;

ನಗರಸಭೆ ಸಾಮಾನ್ಯ ಸಭೆ ಪಿಡಬ್ಲ್ಯೂಡಿಗೆ ಕಾಮಗಾರಿಗೆ ಜೆಡಿಎಸ್‌ ಜೈಕಾರ, ಕಾಂಗ್ರೆಸ್‌ನಿಂದ ವಿರೋಧ…!!!

ನಗರಸಭೆ ಸಾಮಾನ್ಯ ಸಭೆ ಪಿಡಬ್ಲ್ಯೂಡಿಗೆ ಕಾಮಗಾರಿಗೆ ಜೆಡಿಎಸ್‌ ಜೈಕಾರ, ಕಾಂಗ್ರೆಸ್‌ನಿಂದ ವಿರೋಧ.

ಸಿಂಧನೂರು: ಅ.06 ತಾಂತ್ರಿಕ ಸಿಬ್ಬಂದಿ ಕೊರತೆ ಆಧಾರವಾಗಿಟ್ಟು ಕೊಂಡು ನಗರೋತ್ಥಾನ ಯೋಜನೆಯ 30 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನ 5 ಕೋಟಿ ರೂ.ಗಳ ಅನುದಾನವನ್ನು ಲೋಕೋಪಯೋಗಿ ಇಲಾಖೆ ಮೂಲಕ ಅನುಷ್ಠಾನಕ್ಕೆ ಮುಂದಾಗಿರುವ ಶಾಸಕ ವೆಂಕಟರಾವ್ ನಾಡಗೌಡರ ಈ ನಡೆಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ನಗರಸಭೆ ಸಭಾಂಗಣದಲ್ಲಿ ಶನಿವಾರ ಸಾಮಾನ್ಯ ಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಮುರ್ತುಜಾ ಹುಸೇನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯು ಆರಂಭವಾಗುತ್ತಿದ್ದಂತೆ ನಗರೋತ್ಥಾನ ಹಾಗೂ ಎಸ್‌ಎಫ್ ಸಿ ವಿಶೇಷ ಅನುದಾನ ಪಿಡಬ್ಲ್ಯೂಡಿ ಇಲಾಖೆಗೆ ವಹಿಸಿದ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪಿತವಾಗುತ್ತಿದ್ದಂತೆ ಶಾಸಕರು ನೀಡಿದ ಕಾಮಗಾರಿಗಳಿಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಟೆಂಡರ್ ಹಂತದಲ್ಲಿದ್ದು, ಈಗ ಅದನ್ನು ವಿರೋಧಿಸುವ ನಿರ್ಣಯ ಸರಿಯಾದ ಕ್ರಮವಲ್ಲ, ಶಾಸಕರು ಕೂಡ ಅಭಿವೃದ್ಧಿಗಾಗಿ ನಗರಸಭೆ ವ್ಯಾಪ್ತಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್‌ನ ಹಿರಿಯ ಸದಸ್ಯ ಜಿಲಾನಿಪಾಷ ಕಾಂಗ್ರೆಸ್ ನ ಸದಸ್ಯರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮುರ್ತುಜಾ ಹುಸೇನ್‌ ನಮ್ಮಲ್ಲಿ ತಾಂತ್ರಿಕ ಶಾಖೆ, ಅಧಿಕಾರಿಗಳಿದ್ದಾರೆ. ನಗರಸಭೆಗೆ ಬಂದಿರುವ ಅನುದಾನ ಏಕೆ ಲೋಕೋಪಯೋಗಿ ಇಲಾಖೆಗೆ ನೀಡಬೇಕು ಎಂದು ಅಸಮಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಸದಸ್ಯ ಡಿ.ಸತ್ಯನಾರಾಯಣ ಮಾತನಾಡಿ ಈ ಕುರಿತಾಗಿ ಶಾಸಕರ ಕಾರ್ಯಾಲಯದಲ್ಲಿ ಶಾಸಕರು ಕರೆದಿದ್ದ ಸಭೆಗೆ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಭಾಗವಹಿಸಿದ್ದರು, ಅಂದೇ ಪಿಡಬ್ಲ್ಯೂಡಿ ಇಲಾಖೆಗೆ ನೀಡುವ ಕುರಿತಂತೆ ನಿರ್ಧರಿಸಿದಾಗ ಏಕೆ ವಿರೋಧಿಸಲಿಲ್ಲ ಎಂದು ಸಭೆಯಲ್ಲಿ ಪ್ರಸ್ಥಾಪಿಸಿದರು.

