ಎ ಸಿ ಹಳ್ಳಿಯಲ್ಲಿ ಕಿಚ್ಚನ ಹುಟ್ಟು ಹಬ್ಬದ ಹಿನ್ನೆಲೆ ಶಾಲಾ ಮಕ್ಕಳಿಗೆ ನೋಟ್ ಬುಕ್ ಪೆನ್ ವಿತರಿಸಿದ ಅಭಿಮಾನಿಗಳು
ಗುಡೇಕೋಟೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ಬೆಳ್ಳಿಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಜುನ ಚಿನ್ನನಹಳ್ಳಿ ಗ್ರಾಮದಲ್ಲಿ
ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಹುಟ್ಟು ಹಬ್ಬದ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಬುಕ್ ಪೆನ್ ಹಾಗೂ ಸಿಹಿ ವಿತರಿಸಿದರು ಹಾಗೂ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ತಮ್ಮ ನೆಚ್ಚಿನ ನಟ ಕಿಚ್ಚನ ಹುಟ್ಟು ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದರು.
ಶಾಲಾ ಮಕ್ಕಳಿಗೆ ನೋಟ್ ವಿತರಿಸಿದ ಅಭಿನಯ ಚಕ್ರವರ್ತಿ ಸುದೀಪ್ ಅಭಿಮಾನಿಗಳು ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಇನ್ನೂ ಹೆಚ್ಚಿನ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಲಿ ಎಂದು ಮಕ್ಕಳ ಹಾಗೂ ಶಾಲಾ ಸಿಬ್ಬಂದಿ ಪರವಾಗಿ ಸಹಶಿಕ್ಷಕರಾದ ದಿನೇಶ್, ಕೆ.ಮಾಂತಪ್ಪ ಕಿಚ್ಚನ ಅಭಿಮಾನಿಗಳಿಗೆ ಧನ್ಯವಾದಗಳು ತಿಳಿಸಿದರು. ಈ ಸಂದರ್ಭದಲ್ಲಿ ಜಿ.ಜಿ.ಬೋರಯ್ಯ,ಜಿ.ಬಿ.ಪಾಲಯ್ಯ,
ಸಣ್ಣೋಬಯ್ಯ ಬಿ.ಅಜ್ಜಿನೋಬಯ್ಯ,ತಿಪ್ಪೇಶ್ ಮಂಜು,ಜಿ.ಎಸ್ ತಿಪ್ಪೇಸ್ವಾಮಿ ಸೇರಿದಂತೆ ಕಿಚ್ಚನ ಅನೇಕ ಅಭಿಮಾನಿಗಳು ಹಾಜರಿದ್ದರು..

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
