;

ಇಟ್ಟಿಗಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಾವತಿ ಮಹಾಬಲೇಶ್ವರ ಅವಿರೋಧವಾಗಿ ಆಯ್ಕೆ….!!!

ಇಟ್ಟಿಗಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಾವತಿ ಮಹಾಬಲೇಶ್ವರ ಅವಿರೋಧವಾಗಿ ಆಯ್ಕೆ. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿ ಗೆ ಅಧ್ಯಕ್ಷರಾಗಿ ಪುಷ್ಪಾವತಿ ಗಂಡ ಮಹಾಬಲೇಶ್ವರ ರವರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ ಎಂದು ದಿನಾಂಕ 30/07/2022ರಂದು ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ್ದ ಹಡಗಲಿ ತಹಸೀಲ್ದಾರ್ ಆದ ಶ್ರೀಮತಿ ಶರಣಮ್ಮ ರವರು ಅಧಿಕೃತವಾಗಿ ಘೋಷಿಸಿ ಶಾಲು ಹಾರಗಳನ್ನು ಹಾಕಿ ಅಭಿನಂದಿಸಿದರು ನಂತರ ಚುನಾವಣೆ ಪ್ರಕ್ರಿಯೆಯನ್ನು ಶಾಂತಿಯುತವಾಗಿ ನೆಡಿಸಿಕೊಟ್ಟ ತಹಸೀಲ್ದಾರ್ ಮೇಡಂ ರವರಿಗೆ ಗ್ರಾ ಪಂ ವತಿಯಿಂದ ಅಭಿನಂದಿಸಲಾಯಿತು…. ನೂತನ ಅಧ್ಯಕ್ಷರಿಗೆ ಉಪಾಧ್ಯಕ್ಷರಾದ ಮದ್ದಾನಸ್ವಾಮಿ ಯವರು, ಸದಸ್ಯರುಗಳು ಹಾಗೂ ಇಟ್ಟಿಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಯುತ ಮಾದೂರ್ ಪ್ರಕಾಶ್ ಹಾಗೂ ಇಟ್ಟಿಗಿ ಗ್ರಾಮದ ಗಣ್ಯಮಾನ್ಯರಿಂದ ಶಾಲು ಹಾರಗಳನ್ನು ಹಾಕುವ ಮೂಲಕ ಅಭಿನಂದಿಸಿ, ಶುಭ ಹಾರೈಸಿದರು.ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಕಾರ್ಯಕರ್ತರು,ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತಿಯಲ್ಲಿದ್ದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;