ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಸಿರಿಧಾನ್ಯ ಆಹಾರ ಕೀಟ್ ವಿತರಣೆ.
*ಗುಡೇಕೋಟೆ*: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಅನೇಕ ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರು ಬಡವರ ಪಾಲಿನ
ಸಂಜೀವಿನಿಯಾಗಿದ್ದಾರೆ,ಎಂದು ಕೂಡ್ಲಿಗಿ ತಾಲ್ಲೂಕು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ತಾಲೂಕು,ಯೋಜನಾಧಿಕಾರಿಗಳಾದ ಸಂತೋಷ್
ಅವರು ಹೇಳಿದರು.

ತಾಲೂಕಿನ ಗುಡೇಕೋಟೆ ಸಮೀಪದ ಅಪ್ಪೇನಹಳ್ಳಿ ತಾಂಡ ದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರನ್ನು ಗುರುತಿಸಿ ತಿಂಗಳಿಗೆ 3 ಕೆಜಿ ಪೌಷ್ಟಿಕ ಆಹಾರವನ್ನು ನಿರ್ಗತಿಕರಿಗೆ ಹಾಗೂ ವೃದ್ಧರಿಗೆ ಸುಮಾರು ಹದಿನೈದು ದಿನಗಳಾಗುವಷ್ಟು ಅಪ್ಪೆನಹಳ್ಳಿ ತಾಂಡದ ನಿರ್ಗತಿಕ ಮಹಿಳೆ ಚೌಳಿಬಾಯಿ,ಯವರಿಗೆ ಸಿರಿಧಾನ್ಯ ಪೌಷ್ಟಿಕ ಆಹಾರ 20 ದಿನಸಿ ಕಿಟ್ ಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ರಾಜ್ಯಾದ್ಯಂತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳ ಮೂಲಕ ಸರ್ಕಾರ ಮಾಡುವ ನಾನಾ ಕೆಲಸಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಾಡುತ್ತಿದೆ. ಕೆರೆ ಹೂಳೆತ್ತುವುದು, ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ನಾನಾ ಯೋಜನೆ, ಮಧ್ಯಪಾನ ಸೇರಿದಂತೆ ದುಶ್ಚಟಗಳನ್ನು ಬಿಡಿಸುವ ವಿನೂತನ ಕಾರ್ಯಕ್ರಮ,ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ನಾನಾ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು,ಈ ಗ್ರಾಮೀಣಾಭಿವೃದ್ಧಿ ಯೋಜನೆ ರಾಜ್ಯದಲ್ಲೇ ಮಾದರಿಯಾಗಿದೆ ಎಂದು ಕೂಡ್ಲಿಗಿ ತಾಲೂಕು ಯೋಜನಾಧಿಕಾರಿ ಸಂತೋಷ್ ಹೇಳಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕು ಯೋಜನಾಧಿಕಾರಿ ಸಂತೋಷ್.ಗುಡೇಕೋಟೆ ವಲಯ ಮೆಲ್ವೀಚಾರಕರಾದ ಜ್ಯೋತಿ ಗುಡಿ.ಅಪ್ಪೇನಹಳ್ಳಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳಾದ ಆರ್.ಸಿ.ವಿಶ್ವನಾಥ್.ಬೋರಯ್ಯನಹಟ್ಟಿ ಮದಕರಿ ಸಿದ್ದೇಶ್. ಸೇರಿದಂತೆ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
