;

ವೀರೇಶ್ ಆಚಾರ್ ಅವರಿಗೆ ಗೌರವ ಡಾಕ್ಟರೇಟ್…!!”

ವೀರೇಶ್ ಆಚಾರ್ ಅವರಿಗೆ ಗೌರವ ಡಾಕ್ಟರೇಟ್.
ಮೂಲತಃ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದವರಾದ ಶ್ರೀಯುತ ಶ್ರೀ ಗೋವಿನಾಳ್ ಬಡಿಗೇರ ವೀರೇಶ್ ಆಚಾರ್ಯ ಪುರೋಹಿತರು (ಅರ್ಚಕರು) ಪ್ರಸ್ತುತವಾಗಿ ದಾವಣಗೆರೆ ಕಾಳಿಕಾ ದೇವಿ ರಸ್ತೆಯಲ್ಲಿರುವ ಕಾಳಿಕಾ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ ಶ್ರೀ ವೀರೇಶ್ ಆಚಾರ್ ಅವರಿಗೆ ಕೊಯಿಮುತ್ತೂರಿನ “ಏಷ್ಯಾ ವೇದಿಕ್ ಕಲ್ಚರಲ್ ಅಕಾಡೆಮಿ” ವತಿಯಿಂದ ಇವರ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು.
ಶ್ರೀಯುತರು 1986 ರಲ್ಲಿ ಈಶಪ್ಪ ಗಂಗಮ್ಮ ಅವರ ಪುತ್ರರಾಗಿ ವಿಜಯನಗರ ಜಿಲ್ಲೆ ಇಟ್ಟಿಗಿ ಗ್ರಾಮದಲ್ಲಿ ಜನಿಸಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುರಾರ್ಜಿ ಶಾಲೆಯಲ್ಲಿ ಮುಗಿಸಿ ನಂತರ ಚನ್ನಪಟ್ಟಣದಲಿ ಶಿಲ್ಪ ಶಾಸ್ತ್ರದ ಅಧ್ಯಯನವನ್ನು ಮುಗಿಸಿ ಅನೇಕ ದೇವರ ಮೂರ್ತಿಗಳನ್ನು ಮಾಡಿದ ಕೀರ್ತಿ ಇವರಿಗೆ ಲಭಿಸಿದೆ.
ನಂತರ ಮೈಸೂರು ಹಾಗು ಇಟ್ಟಿಗಿ ಕಾಳಿಕಾದೇವಿ ದೇವಸ್ಥಾನದಲ್ಲಿ ದೇವಿಯ ಸೇವೆ, ನಂತರ ಚಿಕ್ಕಲೂರಿನ ಸಿದ್ಧಾಪ್ಪಜಿ ಮಠದಲ್ಲಿ ಸಹ ಸೇವೆ ಸಲ್ಲಿಸಿ, ಸುಮಾರು ವರ್ಷಗಳ ಕಾಲ ದಾವಣಗೆರೆ ಕಾಳಿಕಾದೇವಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಚಂಡಿಕಾ ಹೋಮ, ಪ್ರತ್ಯಂಗಿರಾ ಹೋಮ, ಸುದರ್ಶನ ಹೋಮ, ಸೇರಿದಂತೆ ಅನೇಕ ದೊಡ್ಡ ದೊಡ್ಡ ಹೋಮ ಹವನಗಳನ್ನು ಮಾಡಿ, ದಾವಣಗೆರೆಯಲ್ಲಿ ಪ್ರತಿ ವರ್ಷ ವಿಶ್ವ ಕರ್ಮ ಸಮಾಜದ ವತಿಯಿಂದ ನಡೆಸುವ ವಿಶ್ವಕರ್ಮ ಜಯಂತೋತ್ಸವ,ಸಾಮೂಹಿಕ ಉಪನಯನ, ವಿವಾಹಗಳನ್ನು ಮಾಡುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ.
ಕಾಳಿಕಾದೇವಿ ಶನೇಶ್ವರ ದೇವರು ಹಾಗೂ ಇತರೆ ದೇವರುಗಳ ಪ್ರತಿಷ್ಠಾಪನೆ ಮಾಡುವ ಮೂಲಕ ಸೇವೆ ಸಲ್ಲಿಸಿದ್ದಾರೆ. ಇವರ ಸರಳ ಹಾಗೂ ಸಜ್ಜನಿಕೆಯ ಸೇವೆಯನ್ನು ಗುರುತಿಸಿ ವೇದಬ್ರಹ್ಮ ಪ್ರಶಸ್ತಿ, ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಗಿದೆ.
ಇವರ ಈ ಸಾಧನೆಗೆ ತಾಯಿ ಗಂಗಮ್ಮ ಪತ್ನಿ ರಾಜೇಶ್ವರಿ ಮತ್ತು ಕುಟುಂಬದ ಪ್ರೋತ್ಸಾಹ ಹೆಚ್ಚಿನದಾಗಿದೆ. ಎಂದು ಅವರು ಪತ್ರಿಕೆಉ ಮೂಲಕ ಹೇಳಿದರು.
ದಾವಣಗೆರೆ ಜಿಲ್ಲಾ ವಿಶ್ವಕರ್ಮ ಸಮಿತಿ ವತಿಯಿಂದ ಶ್ರೀಯುತರಿಗೆ ಗೌರವಿಸಿ ಸನ್ಮಾನಿಸಲಾಯಿತು. ಅಪಾರ ಬಂಧುಗಳು ಹಾಗೂ ಅಪ್ತರು ಇವರ ಸಾಧನೆಗೆ ಶುಭಾಶಯ ಕೋರಿದ್ದಾರೆ…

ವರದಿ. ಪ್ರಕಾಶ್, ಆಚಾರ್, ಇಟ್ಟಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;