ಪೋಷಣ ಮಾಸಾಚರಣೆ ಪೌಷ್ಟಿಕ ಆಹಾರ ಮತ್ತು ಮಾತೃವಂದನಾ ಸಪ್ತಾಹ ಕಾರ್ಯಕ್ರಮ.
ಕಾನಹೊಸಹಳ್ಳಿ :- ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ಎ. ಬಿ.ಸಿ ಮತ್ತು ಕುಲುಮೆಹಟ್ಟಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರು ಒಟ್ಟಾಗಿ ಸೇರಿ ಪೋಷಣ ಮಾಸಾಚರಣೆ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಮಾತೃ ವಂದನಾ ಸಪ್ತಹ ಕಾರ್ಯಕ್ರಮ ಆಯೋಜಿಸಲಾಗಿತ್ತು,
ಗರ್ಭಿಣಿ ಬಾಣಂತಿ ಹಾಗೂ ಮಕ್ಕಳಿರುವ ಮನೆಗೆ ಸರ್ಕಾರದಿಂದ ಸಿಗುವ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥ ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆರ ಪಾತ್ರ ಮುಖ್ಯವಾಗಿದೆ, ಎಂದು ಗ್ರಾಮ ಪಂಚಾಯತಿ ಸದಸ್ಯೆ ಶ್ರೀಮತಿ ನೇತ್ರಮ್ಮ ನುಡಿದರು. ಅವರು ಮಹಿಳಾಮತ್ತುಮಕ್ಕಳಅಭಿವೃದ್ಧಿಇಲಾಖೆ ಶಿಶು ಅಭಿವೃದ್ಧಿ ಯೋಜನೆಗಳ ಸಹಯೋಗದೊಂದಿಗೆ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪೋಷಣ ಮಾಸಾಚರಣೆ ಪೌಷ್ಠಿಕ ಆಹಾರ ಹಾಗೂ ಮಾತೃವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಣ್ಣುಮಕ್ಕಳಿಗೆ ಹದಿಹರೆಯದ ವಯಸ್ಸಿನಲ್ಲಿ ಮದುವೆ ಮಾಡಬಾರದು ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯ ಸ್ಥಿತಿ ದುರ್ಬಲವಾಗುವ ಸಂಭವ ಹೆಚ್ಚು ವಿವಾಹಗಳನ್ನು ತಡೆಗಟ್ಟಲು ಆರೋಗ್ಯ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಮಾತನಾಡಿದರು.
ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಪೌಷ್ಠಿಕ ಆಹಾರ ನೀಡುವುದು ಎಲ್ಲಾ ಪೋಷಕರ ಕರ್ತವ್ಯವಾಗಿದೆ ಎಂದು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ತಪಸಿ ಪೋಷಕರಿಗೆ ತಿಳಿಸಿದರು,
ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರದ ಕೆ ಮಂಜುಳಾ, ಪಾಯಿಮ ಖಾನ್, ಮಂಗಳ ಹಾಗು ಕಾನ ಹೊಸಳ್ಳಿ ದಲಿತ ಯುವ ಮುಖಂಡರಾದ ಮಹಂತೇಶ.ಈ, ಮಂಜುನಾಥ ಎಸ್ಎಂ, ದುರುಗೇಶ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರು ಪೋಷಕರು ಮಕ್ಕಳು ಇತರರಿದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