ಕಾಂಗ್ರೆಸ್‌ನ ಸದಸ್ಯ ಶೇಖರಪ್ಪ ಗಿಣಿವಾರ ಮಾತನಾಡಿ, ನಗರಸಭೆಗೆ ಬರುವ ಅನುದಾನ ಇಲ್ಲಿಯವರೆಗೆ ನಗರಸಭೆಯಿಂದಲೇ ಅನುಷ್ಠಾನ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ನಗರಸಭೆಯಿಂದಲೇ, ಅನುಷ್ಠಾನ ಮಾಡಲಾಗುತ್ತಿದೆ. ನಗರಸಭೆಯಿಂದಲೇ ಕಾಮಗಾರಿ ಅನುಷ್ಠಾನವಾಗಬೇಕು.ಅಭಿವೃದ್ದಿ ವಿಷಯದಲ್ಲಿ ರಾಜಕೀಯ ಮಾಡುವುದು ಸೂಕ್ತವಲ್ಲ ಎಂದರು.

ಇನ್ನೋರ್ವ ಕಾಂಗ್ರೆಸ್ ಸದಸ್ಯ ಹೆಚ್ ಭಾಷಾ ಮಾತನಾಡಿ, ನಗರಸಭೆ ಅಧಿಕಾರಿಗಳಿಗೆ ಎಲ್ಲಾ ವಾರ್ಡಗಳ ಬಗ್ಗೆ ಮಾಹಿತಿ ಇರುತ್ತದೆ. ಸಮಸ್ಯೆಗಳು ಬಂದಾಗ ಜನ ನಮ್ಮನ್ನು ಕೇಳುತ್ತಾರೆ. ಪಿಡಬ್ಲ್ಯೂಡಿ ಇಲಾಖೆಗೆ ಕಾಮಗಾರಿ ವಹಿಸಿದರೆ ನಾವೇನು ಮಾಡುವದು ಎಂದು ಅಸಮಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಸದಸ್ಯರು ಶಾಸಕರ ನಿರ್ಣಯದ ಪರವಾಗಿ ಮಾತನಾಡಿದರೆ, ಕಾಂಗ್ರೆಸ್ ಸದಸ್ಯರು ವಿರೋಧಿಸಿದರು.ಆದರೆ ತಾರ್ಕಿಕ ಅಂತ್ಯ ಕಾಣಲಿಲ್ಲ. ಸಭೆಯ ನಿರ್ಧಾರವೂ ಹೊರ ಬೀಳಲಿಲ್ಲ. ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಒಂದು ನಿರ್ಣಯಕ್ಕೆ ಬರಲಿಲ್ಲಿ ಪಕ್ಷಗಳು ಬೇರೆ ಬೇರೆಯಾದರೂ ನಾವೆಲ್ಲ ಒಂದೆಯಾಗಿದ್ದೇವೆ. ಹೆಚ್ಚು ಚರ್ಚೆ ಮಾಡುವುದೇ ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಸಭೆಯಲ್ಲಿ ಇನ್ನಿತರ ವಿಷಯಗಳ ಕುರಿತಂತೆ ಚರ್ಚಿಸಲಾಯಿತು. ಪೌರಾಯುಕ್ತರು, ಸದಸ್ಯರು. ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;