ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದಲ್ಲಿ ಭಾನುವಾರದಂದು ಈಜಲು ಹೋದ ಇಬ್ಬರು ಯುವಕರಾದ ಕೊಟ್ಟೂರಿನ ಚರಣ್ 32 ವರ್ಷ. ಹಾಗೂ ಉಜ್ಜನಿ ಗ್ರಾಮದ ಎಂ.ಆರ್. ಹಾಲೇಶ್, 34 ವರ್ಷ, ಈಜಲು ಹೋಗಿ ಸಾವನ್ನಪ್ಪಿದ್ದಾರೆ. ಭಾನುವಾರ ರಂದು ಕೊಟ್ಟೂರು ಭಾಗದಿಂದ ಮಾಲವಿ ಜಲಾಶಯ ನೋಡಲು ಸ್ನೇಹಿತರೊಂದಿಗೆ ಬಂದಿದ್ದರು.
ಇಬ್ಬರು ಈಜಲು ಹೋಗಿ ನೀರಿನಲ್ಲಿ ಪ್ರಾಣ ಬಿಟ್ಟಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸೋಮವಾರ ಹಗರಿಬೊಮ್ಮನಹಳ್ಳಿ ತಾಲೂಕಿನ ಪೊಲೀಸ್ ಠಾಣೆಯ ಅಧಿಕಾರಿಗಳಾದ, ಸಿ ಪಿ ಐ ಮಂಜಣ್ಣ, ಹಾಗೂ ಪಿ ಎಸ್ ಐ ಸರಳ ಇವರ ಸಮ್ಮುಖದಲ್ಲಿ ಅಗ್ನಿಶಾಮಕ ಠಾಣೆ ಅವರಿಂದ ಶೋಧ ಕಾರ್ಯದಲ್ಲಿ ಬೆಳಗ್ಗೆ 10:30ರ ಸಮಯದಲ್ಲಿ ವ್ಯಕ್ತಿಯಾದ ಚರಣ್ ಶವವನ್ನು ತೆಗೆಯುವುದರಲ್ಲಿ ಯಶಸ್ವಿಯಾದರು, ಮತ್ತು ಇನ್ನೊಂದು ಶವ ಶೋಧ ಕಾರ್ಯಾಚರಣೆ ಯಲ್ಲಿ ತೊಡಗಿದ್ದರು . ನಂತರ ತಾಲೂಕಿನ ಸೀಗನಹಳ್ಳಿ ಗ್ರಾಮದ ಸಮಾಜ ಸೇವಕನಾದ ಯುವಕ ರಾಜ ಭಕ್ಷಿ ನೀರಿನಲ್ಲಿ ಈಜಿ ಇನ್ನೊಬ್ಬ ಮೃತಪಟ್ಟ ವ್ಯಕ್ತಿಯಾದ, ಎಂ ಆರ್ ಹಾಲೇಶ್ ನ ಶವವನ್ನು ಹೊರಗೆ ತೆಗೆದಿದ್ದಾನೆ.
ಈತನ ಸಾಹಸಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದವರು ಮೆಚ್ಚುಗೆ ವ್ಯಕ್ತಪಡಿಸಿದರು . ಮತ್ತು ಇವರ ಜೊತೆಯಲ್ಲಿ ಹರೇ ಗೊಂಡನಹಳ್ಳಿ ಗ್ರಾಮದ ಪರಮೇಶ್ವರಪ್ಪ, ಮಾಲ್ವಿ ಹನುಮಂತಪ್ಪ, ಇವರು ಸಹ ಶೋಧ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು , ಇಬ್ಬರ ಶವವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷಿಸಿ, ನಂತರ ಅವರ ಕುಟುಂಬಗಳಿಗೆ ಒಪ್ಪಿಸಲಾಯಿತು. ಈ ಸಮಯದಲ್ಲಿ ತಾಲೂಕು ದಂಡಾಧಿಕಾರಿಗಳಾದ, ಕಾರ್ತಿಕ್, ಹಾಗೂ ಸಿಬ್ಬಂದಿಯವರು, ಪೊಲೀಸ್ ಅಧಿಕಾರಿಗಳ ಸಿಬ್ಬಂದಿ ಗಳು, ಹಾಗೂ ಅಗ್ನಿಶಾಮಕ ದಳ ದವರ ತಂಡ ಭಾಗವಹಿಸಿದ್ದರು.
ವರದಿ .ಪಿ, ಧನುಂಜಯ ಆಚಾರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

