;

ದಶಕದ ನಂತರ ಪುನರಾರಂಭಗೊಂಡ ಚಿತ್ರಮಂದಿರ…!!!

ದಶಕದ ನಂತರ ಪುನರಾರಂಭಗೊಂಡ ಚಿತ್ರಮಂದಿರ

ಕಾನಹೊಸಹಳ್ಳಿ: ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಚಿತ್ರಮಂದಿರ ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ಈಗ ಮತ್ತೆ ಪುನಃ ಆರಂಭಗೊಂಡಿದ್ದ ರಿಂದ ಚಿಕ್ಕಜೋಗಿಹಳ್ಳಿ ಸುತ್ತಮುತ್ತಲಿನ ಜನರಿಗೆ ಸಂತೋಷವೇ ಸಂತೋಷ. ಗುರುವಾರ ಆರಂಭಗೊಂಡಿದ್ದು ನಟ ಸುದೀಪ್ ಅಭಿನಯದ ವಿಕ್ರಂತ್ ರೋಣ ಚಿತ್ರ ಪ್ರದರ್ಶನದಿಂದ ಪ್ರಾರಂಭವಾಯಿತು. ಈ ಚಿತ್ರಮಂದಿರವನ್ನು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಡಿ ದೇವರಾಜ ಅರಸು ಅವರ ಆಸಕ್ತಿ ಮತ್ತು ಚಿಕ್ಕಜೋಗಿಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರಾಜ್ಯವೇ ತಲೆಯೆತ್ತಿ ನೋಡುವಂತೆ ಮಾಡಿದ ಚಿಕ್ಕಜೋಗಿಹಳ್ಳಿ ಗ್ರಾಮದ ರೂವಾರಿಗಳಾದ ದಿವಂಗತ ಶ್ರೀ ವೆಂಕಟಸ್ವಾಮಿ ಅವರ ಶ್ರಮದಿಂದ 70ರ ದಶಕದಲ್ಲಿ ಚಲನಚಿತ್ರ ನಟರಾದ ಉದಯಕುಮಾರ್, ಬಾಲಕೃಷ್ಣ, ನರಸಿಂಹರಾಜ್ ಹಾಗೂ ಚಿತ್ರನಟಿ ಲೀಲಾವತಿಯವರು ಚಿತ್ರ ಮಂದಿರವನ್ನು ಶಂಕುಸ್ಥಾಪನೆ ನೆರವೇರಿಸಿದರು. ಚಿತ್ರ ನಟಿ ಭಾರತಿ ಹಾಗೂ ಆಗಿನ ಮುಖ್ಯಮಂತ್ರಿಗಳಾದ ಶ್ರೀ ದೇವರಾಜ ಅರಸು ಎಪ್ಪತ್ತರ ದಶಕದಲ್ಲಿ ಸಿನಿಮಾ ಮಂದಿರಕ್ಕೆ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು. ಸುಮಾರು ದಶಕಗಳ ಕಾಲ ಸ್ಥಗಿತಗೊಂಡಿದ್ದ ಚಿತ್ರಮಂದಿರ ಉತ್ತಮವಾದ ಗಾಳಿ. ಸುಸಜ್ಜಿತವಾದ ವಾತಾವರಣ ಒಂದಿದ್ದು ಹೈಟೆಕ್ ಚಿತ್ರಮಂದಿರ ವಾಗಿದೆ. ಸಿನೆಮಾ ನೋಡಬೇಕು ಎನಿಸಿದಾಗ ಜಗಳೂರು ದಾವಣಗೆರೆ ಚಿತ್ರದುರ್ಗಕ್ಕೆ ಹೋಗಬೇಕಾಗಿತ್ತು ಚಿಕ್ಕಜೋಗಿಹಳ್ಳಿ ಗ್ರಾಮೀಣ ಭಾಗದಲ್ಲಿ ಚಿತ್ರಮಂದಿರ ವಾಗಿರುವುದರಿಂದ ಬೇರೆ ಕಡೆಗೆ ಸಿನಿಮಾಕ್ಕೆ ಹೋಗದೆ ಸಿನಿಮಾ ನೋಡಬೇಕು ಎನಿಸಿದಾಗ ಚಿಕ್ಕಜೋಗಿಹಳ್ಳಿ ಗ್ರಾಮಕ್ಕೆ ಬಂದು ನೋಡಬಹುದು ಎಂದು ಗ್ರಾಮೀಣ ಭಾಗದ ಜನರು ಮಾತನಾಡುತ್ತಿದ್ದಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;