ಹಾಲಸಾಗರ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ಕೂಡ್ಲಿಗಿ ತಾಲೂಕಿನ ಹಾಲಸಾಗರ ಗ್ರಾಮದಲ್ಲಿ 2021 22ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನ ಅಡಿಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಹಡಗಲಿ ಉಪ ವಿಭಾಗ ಕೂಡ್ಲಿಗಿ ಇವರ ಅಡಿಯಲ್ಲಿ ಹಾಲಸಾಗರ ಮುಖ್ಯ ರಸ್ತೆಯಿಂದ ರಾಂಪುರ ಕಡೆಗೆ ರಸ್ತೆ ಅಭಿವೃದ್ಧಿ ಅಂದಾಜು ಮೊತ್ತ 75 ಲಕ್ಷಗಳು ಹಾಗೂ ಮಹದೇವಪುರ ರಸ್ತೆಯಿಂದ ರಾಂಪುರ ಕಡೆಗೆ ರಸ್ತೆ ಅಭಿವೃದ್ಧಿ ಅಂದಾಜು ಮೊತ್ತ 90 ಲಕ್ಷಗಳು, ಮತ್ತು ಮತ್ತು ಚಂದ್ರಶೇಖರಪುರ ದಿಂದ ಸಿಡೇಗಲ್ಲು ವರೆಗೂ ರಸ್ತೆ ಅಭಿವೃದ್ಧಿಗೆ ಮತ್ತು ಡಾಂಬರೀಕರಣ ಅಂದಾಜು ಮೊತ್ತ 190.00 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಆಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಶಾಸಕ ಎನ್.ವೈ ಗೋಪಾಲಕೃಷ್ಣ ಅವರು ಚಾಲನೆ ನೀಡಿದರು. ಹಾಗೂ ಗುಡೆಕೋಟೆ ಕೆರೆಗೆ ಮತ್ತು ರಾಮದುರ್ಗ ಕೆರೆಗೆ ಬಾಗಿನ ಅರ್ಪಿಸಿದರು. ಮಾತನಾಡಿದರು ಅನಿರೀಕ್ಷತವಾಗಿ ಕ್ಷೇತ್ರಕ್ಕೆ ಬಂದ ನನ್ನನ್ನು ಈ ಕ್ಷೇತ್ರದ ಜನರ ಗೆಲ್ಲಿಸಿದ್ದಾರೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಈಗಾಗಲೇ ಸಾಕಷ್ಟು ಅನುದಾನ ತಂದಿದ್ದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ನಿಮ್ಮೆ ವಿಶ್ವಾಸವನ್ನು ಮತ್ತೊಮ್ಮೆ ಉಳಿಸಿಕೊಳ್ಳುವೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು. ಕ್ಷೇತ್ರದಲ್ಲಿ ಈಗಾಗಲೇ ಕೆರೆ ತುಂಬಿಸುವ ಯೋಜನೆ ಮುಕ್ತಾಯ ಹಂತದಲ್ಲಿದೆ. ಅಲ್ಲದೆ ಮಿನಿ ವಿಧಾನ ಸೌಧ, ಪಟ್ಟಣ ಪಂಚಾಯ್ತಿ ಕಟ್ಟಡಗಳನ್ನು ಶೀಘ್ರದಲ್ಲಿಯೇ ಉದ್ಘಾಟನೆ ಮಾಡಲಾಗುವುದು.

ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಶಾಲಾ, ಕಾಲೇಜು ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ರಸ್ತೆ, ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುವ ಮೂಲಕ ಗ್ರಾಮಾಂತರ ಪ್ರದೇಶದಲ್ಲಿಯೂ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಇಇ ದೇವದಾಸ್, ಕಾರ್ಯನಿರ್ವಾಹಕ ಇಂಜಿನಿಯರ್ ಗಳಾದ ನೀರಾವರಿ ಇಲಾಖೆಯ ಅಂಜನೇಯ, ಜಿಲ್ಲಾ ಪಂಚಾಯತಿ ಇಂಜಿನಿಯರ್ ವಿಭಾಗದ ಮಲ್ಲಿಕಾರ್ಜುನ, ಬಿಜೆಪಿ ಮುಖಂಡ ಸೂರ್ಯಪಾಪಣ್ಣ, ಟಿ.ಜಿ. ಮಲ್ಲಿಕಾರ್ಜುನ ಗೌಡ ಬಿಜೆಪಿ ಮಂಡಲ ಅಧ್ಯಕ್ಷ ರಾದ ಚೆನ್ನಪ್ಪ. ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್. ಶರಣಗೌಡ. ವೀರನಗೌಡ. ಸೇರಿದಂತೆ ಬಿಜೆಪಿ ಮುಖಂಡರು, ಸಾರ್ವಜನಿಕರು ಇದ್ದರು..

ವರದಿ. ವಿರೇಶ್. ಕೆ. ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
