ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೀಳುರಿಮೆ ಬಿಟ್ಟು ಸಾಧನೆಗೆ ಮುಂದಾಗಿ: ಯುವರಾಜ್ ನಾಯ್ಕ್.
ಖಾನಹೊಸಹಳ್ಳಿ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಕೂಡ ಸೂಪ್ತ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ ಉತ್ತಮ ವೇದಿಕೆ ಕಲ್ಪಿಸಿ ಅನಾವರಣಗೊಳಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಕೂಡ್ಲಿಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ್ ನಾಯ್ಕ್ ಹೇಳಿದರು.
ತಾಲೂಕಿನ ಹುರುಳಿಹಾಳ್ ಕ್ಲಸ್ಟರ್ ವ್ಯಾಪ್ತಿಯ ಮೇಗಳ ಕರ್ನಾರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ, ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಖಾಸಗಿ ಶಾಲೆಯ ಮಕ್ಕಳಿಗೆಂತ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಯಾವುದರಲ್ಲಿ ಕಡಿಮೆ. ಇಲ್ಲ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೀಳುರಮೆಯನ್ನು ಬಿಟ್ಟು ಸಾಧನೆಗೆ ಮುಂದಾಗಬೇಕು. ಸಾಧನೆಗೆ ಶಿಕ್ಷಣ ಪ್ರಮುಖ ಅಸ್ತ್ರ ಎಂದ ಅವರು ಪೋಷಕರು ಮಕ್ಕಳ ಕಲೆಗೆ ಪ್ರೋತ್ಸಾಹ ನೀಡಬೇಕು ಆಗ ಮಾತ್ರ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಲು ವಿಶ್ವಾಸ ಮೂಡಲಿದೆ ಎಂದರು.
ಹುರುಳಿಹಾಳ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ತಿಪ್ಪೇರುದ್ರಪ್ಪ ಮಾತನಾಡಿ ಗ್ರಾಮೀಣ ಸೊಗಡನ್ನು ಎತ್ತಿ ತೋರಿಸುವ ಅನೇಕ ಚಟುವಟಿಕೆಗಳು ಇಂದು ಮರೆಯಾಗುತ್ತಿದೆ ಕಲೆ ಸಂಸ್ಕೃತಿ ಜಾನಪದ ಕಲೆ ಗೀತೆ ನೃತ್ಯಗಳಿಗೆ ಪುನಶ್ಚೇತನ ನೀಡುವಂತಹ ಪ್ರತಿಭಾ ಕಾರಂಜಿ ಕೆಲಸ ಮಾಡುತ್ತಿದೆ ಎಂದರು.

ಸಮಾರಂಭದಲ್ಲಿ ಛದ್ಮಾವೇಶ ಅಭಿನಯ ಜಾನಪದ ನೃತ್ಯ ಕಲೆಗಳು ಮಣ್ಣಿನ ಕಲಾಕೃತಿಗಳು ಗಮನ ಸೆಳೆದವು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ್ ನಾಯಕ್ ಬಿ ಆರ್ ಸಿ ಶರಣಪ್ಪ. ಬಿ ಆರ್ ಪಿ ಗಳಾದ ನಾಗರಾಜ್. ರವೀಂದ್ರ. ಬಸವರಾಜ್. ರೇವಣಸಿದ್ದಪ್ಪ .ಜಿನಾಬೀ.ಮಂಜುನಾಥ.ನಾಗಮಣಿ. ಹುರುಳಿಹಾಳ್ ಕ್ಲಸ್ಟರ್ ಸಿ ಆರ್ ಪಿ ಅನುಪಮಾ. ವಿವಿಧ ಕ್ಲಸ್ಟರ್ ಸಿಆರ್ಪಿಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗಳ ಕರ್ನಾರಹಟ್ಟಿ ಶಾಲೆಯ ಮುಖ್ಯ ಗುರುಗಳಾದ ರೇವಣಸಿದ್ದಪ್ಪ ತಿಪ್ಪೇಸ್ವಾಮಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬೋರಣ್ಣ. ಕೆ ಕೆ ಹಟ್ಟಿ ಮುಖ್ಯ ಗುರುಗಳು ಬಸವರಾಜ್ ಸನಾವುಲ್ಲಾ ಸಾಹೇಬ್ ಗೋಣಿಬಸಪ್ಪ ಉತ್ತಂಗಿ ಸಂತೋಷ ಕುಮಾರ. ಸೇರಿದಂತೆ ಊರಿನ ಪ್ರಮುಖರಾದ ಜಿಎಸ್ ಶಿವಣ್ಣ. ಪಾಪಯ್ಯ. ಓಬಯ್ಯ. ಬಸಯ್ಯ. ಯಜಮಾನ್ ಬೋರಯ್ಯ. ಕೋಟಿ ಪಾಪಯ್ಯ. ನಿಂಗಮ್ಮ. ಕನ್ನಿಬೋರಯ್ಯ.ಇತರೆ ಶಿಕ್ಷಕರು ಅಧಿಕಾರಿಗಳು ಸೇರಿದಂತೆ ಪ್ರಾರ್ಥನೆ ಮಹಾಲಕ್ಷ್ಮಿ. ಸ್ವಾಗತ ಗೋಣಿಬಸಪ್ಪ. ಪ್ರಾಸ್ತಾವಿಕ ನುಡಿ ಅನುಪಮಾ ಸಿಆರ್ಪಿ ಹುರುಳಿಹಾಳ್. ನಿರೂಪಣೆ ಎನ್. ಟಿ. ಪ್ರಸನ್ನಕುಮಾರ್. ವಂದನಾರ್ಪಣೆ ಸನಾವುಲ್ಲಾ ಸಾಹೇಬ್ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ವರದಿ:ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
