ಪತ್ರಕರ್ತರ ಜಲ್ವಂತ ಸಮಸ್ಯಗೆ ಸ್ಪಂಧಿಸುವೆ, ವಿಧಾನಸಭೆಯ ಉಪ ಸಭಾಧ್ಯಕ್ಷರು ಆನಂದ್ ಮಾಮನಿ.

ನಿನ್ನೆ ಅಂದರೆ ದಿನಾಂಕ:-24/7/2022 ರಂದು ಬೆಳಗಾವಿ ಜಿಲ್ಲಾ ಯರಗಟ್ಟಿ ನಗರದ ಷಾದಿ ಮಹಲ್ ನಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಬೆಳಗಾವಿ ಜಿಲ್ಲೆಯ ಯರಗಟ್ಟಿ ಹಾಗೂ ಸವದತ್ತಿ ತಾಲೂಕು ಘಟಕಗಳ ಪತ್ರಿಕಾ ದಿನಾಚರಣೆಯ ಉದ್ಗಾಟನೆಯನ್ನು ವಿಧಾನಸಭೆಯ ಉಪ ಸಭಾಧ್ಯಕ್ಷರಾದ ಆನಂದ ಮಾಮನಿ ನೆರವೇರಿಸಿದರು, ಸಾನಿಧ್ಯವನ್ನು ಮುನವಳ್ಳಿ ಸೋಮಶೇಖರ ಮಠದ ಶ್ರೀಮುರಘೇಂದ್ರ ಮಹಾಸ್ವಾಮಿಗಳು ಹಾಗೂ ಯರಗಟ್ಡಿ ರಾಜರಾಜೇಶ್ವರಿ ಆಶ್ರಮದ ಶ್ರೀಗಣಪತಿ ಮಹಾರಾಜರು ವಹಿಸಿದ್ದರು, ಅಧ್ಯಕ್ಷತೆಯನ್ನು ಯರಗಟ್ಟಿ ಕಾನಿಪ ಧ್ವನಿ ತಾಲೂಕಾಧ್ಯಕ್ಷರಾದ ಫಿರೋಜ್ ಖಾದ್ರಿ, ಮುಖ್ಯ ಅತಿಥಿಗಳಾಗಿ ಶಾಸಕರಾದ ಸತೀಶ್ ಜಾರಕಿಹೊಳಿ, ಕೆ.ಎಸ್.ಪಿ.ಎಸ್.ಕಮಾಂಡಂಟ್ 2 ನೇ ಬೆಟಾಲಿಯನ್ ಕೆ.ಎಸ್.ಆರ್.ಪಿ. ಬೆಳಗಾವಿಯ ಹಂಜಾ ಹುಸೇನ್, ಮುರುಗೋಡ ಸರ್ಕಲ್ ಇನ್ಸ್ ಪೆಕ್ಟರ್ ನನ್ನ ಆತ್ಮೀಯರಾದಂತ ಮೌನೇಶ್ವರ ಮಾಲಿಪಾಟೀಲ್ ಹಾಗೂ ಇನ್ನೀತರ ಗಣ್ಯಾತಿ ಗಣ್ಯರು ವಹಿಸಿದಂತ ಈ ಸಮಾರಂಭದಲ್ಲಿ ಇನ್ನೂರಕ್ಕೂ ಅಧಿಕ ಪತ್ರಕರ್ತರು ಬೆಳಗಾವಿ ಜಿಲ್ಲೆಯ ಬಹುತೇಕ ತಾಲೂಕುಗಳಿಂದ ಆಗಮಿಸಿದಂತ ಪತ್ರಕರ್ತರುಗಳಿಗೆ ಪ್ರತಿಜ್ಞಾ ವಿಧಿಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಬೋಧಿಸಿದರು. ಇದೇ ಸಂದರ್ಭದಲ್ಲಿ ಇಲ್ಲಿನ ಶಾಸಕರು ಹಾಗೂ ವಿಧಾನಸಭಾ ಉಪಸಭಾಧ್ಯಕ್ಷರಾದ ಆನಂದ್ ಮಾಮನಿ ಯವರು ಮಾತನಾಡಿ ,ನಿಮ್ಮ ರಾಜ್ಯಾಧ್ಯಕ್ಷರು ಬಂಗ್ಲೆ ಯವರು ಪ್ರತಿಜ್ಞಾ ವಿಧಿಯಲ್ಲಿ ತಮ್ಮೆಲ್ಲರಿಗೂ ಪ್ರಮಾಣ ಬೋಧನೆಯಲ್ಲಿ ತಿಳಿಸಿದಂತೆ ಸನ್ಮಾರ್ಗದಲ್ಲಿ ಸಾಗಿ ನಾಲ್ಕನೇ ಅಂಗವಾದ ಪತ್ರಿಕಾರಂಗವನ್ನು ಉಳಿಸಬೇಕೆಂದರು.ಪತ್ರಕರ್ತರ ಸೌಲಭ್ಯ ಕುರಿತಂತೆ ತಾವುಗಳು ಲಿಖಿತ ಅರ್ಜಿಯ ಮೂಲಕ ಮನವಿ ನೀಡಿದರೆ, ನಾನು ಪ್ರಮಾಣಿಕವಾಗಿ ಸರ್ಕಾರದಿಂದ ಪತ್ರಕರ್ತರಿಗೆ ದೊರೆಯ ಬೇಕಾದಂತ ಸೌಲಭ್ಯಕ್ಕೆ ಹೆಚ್ಚಿನ ಶಕ್ತಿ ಮೀರಿ ಸಹಕರಿಸುತ್ತೇನೆ ಎಂದು ತುಂಬಿದ ಸಭೆಗೆ ತಿಳಿಸಿದ್ದು ಪತ್ರಕರ್ತರಿಗೆ ಸಂತೋಷವಾಗಿದೆ.

ಅದೇ ರೀತಿ ಶಾಸಕರಾದ ಸತೀಶ್ ಜಾರಕಿಹೊಳಿ ಯವರು ಸಹ ಯಾವುದೇ ತಮ್ಮ ಕಷ್ಟ ಸುಖಕ್ಕೂ ನಾನು ತಮ್ಮೊಂದಿಗೆ ಸದಾ ಜೊತೆ ಇರುತ್ತೇನೆ ಹಾಗೂ ಸಮಾಜದ ಅಂಕು ಡೊಂಕು ತಿದ್ದುತ್ತಾ ಯಾರೇ ತಪ್ಪು ಹಾದಿ ಹಿಡಿದಂತ ಸಂದರ್ಭದಲ್ಲಿ ಅವರನ್ನು ಸರಿ ದಾರಿಗೆ ತರುವಂತ ಕಾರ್ಯ ತಮ್ಮಿಂದಾಗಬೇಕು ಎಂದು ಈ ಸಂದರ್ಭದಲ್ಲಿ ಪತ್ರಕರ್ತರನ್ನುದ್ದೇಶಿಸಿ ಹೇಳಿದರು…

ವರದಿ.ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
