ಬೆಳ್ಳಕಟ್ಟೆಯಲ್ಲಿ ವಿವಿಧ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬೆಳ್ಳಕಟ್ಟೆ ಗ್ರಾಮದಲ್ಲಿ ಶ್ರೀ ಮರುಳಸಿದ್ದೇಶ್ವರ. ಶ್ರೀ ಬಸವೇಶ್ವರ ಆಂಜನೇಯ ಸ್ವಾಮಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮತ್ತು ಧಾರ್ಮಿಕ ವಿಧಿ-ವಿಧಾನಗಳನ್ನು ಉಜ್ಜಯಿನಿ ಜಗದ್ಗುರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಭಗವತ್ಪಾದರು ಶಿವಾಚಾರ್ಯರು ಸ್ವಾಮೀಜಿ ಮಾತನಾಡಿ ನಾಡಿಗೆ ಮಳೆ-ಬೆಳೆಯಾಗಲಿ ಸಮೃದ್ಧಿ ಆಗಲಿ ರೈತ ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಬೆಲೆ ದೊರೆತು ರೈತನ ಬಾಳು ಹಸನಾಗಲಿ ನೆಮ್ಮದಿ ಮತ್ತು ಆರೋಗ್ಯ ವೃದ್ಧಿಸಲಿ ಎಂದರು. ಜಗತ್ತಿನಲ್ಲಿ ದೇಹವನ್ನು ಪ್ರೀತಿ ಮಾಡುವ ಜನರಿದ್ದು ಆದರೆ ಜಗತ್ತಿನಲ್ಲಿ ದೇವರನ್ನು ಪ್ರೀತಿ ಮಾಡುವ ದೇಶವೆಂದರೆ ಅದು ನನ್ನ ಹೆಮ್ಮೆಯ ಭಾರತ ಎಂದರು.

ಕಲೆ-ಸಾಹಿತ್ಯ ಸಂಸ್ಕೃತಿ ಸಂಸ್ಕಾರವಂತ ಎಲ್ಲಾ ದೇಶಗಳಿಗಿಂತಲೂ ವಿಭಿನ್ನವಾದ ದೇಶ ಎಂದರೆ ಅದು ಭಾರತ ಎಂದು ಶ್ರೀಗಳು ಆಶೀರ್ವದಿಸಿದರು.
ಉಜ್ಜಯಿನಿ ಪೀಠ ಕುಗ್ರಾಮಕ್ಕೆ ಹಲವಾರು ತಲೆಮಾರುಗಳಿಂದ ವಿಶೇಷವಾದ ನಂಟಿದೆ. ರಾಜ್ಯದ ಮೂಲೆ ಮೂಲೆಗಳಲ್ಲೂ ಊರಿಗೊಂದು ಮರುಳಸಿದ್ದೇಶ್ವರ ದೇವಸ್ಥಾನವಿದೆ ಆದರೆ ತಾಲೂಕಿನಲ್ಲಿ ಉಜ್ಜೇನಿ ಪೀಠಕ್ಕೆ ಹತ್ತಿರವಿರುವ ಗ್ರಾಮ ಬೆಳ ಕಟ್ಟೆಯಲ್ಲಿ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನವಿರುವುದು ಈ ಗ್ರಾಮದ ವೈಶಿಷ್ಟ ವಾಗಿದೆ ಎಂದರು.
ಕಾನಾಮಡಗು ದಾಸೋಹ ಮಠದ ಶ್ರೀ ಐಮಡಿ ಶರಣಾರ್ಯರು. ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ. ಉಪಾಧ್ಯಕ್ಷ ಕೆಎಂ ತಿಪ್ಪೇಸ್ವಾಮಿ. ಹುರುಳಿಹಾಳು ರೇವಣ್ಣ. ಕೋಡಿಹಳ್ಳಿ ಭೀಮಣ್ಣ. ಬಂಗಾರು ಹನುಮಂತು. ಸೂರ್ಯ ಪಾಪಣ್ಣ. ಹುಡೇo ಪಾಪನಾಯಕ. ಟಿ.ಜಿ. ಮಲ್ಲಿಕಾರ್ಜುನಗೌಡ. ಹುಲಿಕೇರಿ ರಮೇಶಗೌಡ. ಗ್ರಾಮದ ಮುಖಂಡರಾದ ಕಲ್ಲೇಶ ಗೌಡ. ಮಂಡಲ ಅಧ್ಯಕ್ಷ ಚೆನ್ನಪ್ಪ.
ಶಾಸಕರ ಆಪ್ತ ಸಹಾಯಕರಾದ ಶ್ರೀಕಾಂತ್ ಹಾಗೂ ಗ್ರಾಮದ ಮುಖಂಡರು ಸಾರ್ವಜನಿಕರು ಭಕ್ತರು ಸೇರಿ ಇತರರು ಉಪಸ್ಥಿತರಿದ್ದರು..

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
