;

ದಾನ ನೀಡುವ ಕೈಗಳು ಕೊರತೆಯಿಲ್ಲ, ಬಳಸಿಕೊಳ್ಳುವ ಪ್ರಾಮಾಣಿಕರ ಕೊರತೆಯಿದೆ. ನಾಡಗೌಡ….!!!

ದಾನ ನೀಡುವ ಕೈಗಳು ಕೊರತೆಯಿಲ್ಲ, ಬಳಸಿಕೊಳ್ಳುವ ಪ್ರಾಮಾಣಿಕರ ಕೊರತೆಯಿದೆ. ನಾಡಗೌಡ.

ಸಿಂಧನೂರು : ಸಾಮಾಜಿಕ ಸೇವೆ ಸಲ್ಲಿಸುವವರಿಗೆ ತಾಲೂಕಿನಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚು ದಾನ ನೀಡುವ ಕೈಗಳು ತುಂಬಾ ಜನ ದಾನಿಗಳು ಇದ್ದಾರೆ. ಆದರೆ ಅದನ್ನು ಬಳಸಿಕೊಳ್ಳುವ ಪ್ರಾಮಾಣಿಕರ ಕೊರತೆಯಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ನಗರದ ಉಪ್ಪಾರವಾಡಿ ವಾರ್ಡ್ ನಂ. 5 ರಲ್ಲಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಯಚೂರು ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುರು ಸಿದ್ದಯ್ಯಮಠ ಕಾಲೋನಿಯಲ್ಲಿ 2018 -19 ನೇ ಸಾಲಿನ ಕೆಕೆಆರ್ ಡಿಬಿ ಅನುದಾನದಲ್ಲಿ ನಿರ್ಮಿಸಿದ ಎರಡು ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಗಳು ಉತ್ತಮವಾದ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಸಾರ್ವಜನಿಕರ ಸಹಕಾರ ತುಂಬಾ ಮುಖ್ಯ. ಸಣ್ಣಪುಟ್ಟ ಕೆಲಸಗಳಿಗೆ ಎಲ್ಲಾವುದನ್ನೂ ಸರ್ಕಾರದಿಂದ ನಿರೀಕ್ಷೆ ಮಾಡಲಿಕ್ಕೆ ಆಗುವುದಿಲ್ಲ, ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಹೊಂದಾಣಿಕೆಯಿಂದ ಜನರ ಸಂಪರ್ಕದಲ್ಲಿದ್ದು ಅವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ನಂಬಿಕೆ ಉಳಿಸಿಕೊಂಡು ಸರಕಾರದ ಅನುಧಾನದ ಜೊತೆಗೆ ದಾನಿಗಳ ಸಹಕಾರದಿಂದ ಶಾಲೆಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯ. ಶಿಕ್ಷಕರು ಸರಕಾರಿ ವೇತನ ಪಡೆದು ಮನೆಗೆ ಹೋಗುವುದಲ್ಲ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಂದು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ದಿನದಂದು ಉದ್ಘಾಟನೆ ಮಾಡಲು ಅವಕಾಶ ಮಾಡಿಕೊಟ್ಟಿದಕ್ಕೆ ಆಡಳಿತ ಮಂಡಳಿಯವರಿಗೆ ಧನ್ಯವಾದ ತಿಳಿಸಿದರು.

ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವ ಜೊತೆಗೆ ಶಾಲೆಯ ಅಭಿವೃದ್ಧಿಗಾಗಿ ದಾನಿಗಳಿಂದ ದೇಣಿಗೆಯನ್ನು ಸಂಗ್ರಹಿಸಿ ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಗಳಿಗೆ ಏನೂ ಕಡಿಮೆ ಇಲ್ಲಾ ಎನ್ನುವ ರೀತಿಯಲ್ಲಿ ಉತ್ತಮ ಮಟ್ಟದ ಸ್ಮಾರ್ಟ್ ಶಾಲೆಯನ್ನಾಗಿ ಮಾಡಿದ್ದಾರೆ.ಈ ಶಾಲೆ ಇನ್ನೊಂದು ಶಾಲೆಗೆ ಮಾದರಿಯಾಗಲಿ ಎಂದು ಬಿಇಓ ಶರಣಪ್ಪ ವಟಗಲ್ ತಿಳಿಸಿದರು.

ನಗರಸಭೆ ಸದಸ್ಯರಾದ ಹನುಮೇಶ ಕೆ. ಮಾತನಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊದಲು ಗುರು ಸಿದ್ದಯ್ಯ ಮಠದಲ್ಲಿ ಪ್ರಾರಂಭವಾದ ಶಾಲೆ ಮೇಟಿಗೌಡರು ಜಮೀನು ಧಾನ ನೀಡಿದ್ದರಿಂದ ನಗರಸಭೆ ಯಿಂದ ಕೊಠಡಿಗಳನ್ನು ಮಂಜೂರು ಮಾಡಿಸಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇದ್ದಾವೆ. ಶಾಸಕರ ಕೈಯಿಂದಲೇ ಉದ್ಘಾಟನೆ ಮಾಡಿಸಬೇಕು ಅಂದುಕೊಂಡಿದ್ದೆ ಆದರೆ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ದಿನದಂದು ಉದ್ಘಾಟನೆಯಾಗುತ್ತೆ ಅಂದು ಕೊಂಡಿರಲಿಲ್ಲ. ಇಂದು ಉದ್ಘಾಟನೆಯಾಗಿದ್ದು ನಮ್ಮ ವಾರ್ಡಿನ ಜನರ ಭಾಗ್ಯ ಎಂದರು.

ಈ ಸಂದರ್ಭದಲ್ಲಿ ಬಸವರಾಜ ನಾಡಗೌಡ,ರಾಜೇಂದ್ರಕುಮಾರ, ಶೇಖರಗೌಡ,ಹನುಮೇಶ ಗುಡಿ, ಶೋಭಾ ನಾಗರಾಜ, ಸಣ್ಣ ವೀರಭದ್ರಪ್ಪ,ಎಸ್.ಡಿ.ಎಮ್.ಸಿಸದಸ್ಯರು, ಶಾಲೆಯ ಮುಖ್ಯಗುರುಗಳು ಶಿಕ್ಷಕರು, ಪಾಲಕರು ಮಕ್ಕಳು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;