;

ಕೆ.ಆರ್.ಎಸ್.ನಿಂದ ತಾಲೂಕು ಆಸ್ಪತ್ರೆಯಲ್ಲಿ ಲಂಚಾವತಾರ ಬಯಲು…!!!

ಕೆ.ಆರ್.ಎಸ್.ನಿಂದ ತಾಲೂಕು ಆಸ್ಪತ್ರೆಯಲ್ಲಿ ಲಂಚಾವತಾರ ಬಯಲು.

ಸಿಂಧನೂರು : ಅ. 27.ಇಂದು ತುರ್ತು ಚಿಕಿತ್ಸೆ ರೂಮ್ ನಲ್ಲಿ ರೋಗಿಗಳ ಕಡೆಯಿಂದ ಅಕ್ರಮವಾಗಿ ಅಲ್ಲಿನ ಮಹಿಳಾ ಸಿಬ್ಬಂದಿ ಆಶಾರಾಣಿ ಹಾಗೂ ವರ್ಗದವರು 1000 ರೂಪಾಯಿ ನಗದು ಪಡೆದಿರುತ್ತಾರೆ. ಇದನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ತಾಲೂಕು ಪದಾಧಿಕಾರಿಗಳು ಹಾಗೂ ಸದಸ್ಯರು ಹಗಲು ದರೋಡೆಯನ್ನೂ ವಿಡಿಯೋ ಮೂಲಕ ಬಯಲು ಮಾಡಿದ್ದಾರೆ.

ಈ ವಿಡಿಯೋ ಆಧಾರದ ಮೇಲೆ ತಾಲೂಕು ಮುಖ್ಯ ವೈದ್ಯಾಧಿಕಾರಿಗಳ ಗಮನಕ್ಕೆ ಕೆ.ಆರ್.ಎಸ್.ಪಕ್ಷದ ವತಿಯಿಂದ ಮನವಿ ಏನೆಂದರೆ ಇಂತಹ ಹಗಲು ದರೋಡೆಯ ಸಿಬ್ಬಂದಿಗಳನ್ನು ವಜಾ ಮಾಡಿ ತಾಲೂಕು ಆಸ್ಪತ್ರೆಯಲ್ಲಿ ಜನಪರವಾದಂತಹ ಹಾಗೂ ನ್ಯಾಯಪರ ಆಡಳಿತವನ್ನು ಅಲ್ಲಿನ ಸಿಬ್ಬಂದಿಗಳು ನಡೆಸಬೇಕು ಮುಂದಿನ ದಿನಮಾನಗಳಲ್ಲಿ ಇಂತಹ ಅವ್ಯವಸ್ಥೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಿಸುತ್ತದೆ.

ಇದೇ ಸಂದರ್ಭದಲ್ಲಿ 2023 ರ ಸಿಂಧನೂರು MLA ಅಭ್ಯರ್ಥಿ ನಿರುಪಾದಿ ಕೆ.ಗೋಮರ್ಸಿ ಮಾತನಾಡಿ ಈಗಾಗಲೇ ನಮ್ಮ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವಾರು ಲಂಚ ಪಡೆದ ಹಗರಣವು ಬಯಲು ಆಗಿವೆ.ಜೊತೆಗೆ ಅಲ್ಲಿನ ಕೆಲ ಸಿಬ್ಬಂದಿಗಳು ಸಹ ಅಮಾನತ್ತುಗೊಂಡರು. ಅಲ್ಲಿನ ಕೆಲ ಸಿಬ್ಬಂದಿಗಳಿಗೆ ಇನ್ನು ಬುದ್ದಿ ಬಂದಿಲ್ಲ ಜೊತೆಗೆ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಬಹಳ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಹಾಗೇ ತಾಲೂಕಿನಲ್ಲಿ ಸ್ವಚ್ಚ ಪ್ರಾಮಾಣಿಕ ಪ್ರಾದೇಶಿಕ ಜನಪರ ರಾಜಕಾರಣಕ್ಕೆ ಕೆ.ಆರ್.ಎಸ್.ಪಕ್ಷ ಇಂತಹ ಅನ್ಯಾಯ,ಬ್ರಷ್ಟಚಾರವನ್ನ ಬಯಲು ಮಾಡುತ್ತದೆ ಎಂದು ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;