ಶ್ರೀ ಬ್ರಹ್ಮ ನಾರಾಯಣ ಗುರು ಜಯಂತಿ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ
ಗಡಿಗ್ರಾಮ ಹಿರೇಕುಂಬಳಗುಂಟೆಯ ಸ.ಹಿ.ಪ್ರಾ.ಶಾಲೆಯಲ್ಲಿ 164 ನೇ ನಾರಾಯಣ ಗುರು ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶ್ಯಾಮಸುಂದರ ಸಪಾರೆ ಮಾತನಾಡಿ
ನಾರಾಯಣ ಗುರುಗಳು ಒಬ್ಬ ಸಮಾಜ ಸುಧಾರಕರು. ಗುರುಗಳು ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದರು.
ಇವರು ಪ್ರತಿಪಾದಿಸಿದ ತತ್ವಗಳೆಂದರೆ
ಒಂದೇ ಜಾತಿ.ಒಂದೇ ಮತ. ಒಂದೇ ದೇವರು.ಎಂಬ ಸತ್ಯ ವಾಕ್ಯವನ್ನು ಇಡೀ ಜಗತ್ತಿಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ನೀವು ನಾರಾಯಣ ಗುರುಗಳ ಜೀವನ ಚರಿತೆಯನ್ನು ವಿದ್ಯಾಭ್ಯಾಸ ಮಾಡುವುದರ ಮೂಲಕ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಿ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕರುಗಳಾದ ಮಂಜುನಾಥ್, ಬಸವರಾಜ,ರೂಪ,ಶಾರದ,ಹನುಮಂತರಡ್ಡಿ,ರಫೀಕ್,ಶರಣಯ್ಯ ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಸದಸ್ಯರುಗಳ ಸೇರಿದಂತೆ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು..

ವರದಿ. ಕೆ. ಎಸ್. ವಿರೇಶ್ ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
