;

ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ವೀಣಾ ಮಹಾಂತೇಶ್ ಭೇಟಿ : ಸಹಾಯಹಸ್ತ, ಸಾಂತ್ವನ…!!!

ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ವೀಣಾ ಮಹಾಂತೇಶ್ ಭೇಟಿ : ಸಹಾಯಹಸ್ತ, ಸಾಂತ್ವನ.

ಹರಪನಹಳ್ಳಿ : ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನ ಕಡತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಂದ್ಯಾಲ ಮತ್ತು ನಂದ್ಯಾಲ ಕ್ಯಾಂಪ್ ನಲ್ಲಿ ಸುಮಾರು 38 ಮನೆಗಳು ಜಲ ದಿಗ್ಬಂದನವಾಗಿ ಜನ ಜೀವನ ಅಸ್ತವ್ಯಸ್ತವಾದ ಹಿನ್ನೆಲೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ.ವೀಣಾ ಮಹಾಂತೇಶ್ ಚರಂತಿಮಠ ಅವರು ಭೇಟಿ ನೀಡಿ ನೊಂದವರಿಗೆ ಸಹಾಯ ಹಸ್ತ ಚಾಚಿ ಸಾಂತ್ವನ ಹೇಳಿ ಮಾನವೀಯತೆ ಮರೆದಿದ್ದಾರೆ.

ಮಳೆಯಿಂದಾಗಿ ಹಾನಿಗೊಳಗಾದ ಕುಟುಂಬಗಳಿಗೆ ಎಂ.ಪಿ.ವೀಣಾ ಮಹಾಂತೇಶ್ ಅವರು ದಿನಸಿ ಕಿಟ್, ಬೆಡ್ ಶೀಟ್, ಸೀರೆ ಹಾಗೂ ಮನೆ ಬಿದ್ದವರಿಗೆ ತಾಟಪಾಲ್ ಶೀಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿ ಮಹಿಳೆ ವೃದ್ದರೊಂದಿಗೆ ಚರ್ಚಿಸಿ, ತಮ್ಮ ಸಂಕಷ್ಟದ ಸಂದರ್ಭದಲ್ಲಿ ನಾನು ನಿಮ್ಮ ಜೊತೆಗಿರುವೆ ಎಂದು ಭರವಸೆ ನೀಡಿ ಸಾಂತ್ವನ ಹೇಳಿದ್ದಾರೆ.

ನಾವರೆಲ್ಲರೂ ಊರಿನ ಹೊರಗಡೆ ಇರುವ ದೇವಸ್ಥಾನದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಹಾಗೂ ನೀರು ತುಂಬಿದ ಕೊಳಚೆ ಗುಂಡಿಗಳಿಂದ ಸೊಳ್ಳೆಗಳು, ಕಿಟಗಳು, ತುಂಬಿಕೊಂಡಿರುವುದರಿಂದ ಇಲ್ಲಿನ ಚಿಕ್ಕ ಚಿಕ್ಕ ಮಕ್ಕಳಿಗೆ ಡೇಗ್ಯೇ, ಮಲೇರಿಯಾ ಅಂತ ರೋಗಗಳು ಬರುವ ಭೀತಿ ಎದುರಾಗಿದೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಬಡವರ ಬಗ್ಗೆ ಕಾಳಜಿನೆ ಇಲ್ಲ ಮತ್ತು ಜನರ ಜೀವಕ್ಕೆ ಬೆಲೆನೇ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಭೇಟಿ ನೀಡಿದರು ಯಾವ ಪ್ರಯೋಜನ ಆಗಿರುವುದಿಲ್ಲ. ಮನೆಗಳ ಮುಂದೆ ಕೊಚ್ಚಿಯಂತೆ ನಿಂತಿರುವ ಗುಂಡಿಗಳಿಂದ ಮನೆಯ ಒಳಗಡೆ ಹರಿದ ನೀರು ಹೊರಗಡೆ ಹಾಕಲು ಅರಸಹಾಸ ಮಾಡಬೇಕಾಯಿತು ಇಡೀ ರಾತ್ರಿಯಲ್ಲಿ ನೀರಿನಲ್ಲಿ ಜೀವನ ಸಾಗಿಸಿದ್ದೇವೆ ಸರ್ಕಾರಿ ಶಾಲೆಗೆ ಜಂಟಿಯಾಗಿ ಪಕ್ಕದ ಹೊಲದ ಉದ್ದಿಮೆಯೊಬ್ಬರು ಮಳೆಯ ನೀರು ಹೋಗಲು ಯಾವ ತಯಾರಿ ಮಾಡದೇ ಅವೈಜ್ಞಾನಿಕ ಗೋಡೆಯನ್ನು ನಿರ್ಮಿಸರುವುದರಿಂದ ಈ ಅನಾಹುತಕ್ಕೆ ಕಾರಣವಾಗಿದೆ ಕಡತಿ ಪಂಚಾಂಯಿತಿಯ ಅಧಿಕಾರಿಗಳು ಉದ್ದಮೆಗೆ ಕುಮ್ಮಕ್ಕು ಇರುವುದರಿಂದ ಈ ಗ್ರಾಮದ ಜನರನ್ನು ನಿರ್ಲಕ್ಷಿಸಿದ್ದರೆ. ಈ ಸಂಬಂಧ ಗ್ರಾಮದ ಜನರು ಗ್ರಾಮ ಪಂಚಾಯತಿ ಮುತ್ತಿಗೆ ಹಾಕಿದರು ಯಾವುದೇ ಪ್ರಯೋಜನ ಆಗಿರುವುದಿಲ್ಲ ಎಂದು ಗ್ರಾಮದ ನಿವಾಸಿಯಾದ ಮಂಜಮ್ಮ ತಮ್ಮ ಅಲಳನ್ನು ತೋಡಿಕೊಂಡಿದ್ದಾರೆ.

ತಹಶೀಲ್ದಾರ್ ಅವರ ಗಮನಕ್ಕೆ ತಂದಾಗ ಅವರು ಇಲ್ಲಿ ನಡೆದಿರುವ ಅವಘಡ ನಮ್ಮ ಗಮನಕ್ಕೆ ಬಂದಿರುವುದಿಲ್ಲ ಇದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ನಮ್ಮ ಅಧಿಕಾರಿಗಳನ್ನು ಕಳುಹಿಸಿ ಅಲ್ಲಿನ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳಿಗೆ ಸುಚಿಸುತ್ತೇನೆ ಎಂದು ಹೇಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಅನೇಕ ಗ್ರಾಮದ ಯುವಕರು , ಮಹಿಳೆಯರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;