;

ಕಷ್ಟ ಸುಖಗಳ ಮಧ್ಯ ಭವ್ಯ ಭಾರತವನ್ನು ಕಟ್ಟೋಣ – ನಾಡಗೌಡ…!!!

ಕಷ್ಟ ಸುಖಗಳ ಮಧ್ಯ ಭವ್ಯ ಭಾರತವನ್ನು ಕಟ್ಟೋಣ – ನಾಡಗೌಡ.

ಸಿಂಧನೂರು : ಅ.15.ನಾವೆಲ್ಲ ಸ್ವತಂತ್ರ ಭಾರತದಲ್ಲಿ ನೆಲೆಸಿದ್ದೇವೆ. ಕಷ್ಟ ಸುಖಗಳ ಮಧ್ಯ ಭವ್ಯ ಭಾರತವನ್ನು ನಾವೆಲ್ಲರೂ ಕಟ್ಟಬೇಕಾಗಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ಇಂದು ನಗರದ ಮಿನಿ ವಿಧಾನಸೌಧದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ದ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬ್ರಿಟಿಷರು ನಮ್ಮ ದೇಶವನ್ನು 200 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದಾರೆ. ಮಹಾತ್ಮ ಗಾಂಧೀಜಿಯವರು ದೇಶದ ನಾಲ್ಕು ದಿಕ್ಕುಗಳಲ್ಲಿ ಸಂಚರಿಸಿಹಿಂಸೆಯಿಂದ ಯಾವುದು ಗೆಲ್ಲಕಾಗುವುದಿಲ್ಲ ಎಂದು ತಿಳಿದು ಅಹಿಂಸಾ ಮಾರ್ಗದಿಂದ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕರ ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರ್ಯ ಸಿಕ್ಕಿದೆ. ಇಂದು ನಾವೂ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ದಿನ ಆಚರಿಸುತ್ತೇವೆ.100ನೇ ವರ್ಷ ಆಚರಣೆ ಮಾಡುವಷ್ಟರಲ್ಲಿ ದೇಶ ಇನ್ನೂ ಎತ್ತರಕ್ಕೆ ಬೆಳೆಯಲಿ, ನಾಡ ಕಟ್ಟುವಲ್ಲಿ ರೈತ ದೇಶಕ್ಕೆ ಅನ್ನ ಹಾಕುತ್ತಾನೆ, ಶಿಕ್ಷಕರು ಶಿಕ್ಷಣ ನೀಡುತ್ತಾರೆ, ಯೋದರು ಗಡಿ ಕಾಯುತ್ತಾರೆ, ಇವರೆಲ್ಲರಿಂದ ನಾವೂ ದೇಶದಲ್ಲಿ ಶಾಂತಿ ನೆಮ್ಮದಿಯಿಂದ ಒಡಾಡಲೂ ಸಾಧ್ಯವಾಗಿದೆ ಎಂದರು.

ಮಿನಿ ವಿಧಾನಸೌಧ ದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ದಿನದಂದು ತಹಸೀಲ್ದಾರ ಅರುಣ್ ಹೆಚ್ ದೇಸಾಯಿ ರವರು ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಬ್ರಿಟಿಷರ‌ರಿಂದ ನಮಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ ಆದರೆ ಬಡತನದಿಂದ, ಜಾತಿಯತೆಯಿಂದ, ಸ್ವಾತಂತ್ರ್ಯ ಸಿಕ್ಕಿಲ್ಲ,ಮಹಾತ್ಮ ಗಾಂಧಿ, ಭಗತ್ ಸಿಂಗ್, ಝಾನ್ಸಿ ರಾಣಿ, ಚಂದ್ರಶೇಖರ್ ಆಜಾದ್, ಸುಭಾಸ್ ಚಂದ್ರ ಬೋಸ್, ಮೋಹನ್ ದಾಸ್ ಕರಮಚಂದ್ ಗಾಂಧಿ, ಜವಾಹರಲಾಲ್ ನೆಹರು, ಕಿತ್ತೂರ ರಾಣಿ ಚೆನ್ನಮ್ಮ, ಅಲಗಲಿ ಅಬ್ಬಕ್ಕ, ಸುರುಪುರದ ವೆಂಕಟಪ್ಪ ನಾಯಕ ಇನ್ನೂ ಅನೇಕರು ತ್ಯಾಗ ಬಲಿದಾನ ಮಾಡಿದ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ಜನೇವರಿ 26 ಗಣರಾಜ್ಯ ದಿನದಂದು ಅಂಬೇಡ್ಕರ್ ನನ್ನು ನೆನೆಯುತ್ತೇವೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಲ್ಯಾಪ್‌ಟಾಪ್ ವಿತರಣೆ ಮಾಡಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಂ. ದೊಡ್ಡ ಬಸವರಾಜ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮದ್ವರಾಜ ಆಚಾರ್ಯ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಟಿಎಪಿಎಂಸಿ ಅಧ್ಯಕ್ಷ ಮಲ್ಲನಗೌಡ ಬಾದರ್ಲಿ, ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ನಗರಸಭೆ ಸದಸ್ಯರಾದ ದಾಸರಿ ಸತ್ಯನಾರಾಯಣ, ತಾಲೂಕು ಮಟ್ಟದ ಅಧಿಕಾರಿಗಳಾದ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಲಕ್ಷ್ಮೀದೇವಿ, ಸಿ. ಎಸ್ ಪಾಟೀಲ್, ಅನ್ನಪೂರ್ಣ, ಅಶೋಕರಡ್ಡಿ, ಡಾ. ಅಯ್ಯನಗೌಡ, ವೆಂಕಟಪ್ಪ ನಾಯಕ, ಶಿವಮಾನಪ್ಪ, ವಿಜಯ ಎಸ್ ಕೆ, ಶರಣಪ್ಪ ವಟಗಲ್, ಲಿಂಗಪ್ಪ, ಮಲ್ಲಿಕಾಜಮ್ಮ, ಇನ್ನಿತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;