ದಿನಾಂಕ 10/8/2022 ರಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲೂಕು ಘಟಕ ಮತ್ತು ವಕೀಲರ ಸಂಘ ವತಿಯಿಂದ ಹಮ್ಮಿಕೊಂಡಿದ್ದ ಹೋರಾಟ ಮುಖ್ಯ ಉದ್ದೇಶ ಬಾಗೇಪಲ್ಲಿ ಪಟ್ಟಣವನ್ನು ಭಾಗ್ಯನಗರ ಯಂದು (ಮರು ನಾಮಕರಣ) ಕನ್ನಡೀಕರಣ ಮಾಡಬೇಕೆಂದು ನ್ಯಾಯಾಲಯದ ಮುಂಭಾಗದಿಂದ ರ್ಯಲಿ ಮುಖಾಂತರ ಸರ್ಕಾರಿ ಬಸ್ ನಿಲ್ದಾಣ ಮುಂದೆ ಕೆಲವು ಹೊತ್ತು ರಸ್ತೆ ತಡೆ ಮಾಡಿ ತಾಲೂಕು ಕಚೇರಿ ಮುಂದೆ ದಂಡಾಧಿಕಾರಿಗಳಿಗೆ ಮನವಿ ಪತ್ರ ನೀಡುತ್ತಾ ತಾಲೂಕು ಅಧ್ಯಕ್ಷರು *ಬಿಟಿಸಿ ಸೀನಾ* ಮಾತನಾಡುತ್ತಾ ಕರ್ನಾಟಕ ರಾಜ್ಯದಲ್ಲಿ 31 ಜಿಲ್ಲೆಗಳು ಮಾಡಿದ್ದಾರೆ ಬೆಳ್ಳಂದೂರ್ ರನ್ನು ಬೆಂಗಳೂರು, ಬೆಳಗಾಂ ನಗರವನ್ನು ಬೆಳಗಾವಿ, ಗುಲ್ಬರ್ಗ ನಗರವನ್ನು ಕಲಬುರ್ಗಿ ಮರುನಾಮಕರಣ ಮಾಡಿರುತ್ತಾರೆ ಬಾಗೇಪಲ್ಲಿ ಯನ್ನು ಭಾಗ್ಯನಗರ ಎಂದು ಮಾಡಬೇಕೆಂದರು ಹೇಳಿದರು
*ಜಬೀವುಲ್ಲಾ ತಾಲೂಕು ಪ್ರಧಾನ ಕಾರ್ಯದರ್ಶಿ* ಮಾತನಾಡುತ್ತಾ ಪೂರ್ವಕಾಲದಲ್ಲಿ ರಾಜರು, ಪಾಳೇಗಾರರ ಆಳ್ವಿಕೆ ಸಮಯದಲ್ಲಿ ಬಾಗೇಪಲ್ಲಿ ಎನ್ನುವುದು ಅಂದಿನ ಕಾಲಕ್ಕೆ ತಕ್ಕಂತೆ ಸುಮಾರು 50ರಿಂದ 80 ಮನೆಗಳನ್ನು ಹೊಂದಿರುವ ಕಾರಣ ಆಂಧ್ರ ಭಾಷೆಯಲ್ಲಿ *ಪಲ್ಲಿ* ಎಂದು ಕರೆಯುವುದು ವಾಡಿಕೆ ಭಾಷೆಯಲ್ಲಿ ಸರ್ವಸಾಮಾನ್ಯ ಅದರಂತೆ ಬಾಗೇಪಲ್ಲಿ ಯಂದು ಉದಯವಾಗಿದೆ ಇಂದಿನ ಕಾಲಕ್ಕೆ ತಕ್ಕಂತೆ 30000 ಇಂದ 50000 ಜನಸಂಖ್ಯೆಯನ್ನು ಹೊಂದಿರುವ ಬಾಗೇಪಲ್ಲಿ ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿದೆ ಮುಂದಿನ ದಿನಗಳಲ್ಲಿ ನಗರಸಭೆ ಕೂಡ ಆಗಬಹುದು ಅದೇ ರೀತಿಯಾಗಿ ಕರ್ನಾಟಕ ವಿಧಾನಸಭೆಯಲ್ಲಿ ಬಾಗೇಪಲ್ಲಿಯ ಸಮಸ್ಯೆಗಳು ಚರ್ಚೆ ಮಾಡುವಾಗ ಆ ಸಭೆಯಲ್ಲಿ ಇರುವಂತಹ ಉಳಿದ ಶಾಸಕರು ಬಾಗೇಪಲ್ಲಿ ಶಾಸಕರು ಅಂದರೆ ಆಂಧ್ರ ಕಡೆ ಶಾಸಕರು ಎಂದು ಉಳಿಹಿಸಿಕೊಂಡು ಮುಜುಗುರ ಆಗುವ ರೀತಿಯಲ್ಲಿ ಮಾತಾಡಿರುವ ಘಟನೆಗಳು ನಡೆದಿರುತ್ತವೆ ಅದರಿಂದ ಮುಂದಿನ ದಿನಗಳಲ್ಲಿ ಎಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜತೆ ಚರ್ಚೆ ಮಾಡಿ ತೆಲಂಗಾಣ ಮಾದರಿ ಉಗ್ರ ಹೋರಾಟವನ್ನು ಮಾಡುವ ಜೊತೆಗೆ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಮಾಡುವ ಜನಾಂದೋಲನ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತದೆ ಅದೇ ರೀತಿ ಜಿಲ್ಲಾಧಿಕಾರಿ ಕಚೇರಿ ಗಳಿಂದ ನಿಯಮಾನುಸಾರ ಪರಿಶೀಲಿಸಿ ಅವಶ್ಯವಿದ್ದಲ್ಲಿ ಸಾಧಕ- ಬಾದಕಗಳಗೊಂಡಂತೆ ಸವಿವರವಾದ ಸಮಗ್ರ ವರದಿ ನೀಡಲು ವಿಳಂಬ ಧೋರಣೆ ನಿಲ್ಲಿಸಿ ಶೀಘ್ರವಾಗಿ ಭಾಗ್ಯನಗರ ಎಂದು ಅಧಿಕೃತವಾಗಿ ಘೋಷಣೆ ಮಾಡಬೇಕೆಂದು ಹೇಳಿದರು .
ತಾಲೂಕು ಅಧ್ಯಕ್ಷರು ಬಿಟಿಸಿ ಸೀನಾ, ತಾಲೂಕು ಪ್ರಧಾನ ಕಾರ್ಯದರ್ಶಿ ಜಬಿವುಲ್ಲಾ, ವಕೀಲರ ಸಂಘದ ಅಧ್ಯಕ್ಷರು ಮುಸ್ತಕ್ ಮತ್ತು ಪದಾಧಿಕಾರಿಗಳು, ಡಿ ಎನ್ ಕ್ರಿಷ್ಣಾರೆಡ್ಡಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರು, ಎಸ್ ಶ್ರೀನಿವಾಸ್ ಭಾಗ್ಯನಗರ ಹೋರಾಟ ಸಮಿತಿ ಅಧ್ಯಕ್ಷರು, ಅಮರನಾಥ ಸಂಚಾಲಕರು, ನಗರ ಘಟಕ ಸುರೇಶ್ ಬಾಬು, ನ ….ಉಪ ಅಧ್ಯಕ್ಷರು ನಾಗಿ ರೆಡ್ಡಿ, ವಲೀಬಾಷ ,ಸುಧಾಕರ್, ಜಾವೀದ್, ರವಿ ಯಾದವ್ ,ಬಾಬಾ ಫಕ್ರುದ್ದಿನ್,ನೂರುಲ್ಲಾ ಶಾಂತಪ್ಪ,, ನಾಗರಾಜರೆಡ್ಡಿ ಮುತಾದವರು ಭಾಗವಹಿಸಿದರು.

ವರದಿ.ಎಂ. ಕೆ. ಮೂರ್ತಿ. ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
