ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಿ ವಿಸರ್ಜನೆ ಮಾಡಲಾಯಿತು
ಗಣೇಶ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು
ಕನಹೊಸಹಳ್ಳಿ :- ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮ ಪಂಚಾಯಿತಿಗೆ ಸೇರಿದ ಸಿದ್ದಾಪುರ ಗ್ರಾಮದ ದಲಿತ ಕಾಲೋನಿಯ ಯುವಕರು ಗಣೇಶ ಉತ್ಸವವನ್ನು ಆಚರಿಸಿದರು.
ದಿನಾಂಕ 30 8 2022 ಗಣೇಶ ಚತುರ್ಥಿಯ ದಿನದೊಂದು ಗಣೇಶ ಮೂರ್ತಿಯನ್ನು ಬಹಳ ವಿಜೃಂಭಣೆಯಿಂದ ಸಿದ್ದಾಪುರ ಗ್ರಾಮದ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಗಣೇಶ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಗ್ರಾಮದ ಮಹಿಳೆಯರು ಯುವಕರು ಮಕ್ಕಳುಪೂಜಿಸಿ ಭಕ್ತಿಯಿಂದ ಆರಾಧಿಸಿ ದರು. ಗಣೇಶ ಚತುರ್ಥಿ ದಿನದಿಂದ ಎರಡು ದಿನಗಳ ಕಾಲ ಸಕಲ ಪೂಜಾ ವಿಧಾನ ಪಾಲಿಸಿ ಗಣೇಶನಿಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ಇಟ್ಟು ಸದ್ಯ ಭಕ್ತಿಯಿಂದ ಪ್ರೀತಿ ತೋರಿ ದರು. ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯ ನಂತರ ಗಣೇಶ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳಗಳಿಂದ ಮೆರವಣಿಗೆ ಮಾಡುತ್ತಾ ಗಣೇಶನ ಘೋಷಣೆಗಳನ್ನು ಕೂಗಿದರು. ಸಿದ್ದಾಪುರ ಗ್ರಾಮದ ದಲಿತ ಕಾಲೋನಿಯ ಯುವಕರು ಮಕ್ಕಳು ಮೆರವಣಿಗೆಯಲ್ಲಿ ಹಾಡಿ ಕುಪ್ಪಳಿಸಿ ಹರ್ಷ ವ್ಯಕ್ತಪಡಿಸಿದರು ನಂತರ ಗಣೇಶಮೂರ್ತಿಯನ್ನು ಶಾಂತರೀತಿಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಗಣೇಶನ ವಿಸರ್ಜನೆ ಕಾರ್ಯಕ್ರಮ ನಡೆಸಿದರು. ಈ ವಿಸರ್ಜನಾ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು. ದಲಿತ ಕಾಲೋನಿ ಯುವಕರು ಮಕ್ಕಳು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
