;

ಐದನೇ ವಾರ್ಡಿನ ಅಂಗನವಾಡಿಯ ಬಿ ಕೇಂದ್ರದಲ್ಲಿ ಓ ಆರ್ ಎಸ್ ಮತ್ತು ಜಿಂಕ್ ಮಾತ್ರೆಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು….!!!

ಈ ದಿನ ಕೂಡ್ಲಿಗಿ ಐದನೇ ವಾರ್ಡಿನ ಅಂಗನವಾಡಿಯ ಬಿ ಕೇಂದ್ರದಲ್ಲಿ ಓ ಆರ್ ಎಸ್ ಮತ್ತು ಜಿಂಕ್ ಮಾತ್ರೆಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಶುಕುರ್ ಇವರು ಈ ಒಂದು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಕ್ಕಳಿಗೆ ಅತಿಸರ ಬೇದಿ ಇರುವ ಮಕ್ಕಳಿಗೆ ಓ ಆರ್ ಎಸ್ ಮತ್ತು ಜಿಂಕ್ ಮಾತ್ರೆಗಳು ಯಾವ ರೀತಿಯಲ್ಲಿ ತೆಗೆದುಕೊಳ್ಳಬೇಕೆಂದು ಮಾಹಿತಿ ನೀಡಿದರು ಹಾಗೆ ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ,ಹೆಚ್ ಐ ಓ ಜಗದೀಶ್ ಸರ್, ಇವರು ಸಹ ಮಾಹಿತಿಯನ್ನು ನೀಡಿ ಓ ಆರ್ ಎಸ್ ಎರಡು ತಿಂಗಳು ಒಳಗಿನ ಮಕ್ಕಳಿಗೆ 5 ಚಮಚ ಮತ್ತು ಎರಡು ತಿಂಗಳಿಂದ ಎರಡು ವರ್ಷದವರೆಗೆ ಇರುವ ಮಕ್ಕಳಿಗೆ ಅರ್ಧ ಲೋಟ ಓ ಆರ್ ಎಸ್ ನೀಡುವುದಾಗಿ ಹೇಳಿದರು ಮತ್ತು ಈ ಸಂದರ್ಭದಲ್ಲಿ ಜೂನಿಯರ್ ಹೆಚ್ ಐ ಓ ರಾಧಾ ಸ್ವಾಮಿ ಸರ್, ಜಮೀಲಾ ಮೇಡಂ ಅಶಾ ಕಾರ್ಯಕರ್ತರಾದ ಲತಾ ಮೇಡಂ ಹಾಗೂ ಸಾವಿತ್ರಿ ಮೇಡಂ ಉಪಸ್ಥಿತರಿದ್ದರು…

ವರದಿ ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;