ಹೊಳಲ್ಕೆರೆ ತಾಲ್ಲೋಕಿನಲ್ಲಿ ಶಿಕ್ಷಕರ ದಿನಾಚರಣೆ
ಶಾಲೆಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯೇ ನನ್ನ ಗುರಿ : ಶಾಸಕ ಎಂ ಚಂದ್ರಪ್ಪ
ಹೊಳಲ್ಕೆರೆ : ಶಿಕ್ಷಕರ ಸೇವೆಯ ಗುರುತಿಸಿ ಗೌರವಿಸುವ ದಿನ ಈ ಶಿಕ್ಷಕರ ದಿನಾಚರಣೆ. ತಾಲ್ಲೋಕಿನ ಎಲ್ಲ ಶಾಲೆಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಪಡಿಸಲು ನಾನು ಸಹಕಾರ ನೀಡುತ್ತೇನೆ ಎಂದು ಶಾಸಕರು ಹಾಗು ಕ.ರಾ.ರ.ಸಾ.ಸಂಸ್ಥೆ ಅಧ್ಯಕ್ಷರಾದ ಎಂ.ಚಂದ್ರಪ್ಪ ಹೇಳಿದರು.
ಹೊಳಲ್ಕೆರೆ ತಾಲ್ಲೋಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗು ವಿವಿಧ ಶಿಕ್ಷಕರ ಸಂಘಟನೆಗಳಿಂದ ಸ್ನೇಹಸಪ್ತಪದಿ ಕನ್ವೆಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಕ್ಷಕರ ಕುಂದು ಕೊರತೆಗಳೇನೆ ಇದ್ದರು ಬಗೆಹರಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತದೆ. ನೌಕರರಿಗೆ ಅನುಕೂಲವಾಗಲು ಏಳನೇ ವೇತನ ಆಯೋಗವನ್ನು ಜಾರಿ ಮಾಡಲು ಪ್ರಯತ್ನಿಸುತ್ತದೆ. ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಸದಾ ಶ್ರಮಿಸುತ್ತದೆ. ಎಲ್ಲ ಶಿಥಿಲವಾದ ಶಾಲಾ ಕಟ್ಟಡಗಳ ಕಟ್ಟಲು ನಾನು ಸದಾ ನೆರವು ನೀಡುತ್ತೇನೆ. ಮಕ್ಕಳಿಗೆ ಅನುಕೂಲವಾಗುವ ಬಿಸಿಯೂಟ ಹಾಲು ಪಠ್ಯ ಪುಸ್ತಕ ಸಮವಸ್ತ್ರಗಳನ್ನು ಉಚಿತವಾಗಿ ನೀಡುವ ಮೂಲಕ ಮಕ್ಕಳ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಲು ಸಹಾಯಕವಾಗಿದೆ. ಶಿಕ್ಷಕರ ಶ್ರಮದಿಂದ ನಮ್ಮ ಏಳ್ಗೆ ಇದೆ ಮತ್ತು ಮಕ್ಕಳ ಶ್ರೇಯಸ್ದು ಇದೆ. ನಮ್ಮ ಹೊಳಲ್ಕೆರೆಯ ಅಮೃತಾಪುರ ಶಿಕ್ಷಕ ಉಮೇಶ್ ಕುಗ್ರಾಮದಲ್ಲಿ ಅದ್ವಿತೀಯ ಸಾಧನೆ ಮಾಡಿ ರಾಷ್ಟ್ರ ಮಟ್ಟದಲ್ಲಿ ಹೊಳಲ್ಕೆರೆ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಅವರು ಎಲ್ಲ ಶಿಕ್ಷಕರಿಗೆ ಮಾದರಿ. ಅವರ ಶ್ರಮದಿಂದ ನಮ್ಮ ನಾಡು ಇಂದು ಕೀರ್ತಿ ಹೊಂದಿದೆ. ವಿದ್ಯಾರ್ಥಿಗಳ ಶ್ರೇಷ್ಠತೆಯಲ್ಲಿ ಶಿಕ್ಷಕರ ಶ್ರೇಷ್ಠತೆಯಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಟಿ.ಪಿ.ಉಮೇಶ್ ರವರು ಅಭಿನಂದನೆ ಸ್ವೀಕರಿಸಿ, ನಾನು ಸರ್ಕಾರದ ಸೇವಕ. ಕರ್ನಾಟಕ ಸರ್ಕಾರ ಹಾಗು ಶಿಕ್ಷಣ ಇಲಾಖೆ ನನಗೆ ಶಿಕ್ಷಕ ವೃತ್ತಿ ನೀಡಿದೆ ಅದರ ಘನತೆ ಗೌರವ ಹೆಚ್ಚುವಂತೆ ಸದಾ ದುಡಿಯುತ್ತಿದ್ದೇನೆ. ಯಾವತ್ತು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುವೆ. ಹಳ್ಳಿಗಳ ಅಭಿವೃದ್ಧಿ ಹಾಗು ಮಕ್ಕಳ ಪ್ರಗತಿಗಾಗಿ ಸದಾ ಕೆಲಸ ಮಾಡುವೆ. ರಾಷ್ಟ್ರಪ್ರಶಸ್ತಿಯು ನನ್ನೆಲ್ಲ ಶಿಕ್ಷಕ ವರ್ಗಕ್ಕೆ ಸಂತಸ ತಂದಿದೆ ಅದೇ ನನಗೆ ತೃಪ್ತಿ ಎಂದು ಹೇಳಿದರು.
ಶಿಕ್ಷಕರ ದಿನಾಚರಣೆ ನಿಮಿತ್ತ ನಾಗರಾಜ ಎಂ.ಬಿ. ರವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹೊಳಲ್ಕೆರೆ ತಾಲ್ಲೋಕಿನ ನಿವೃತ್ತ ಶಿಕ್ಷಕರಿಗು ಹಾಗು ತಾಲ್ಲೋಕಿನ ವಿವಿಧ ಕ್ಲಸ್ಟರ್ಗಳ 21 ಉತ್ತಮ ಶಿಕ್ಷಕರಿಗು ಅಭಿನಂದನೆಗಳನ್ನು ಸಲ್ಲಿಸಲಾಯ್ತು.
ಕಾರ್ಯಕ್ರಮದಲ್ಲಿ…….ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಆರ್.ಎ.ಅಶೋಕ್, ಉಪಾಧ್ಯಕ್ಷರಾದ ಕೆ.ಸಿ.ರಮೇಶ್, ಕ.ರಾ.ಸ.ನೌ.ಸಂಘದ ಅಧ್ಯಕ್ಷರಾದ ಲೋಕೇಶ್, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷರಾದ ಶಿವಪ್ಪ, ತಹಸೀಲ್ದಾರ್ ರೇಖಾ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮೃತ್ಯುಂಜಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್. ಶ್ರೀನಿವಾಸ, ಕ್ಷೇತ್ರ ಸಮನ್ವಯಾಧಿಕಾರಿ ಸುರೇಂದ್ರನಾಥ್ ಎಸ್. ಕಾರ್ಯನಿರ್ವಹಣಾಧಿಕಾರಿ ಎಂ
ಗಂಗಣ್ಣ ಮತ್ತು ತಾಲ್ಲೋಕಿನ ಶಿಕ್ಷಕರು ಉಪಸ್ಥಿತರಿದ್ದರು……..

ವರದಿ. ಸುರೇಶ್, ಕೆ, ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
