;

ರಮೇಶಕುಮಾರ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ…!!!

ರಮೇಶಕುಮಾರ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ.

ಸಿಂಧನೂರು : ಅಗಸ್ಟ್ 2.ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಲ್ಲೆ ಮಾಡಿರುವುದನ್ನು ಖಂಡಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ ಮೂಲಕ ತಹಸೀಲ್ದಾರ ಅನುಪಸ್ಥಿತಿಯಲ್ಲಿ ಡೆಪ್ಯುಟಿ ತಹಸೀಲ್ದಾರ ಚಂದ್ರಶೇಖರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಕೋಲಾರದಲ್ಲಿ ಜುಲೈ 29 ರಂದು ಕಾಂಗ್ರೆಸ್ ನ ಕೆ. ಎಚ್. ಮುನಿಯಪ್ಪ ಮತ್ತು ರಮೇಶಕುಮಾರ ರವರ ಎರಡು ಬಣಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆಯುತ್ತಿದನ್ನು ವಿಡಿಯೋ ಮಾಡಲು ತೆರಳಿದ್ದ ಪತ್ರಕರ್ತರನ್ನು ತಳ್ಳಾಡಿ, ಅವರ ಮೇಲೆ ಮಾಜಿ ಸ್ಪೀಕರ್ ರಮೇಶ ಕುಮಾರ ಹಲ್ಲೆ ನಡೆಸಿದ್ದಾರೆ. ಅವರು ಕೂಡಲೇ ಕ್ಷಮೆಯಾಚಿಸಬೇಕು.ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಡಿ. ಎಚ್. ಕಂಬಳಿ ಮಾತನಾಡಿ, ಒಬ್ಬ ಸಾಮಾನ್ಯ ಪ್ರಜೆ ಅಥವಾ ಕಾರ್ಯಕರ್ತ ಹಲ್ಲೆ ಮಾಡಿದ್ದಲ್ಲ ರಮೇಶ ಕುಮಾರ ಅವರು ಸ್ಪೀಕರ್ ಆಗಿದ್ದವರು, ಸಂವಿಧಾನದ ಮೇಲೆ ಗೌರವ ಹೊಂದಿದ್ದವರು,ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆವೆಸಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಉಳಿವಿಗಾಗಿ ,ರಕ್ಷಣೆಗಾಗಿ ಸದಾ ಹೋರಾಡುತ್ತಾರೆ. ಸಮಾಜದ ಅಂಕು-ಡೊಂಕು ತಿದ್ದುವ, ನ್ಯಾಯಪರವಾಗಿ ಸುದ್ದಿ ಮಾಡುವ, ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ನೈಜ ವರದಿ ಮಾಡುವ ಪತ್ರಕರ್ತರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಇದು ಖಂಡನೀಯವಾಗಿದ್ದು. ಅವರು ಕ್ಷಮೆ ಕೇಳಬೇಕು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಪೋಲಿಸ್ ಇಲಾಖೆ ಸುಮೋಟೊ ಕೇಸ್ ದಾಖಲಿಸಬೇಕು. ರಾಜ್ಯದಲ್ಲಿ ಪತ್ರಕರ್ತರ ರಕ್ಷಣೆಗೆ ಸಾಮಾಜಿಕ ಭದ್ರತೆಗೆ, ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ನಂತರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರಭದ್ರಪ್ಪ ಜವಳಗೇರಾ ಮಾತನಾಡಿ, ರಾಜಕೀಯ ನಾಯಕರು ಭಾಷಣಗಳಲ್ಲಿ ಸಂವಿಧಾನದ ನಾಲ್ಕನೇ ಅಂಗ ಪತ್ರಿಕಾರಂಗ ಎಂದು ಬರಿ ಬಾಯಿ ಮಾತಲ್ಲಿ ಭಾಷಣ ಬಿಗಿಯುತ್ತಾರೆ. ಪತ್ರಿಕಾರಂಗಕ್ಕೆ ರಕ್ಷಣೆ ಇಲ್ಲದಂತಾಗಿದ್ದು, ವಸ್ತು ನಿಷ್ಠ ವರದಿ ಮಾಡುವ ವರದಿಗಾರರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದ್ದರೂ ಪತ್ರಕರ್ತರ ರಕ್ಷಣೆಗೆ ಸರಕಾರಗಳು ಮುಂದಾಗಬೇಕು.ರಮೇಶ ಕುಮಾರ ರವರ ಮೇಲೆ ಸುಮೋಟೊ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದರು.

ತಾಲುಕಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶರಣಗೌಡ ಗೋರೆಬಾಳ, ಉಪಾಧ್ಯಕ್ಷರಾದ ಶಿವಪುತ್ರ ಧನಶೆಟ್ಟಿ, ಚಂದ್ರಶೇಖರ ಯರದಿಹಾಳ, ಪತ್ರಕರ್ತರಾದ ಚಿದಾನಂದ ದೊರೆ, ಯಮನಪ್ಪ ಪವಾರ್, ಶ್ಯಾಮ ಕುಮಾರ, ಪ್ರಹ್ಲಾದ ಗುಡಿ,ಅಶೋಕ ಬೆನ್ನೂರ, ದುರಗೇಶ, ಚಂದ್ರಶೇಖರ ಬೆನ್ನೂರ, ನಾಗರಾಜ ಬೋಮ್ಮನಾಳ, ಶಿವರಾಜ ಗೋರೆಬಾಳ, ಅಂಬಣ್ಣ, ದುಗ್ಗಪ್ಪ ಮಲ್ಲಾಪೂರು, ಬೀರಪ್ಪ, ಬಂದೆನವಾಜ, ವಿಜಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;