ಚಂದಪ್ಪ, ಗ್ರಾಮದ ಮುಖಂಡರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
